Advertisement

‘ವಿದ್ಯಾರ್ಥಿಗಳು ಕನಸು ಸಾಕಾರಗೊಳಿಸಿ’

01:40 PM Jan 04, 2018 | Team Udayavani |

ಬಂಟ್ವಾಳ: ಇಂದಿನ ಪ್ರಜೆಗಳೇ ಮುಂದಿನ ಜನಾಂಗ. ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಲು ಕನಸನ್ನು ಕಾಣಬೇಕು ಹಾಗೂ ಆ ಕನಸನ್ನು ಸಾಕಾರಗೊಳಿಸುವಲ್ಲಿ ಸತತ ಪ್ರಯತ್ನ ಪಡಬೇಕು ಎಂದು
ಎಸ್‌ಸಿಡಿಸಿಸಿ ಬ್ಯಾಂಕ್‌ ವಿಶ್ರಾಂತ ಮ್ಯಾನೇಜಿಂಗ್‌ ಡೈರೆಕ್ಟರ್‌ ನಾರಾಯಣ್‌ ಕಾಮತ್‌ ಹೇಳಿದರು.

Advertisement

ಅವರು ಜ. 3ರಂದು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಬಂಟ್ವಾಳ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ ‘ಸಿದ್ಧಾಂತ್‌- 2017’ ಇದರ 2ನೇ ಹಂತದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಇದನ್ನು ಆಯೋಜಿಸಿದ್ದು, ತಾಲೂಕಿನ 7 ಪ.ಪೂ. ಕಾಲೇಜಿನ 1,680 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು 2 ಹಂತಗಳಲ್ಲಿ ಆಯೋಜಿಸಲಾಗಿತ್ತು ಮೊದಲ ಹಂತವನ್ನು ಆಯಾ ಪ.ಪೂ. ಕಾಲೇಜಿನಲ್ಲಿ
ಆಯೋಜಿಸಿ, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗೋಲ್ಡನ್‌ ಟಿಕೆಟ್‌ ಟು ಸಿದ್ಧಾಂತ್‌ ನೀಡಲಾಯಿತು. ಅಂತಿಮ
ಹಂತದಲ್ಲಿ 7 ಪ.ಪೂ. ಕಾಲೇಜಿನ 42 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಮೂಡಿಬರಲಿ ಎಂದು ಆಶಿಸಿದರು.

Advertisement

ಕಾರ್ಯಕ್ರಮದ ಸಂಯೋಜಕಿ ಅಖಿಲಾ ಪೈ ಮತ್ತು ವಿದ್ಯಾರ್ಥಿ ಸಂಯೋಜಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಯೋಜಕ ಶ್ರೀಕಾಂತ್‌ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ನಾಯಕಿ ಮಹಾಲಸಾ ಆರ್‌. ಬಿ. ನಾಯಕ್‌ ವಂದಿಸಿದರು. ಪೂಜಾಶ್ರೀ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next