Advertisement

ಪೆನ್‌ಚಾಕುವಿನಿಂದ ಇರಿದು ವಿದ್ಯಾರ್ಥಿ ಕೊಲೆ: ಆರೋಪಿಗಳ ಬಂಧನ

01:44 PM Aug 18, 2022 | Team Udayavani |

ಬೆಂಗಳೂರು: ಇತ್ತೀಚೆಗೆ ಡ್ಯಾನ್ಸ್‌ ಮಾಡುವ ವಿಚಾರಕ್ಕೆ ವಿದ್ಯಾರ್ಥಿಯೊಬ್ಬನ ಕೊಲೆಗೈದ ಪ್ರಕರಣ ಸಂಬಂಧ ಕೆ.ಜಿ.ಹಳ್ಳಿ ಪೊಲೀಸರು ಆರು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

Advertisement

ಆರೋಪಿಗಳ ವಿಚಾರಣೆ ಯಲ್ಲಿ ಪೆನ್‌ಚಾಕು ಬಳಸಿ ಕೊಲೆಗೈದಿರುವುದು ಬೆಳಕಿಗೆ ಬಂದಿದೆ. ಎಚ್‌ಬಿಆರ್‌ ಲೇಔಟ್‌ನ ಕಾಲೇಜೊಂದರ ವಿದ್ಯಾರ್ಥಿ, ಶಾಂಪುರ ನಿವಾಸಿ ಮೊಹಮ್ಮದ್‌ ಸಾದ್‌(20), ಹೊರಮಾವು ನಿವಾಸಿ ಸಫಾನುಲ್ಲಾಖಾನ್‌(20), ಜೈನುಲ್ಲಾಖಾನ್‌(19), ಕೆ.ಜಿ.ಹಳ್ಳಿಯ ಸೈಯದ್‌ ಫೈಸಲ್‌ (19), ಅನಾಸ್‌ಖಾನ್‌(20) ಮತ್ತು ಜೈದ್‌ಖಾನ್‌ (19) ಬಂಧಿತರು. ಆರೋಪಿಗಳು ಆ.11ರಂದು ಎಚ್‌ಬಿಆರ್‌ ಲೇಔಟ್‌ ಸಮೀಪ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೊಹಮ್ಮದ್‌ ಅರ್ಬಾಜ್‌ (18)ನನ್ನು ಕೊಲೆಗೈದಿದ್ದರು.

ಆ.10ರಂದು ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಮಾಡುವ ವಿಚಾರಕ್ಕೆ ಅರ್ಬಾಜ್‌, ಹಿರಿಯ ವಿದ್ಯಾರ್ಥಿ ಮೊಹಮ್ಮದ್‌ ಸಾದ್‌ ಮಧ್ಯೆ ಜಗಳವಾಗಿದೆ. ಈ ವೇಳೆ ಕೆರಳಿದ ಆರೋಪಿ, ಶುಕ್ರವಾರ ಹೊರಗಿನ ಏಳೆಂಟು ಮಂದಿ ಹುಡುಗರನ್ನು ಕರೆತಂದು ಕಾಲೇಜು ಮುಗಿಸಿ, ಮಸೀದಿಗೆ ಹೋಗಿ ವಾಪಸ್‌ ಮನೆಗೆ ಹೊರಟ್ಟಿದ್ದ ಅರ್ಬಾಜ್‌ ಜತೆ ಗಲಾಟೆ ಮಾಡಿ, ಬಳಿಕ ಅರ್ಬಾಜ್‌ಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ: Boycott ಎಫೆಕ್ಟ್: 7 ದಿನದಲ್ಲಿ 50 ಕೋಟಿ ರೂ. ಗಳಿಸಲು ವಿಫಲವಾದ “ಲಾಲ್ ಸಿಂಗ್ ಚಡ್ಡಾ”

ಆನ್‌ಲೈನ್‌ನಲ್ಲಿ ಚಾಕು ಖರೀದಿ

Advertisement

ಆರೋಪಿ ಪೈಕಿ ಮೊಹಮ್ಮದ್‌ ಸಾದ್‌ ವೈಯಕ್ತಿಕ ಕಾರಣಗಳ ರಕ್ಷಣೆಗಾಗಿ ಆನ್‌ಲೈನ್‌ನಲ್ಲಿ ಈ ಹಿಂದೆಯೇ ಪೆನ್‌ಚಾಕು ಖರೀದಿಸಿದ್ದ. ಯಾವಾಗಲೂ ತನ್ನೊಂದಿಗೆ ಇಟ್ಟುಕೊಂಡು ಓಡಾಡುತ್ತಿದ್ದ. ಜಗಳದ ದಿನ ಕೂಡ ತನ್ನೊಂದಿಗೆ ಪೆನ್‌ ಚಾಕು ಇಟ್ಟುಕೊಂಡಿದ್ದ ಆರೋಪಿ, ಅದು ವಿಕೋಪಕ್ಕೆ ಹೋದಾಗ ಅದರಿಂದಲೇ ಅರ್ಬಾಜ್‌ ಕೊಲೆಗೈದಿದ್ದಾನೆ. ಅಲ್ಲದೆ, ಇತರೆ ಆರೋಪಿಗಳು ಕೂಡ ಅದೇ ಪೆನ್‌ ಚಾಕು ಪಡೆದು ಅರ್ಬಾಜ್‌ಗೆ ಐದಾರು ಬಾರಿ ಇರಿದು ಕೊಲೆಗೈದಿದ್ದಾನೆ ಎಂದು ಪೊಲೀಸರು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next