ಚಿಕ್ಕಮಗಳೂರು: ಭಾತರದ ಸಂಸ್ಕೃತಿ, ಇಲ್ಲಿನ ಆಚಾರ ವಿಚಾರಗಳು ವಿದೇಶಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದು, ಇಸ್ರೇಲ್‌ನ(Isrel) ವಿದ್ಯಾರ್ಥಿಗಳು ಸಂಸ್ಕೃತ(Sanskrit )ಕಲಿಯಲು ಕಾಫಿನಾಡಿಗೆ ಆಗಮಿಸಿ ಸಂಸ್ಕೃತ ಅಭ್ಯಾಸದಲ್ಲಿ ತೊಡಗಿದ್ದಾರೆ.
ಸಂಸ್ಕೃತ ಕಲಿಕೆಗೆ ಇಸ್ರೇಲ್ ದೇಶದ ವಿದ್ಯಾರ್ಥಿಗಳು ನಗರ ವ್ಯಾಪ್ತಿಯ ಹಿರೇಮಗಳೂರು ಕೋದಂಡರಾಮಚಂದ್ರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಇಸ್ರೇಲ್‌ನಲ್ಲಿ ಸಂಸ್ಕೃತದಲ್ಲೇ ಪಿಎಚ್.ಡಿ ಪದವಿ ಪಡೆದ ಉಪನ್ಯಾಸಕ ರಫಿ ತಮ್ಮ ಆರು ಮಂದಿ ವಿದ್ಯಾರ್ಥಿಗಳೊಂದಿಗೆ ಆಗಮಿಸಿ ಸಂಸ್ಕೃತ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಆರು ಮಂದಿ ವಿದ್ಯಾರ್ಥಿಗಳು ಇಸ್ರೇಲ್‌ನಲ್ಲಿ ಎರಡನೇ ವರ್ಷದ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಭಾರತದ ಸಂಸ್ಕೃತ, ಭಾಷೆ, ಆಚಾರ-ವಿಚಾರ ತಿಳಿಯುವುದಕ್ಕಾಗಿ ಉಪನ್ಯಾಸಕ ರಫಿ ಅವರೊಂದಿಗೆ ವಿದ್ಯಾರ್ಥಿಗಳಾದ ಇಲಿಲ್, ಜಿವ್, ಶೌಲ್, ಮಾಯಾ, ನಾವಿ, ನದಾರ್ವ್ ಕಾಫಿನಾಡಿಗೆ ಒಂದಿಳಿದಿದ್ದು, 12 ದಿನಗಳ ಕಾಲ ಸಂಸ್ಕೃತ ಅಭ್ಯಾಸ ನಡೆಸಲಿದ್ದಾರೆ.
ವಾಲ್ಮೀಕಿ ರಾಮಾಯಣ ಮಹಾಕಾವ್ಯದ ಸುಂದರಕಾಂಡದ ಕೆಲ ಶ್ಲೋಕಗಳನ್ನು ಕಲಿಯುತ್ತಿದ್ದಾರೆ. ಸಂಸ್ಕೃತಲದಲ್ಲೇ ಮಾತನಾಡು ವಷ್ಟು ಸಾಮರ್ಥ್ಯವನ್ನು ಬೆಳೆಸಿಕೊಂಡಿರುವ ವಿದ್ಯಾರ್ಥಿಗಳು ನಾವು ಜಗತ್ತಿನ ಯಾವುದೇ ದೇಶಕ್ಕೆ ಹೋದರೆ ಒಂದೆರಡು ರೀತಿಯ ರೂಢಿ-ಸಂಪ್ರದಾಯವನ್ನು ನೋಡಬಹುದು. ಆದರೆ, ಭಾರತದಲ್ಲಿ ಮಾತ್ರ ನೂರಾರು ಕಲೆ, ಸಂಸ್ಕೃತಿಯನ್ನು ಕಲಿಯೋಕೆ ಸಾಧ್ಯ ವೆಂದು ಭಾರತಕ್ಕೆ ಬಂದಿದ್ದೇವೆ ಎನ್ನುತ್ತಾರೆ.
ಎರಡು ದಿನದಿಂದ ಸಂಸ್ಕೃತ ಕಲಿಯುತ್ತಿರುವ ಇವರು ಆರಂಭದಲ್ಲಿ ಸಂಸ್ಕೃತದೊಂದಿಗೆ ಇಂಗ್ಲೀಷ್ ಬಳಸುತ್ತಿದ್ದರು. ಆದರೆ, ಈಗ ಸಂಪೂರ್ಣವಾಗಿ ಸಂಸ್ಕೃತದಲ್ಲೇ ಮಾತನಾಡುವಷ್ಟು ಸಮರ್ಥರಾಗಿದ್ದಾರೆ, ಇದರ ಜತೆಗೆ ವಿದ್ಯಾರ್ಥಿಗಳು ಭಾರತದ ಭವ್ಯ ಪರಂ ಪರೆಯಲ್ಲಿ ಭಾವಪರವಶರಾಗಿರುವುದು ಹೆಮ್ಮೆ ವಿಚಾರವೆಂದು ಶಿಕ್ಷಕ ವೈಷ್ಣವ್ ಹೇಳುತ್ತಾರೆ.