Advertisement

ಶಾಲಾ ಆರಂಭೋತ್ಸವ, ಎಲ್ಲೆಡೆ ಹಬ್ಬದ ಸಡಗರ

06:35 AM May 29, 2018 | |

ಬೆಂಗಳೂರು: ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಸೋಮವಾರದಿಂದ ಅಧಿಕೃತವಾಗಿ ಆರಂಭವಾಯಿತು. ದಿನಪೂರ್ತಿ ಶೈಕ್ಷಣಿಕ ಚಟುವಟಿಕೆಯ ಜತೆ ಜತೆಗೆ ಕ್ರೀಡೆ, ಚರ್ಚೆ, ರಸ ಪ್ರಶ್ನೆ, ಸಂವಾದ…ಹೀಗೆ ವಿನೂತನ ಕಾರ್ಯಕ್ರಮಗಳು ಮೊದಲ ದಿನ ನಡೆದವು.

Advertisement

ಶಾಲಾ ಆರಂಭೋತ್ಸವದ ಹಿನ್ನೆಲೆಯಲ್ಲಿ ಬಹುತೇಕ ಕಡೆ ಶಾಲಾವರಣವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಸ್ವತ್ಛತೆ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಮೊದಲ ದಿನ ಶಾಲೆಗೆ ಬಂದ ಮಕ್ಕಳಿಗೆ ಬಿಸಿಯೂಟದ ಜತೆಗೆ ಕೆಲವೆಡೆ ಸಿಹಿ ವಿತರಿಸಲಾಯಿತು. ರಾಜ್ಯ ಬಿಜೆಪಿ ಸೋಮವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರೂ, ರಾಜ್ಯದ ಬಹುತೇಕ ಕಡೆ ಶಾಲೆಗಳು ನಡೆದವು.

ಪೋಷಕರೆ ಗಮನಿಸಿ,ಸೋಮವಾರದಿಂದ ಶಾಲೆಗಳು ಆರಂಭವಾಗಿದ್ದು, ಬಹುತೇಕ ಪೋಷಕರು ಶಾಲಾ ಮಕ್ಕಳನ್ನು ವಾಹನದಲ್ಲಿ ಕಳುಹಿಸುತ್ತಾರೆ. ಹೀಗಾಗಿ, ಮಕ್ಕಳನ್ನು ಕರೆದೊಯ್ಯುವ ವಾಹನಗಳು ಮತ್ತು ಅವುಗಳಲ್ಲಿ ಅಳವಡಿಸಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ನಿಮಗೆ ಅರಿವಿರಲಿ.

ಸುಪ್ರೀಂಕೋರ್ಟ್‌ ಆದೇಶದಂತೆ ಮಕ್ಕಳನ್ನು ಕರೆದೊಯ್ಯುವಾಗ ಶಾಲಾ ಬಸ್ಸುಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಆರ್‌ಟಿಒ ಮೂಲಕ ನಿರ್ದೇಶನ ನೀಡಲಾಗಿದೆ.

– ಶಾಲಾ ಬಸ್ಸಿನ ಹಿಂಭಾಗ ಹಾಗೂ ಮುಂಭಾಗದಲ್ಲಿ ಕಡ್ಡಾಯವಾಗಿ ಶಾಲಾ ಬಸ್ಸು ಎಂದು ಬರೆದಿರಬೇಕು.
– ವಿದ್ಯಾಸಂಸ್ಥೆಗಳು ಶಾಲಾ ಬಸ್ಸಿನ ವ್ಯವಸ್ಥೆ ಕಲ್ಪಿಸಿದ್ದರೆ ಬಸ್ಸು ಶಾಲಾ ಕರ್ತವ್ಯದಲ್ಲಿದೆ ಎಂಬ ಮಾಹಿತಿಯನ್ನು ಪ್ರದರ್ಶಿಸಬೇಕು.
– ನಿಗದಿಪಡಿಸಿದ ಆಸನಗಳಿಗಿಂತ ಹೆಚ್ಚು ಆಸನಗಳನ್ನು ಅಳವಡಿಸಬಾರದು.
– ಬಸ್‌ಗಳು ಪ್ರಥಮ ಚಿಕಿತ್ಸಾ ಬಾಕ್ಸ್‌ನ್ನು ಹೊಂದಿರಬೇಕು.
– ಕಿಟಕಿಗಳಿಗೆ ಕಬ್ಬಿಣದ ಸರಳುಗಳನ್ನು ಅಳವಡಿಸಿರಬೇಕು.
– ಬಸ್‌ಗಳು ಅಗ್ನಿಶಮನ ಉಪಕರಣ ಹೊಂದಿರಬೇಕು.
– ಶಾಲೆಯ ಹೆಸರು ಹಾಗೂ ದೂರವಾಣಿ ಸಂಖ್ಯೆ ಬರೆದಿರಬೇಕು.
– ಬಾಗಿಲುಗಳು ಸಮರ್ಪಕ ಲಾಕ್‌ ಹೊಂದಿರಬೇಕು.
– ಚಾಲಕರು 5 ವರ್ಷಗಳ ಘನ ವಾಹನ ಚಾಲನಾನುಭವ ಹೊಂದಿರಬೇಕು ಹಾಗೂ ಸಂಚಾರ ನಿಯಮ ಉಲ್ಲಂಘಿಸಿದ ದಾಖಲೆ ಹೊಂದಿರಬಾರದು.
– ಸೀಟುಗಳ ಕೆಲಭಾಗದಲ್ಲಿ ಶಾಲಾ ಬ್ಯಾಗ್‌ಗಳನ್ನು ಇರಿಸಲು ವ್ಯವಸ್ಥೆ ಇರಬೇಕು.
– ಬಸ್ಸುಗಳಲ್ಲಿ ಶಾಲಾ ಬೆಂಗಾವಲು ಇರಬೇಕು ಹಾಗೂ ಶಿಕ್ಷಕರೋರ್ವರು ಸುರಕ್ಷತಾ ಕ್ರಮವನ್ನು ಪರಿಶೀಲನೆ ನಡೆಸಬೇಕು.
– ಮಕ್ಕಳ ರಕ್ತ ಮಾದರಿಯ ಮಾಹಿತಿ ಇರಬೇಕು.
ಖಾಸಗಿ ವಾಹನಗಳು ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸಬೇಕಾದರೆ;
– ಮೋಟಾರು ವಾಹನ ಕಾಯಿದೆ 1988 ಕಲಂ 74ರ ಪ್ರಕಾರ ವಾಹನ ರಹದಾರಿ ಹೊಂದಿರಬೇಕು.
– ವಾಹನದ ಆಸನ ಸಾಮರ್ಥ್ಯ 12+1 ಮೀರಬಾರದು. ನಿಗದಿತ ಆಸನ ಸಾಮರ್ಥ್ಯ ಬದಲಾವಣೆ ಮಾಡಿರಬಾರದು.
– ಅನುಮೋದಿತ ಸ್ಪೀಡ್‌ ಗವರ್ನರ್‌ ಅಳವಡಿಸಿದ್ದು, ವೇಗಮಿತಿ ಕಿ.ಮೀ.40ಕ್ಕೆ ನಿಯಂತ್ರಿತವಾಗುವಂತೆ ಇರಬೇಕು.
– ವಾಹನವು ನೋಂದಣಿ ದಿನಾಂಕದಿಂದ 15 ವರ್ಷ ಮೀರಿರಬಾರದು.
– ವಾಹನಕ್ಕೆ ಹೆದ್ದಾರಿ ಹಳದಿ ಬಣ್ಣ ಬಳಿದಿರಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next