Advertisement

ಹಾಸ್ಟಲ್‌ ಊಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

12:01 PM Aug 09, 2017 | Team Udayavani |

ಹುಣಸೂರು: ನಗರದ ಮೆಟ್ರಿಕ್‌ ನಂತರದ ಪ.ಜಾತಿ/ಜನಾಂಗದ ವಸತಿ ನಿಲಯದಲ್ಲಿ ಊಟ ಮಾಡಿದ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳವಾರ ನಡೆದಿದೆ. ವಸತಿನಿಲಯದಲ್ಲಿ ಕಲುಷಿತ ನೀರು ಸೇವನೆಯಿಂದ ರವಿ ಮತ್ತು ನವೀನ್‌ ಸೇರಿದಂತೆ ನಾಲ್ವರು ರಾತ್ರಿ ಊಟದ ನಂತರ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದರು,

Advertisement

ವಾರ್ಡನ್‌ಗೆ ವಿಷಯ ತಿಳಿಸಿದರೂ ಬಂದು ನೋಡಲಿಲ್ಲ ಆದ್ದರಿಂದ ತೀವ್ರ ಜ್ವರದಿಂದ ಬಳಲುತ್ತಿರುವವರನ್ನು 108 ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ದು ಹುಣಸೂರು ಸಾರ್ವಜನಿಕ ಆಸ್ಪತೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಕೊಡಿಸುತ್ತಿದ್ದೇವೆಂದು ಹಾಸ್ಟೆಲ್‌ ವಿದ್ಯಾರ್ಥಿ ದೀಪು ಉದಯವಾಣಿಗೆ ತಿಳಿಸಿದರು.

ವಿದ್ಯಾರ್ಥಿಗಳ ಪ್ರತಿಭಟನೆ: ಈ ಘಟನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ವಾರ್ಡನ್‌ ಮತ್ತು ಇಲಾಖೆ ವಿರುದ್ಧ ಘೋಷಣೆ ಮೊಳಗಿಸಿದರು. ವಿದ್ಯಾರ್ಥಿ ಮುಖಂಡ ದಿಲೀಪ್‌ ಮಾತನಾಡಿ, ಹಾಸ್ಟೆಲ್‌ನಲ್ಲಿ ಅಗತ್ಯ ಮೂಲಸೌಕರ್ಯಗಳಿಲ್ಲ,

ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ವಸತಿನಿಲಯದಲ್ಲಿ ವಿಪರೀತ ಸೊಳ್ಳೆಗಳ ಕಾಟವಿದ್ದು, ಡೆಂಘೀ, ಚಿಕುನ್‌ ಗುನ್ಯಾ, ಮಲೇರಿಯಾದಂತಹ ಜ್ವರದ ಭಯ ನಮ್ಮನ್ನು ಕಾಡುತ್ತಿದೆ. ವಾರ್ಡನ್‌ನ ಬೇಜವಾಬ್ದಾರಿಯಿಂದ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ನೀಡುತ್ತಿಲ್ಲ. ನಮ್ಮ ಆರೋಗ್ಯ ಹಾಳಾಗುತ್ತಿದೆ, ಕೇಳುವವರು ಯಾರಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಸ್ಟೆಲ್‌ನ ಅವ್ಯವಸ್ಥೆಗಳ ಬಗ್ಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಸಮಾಜ ಕಲ್ಯಾಣಾಧಿಕಾರಿ ಹೊನ್ನೇಗೌಡ, ಹಾಸ್ಟೆಲ್‌ನಲ್ಲಿನ ಕೆಲ ಮೂಲಸೌಕರ್ಯಗಳ ಕೊರತೆ ಕುರಿತಂತೆ ತಮಗೆ ಮಾಹಿತಿಯಿದ್ದು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಿದ್ದೇನೆ.

Advertisement

ಆಸ್ಪತ್ರೆಗೆ ದಾಖಲಾಗಿರುವವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು, ಇಲ್ಲಿನ ವಾರ್ಡ್‌ನ್‌ ನಡವಳಿಕೆ ಕುರಿತು ಪರಿಶೀಲಿಸಿ ಸೂಕ್ತ ಕ್ರಮಕೆಗೊಳ್ಳುವುದಾಗಿ ನೀಡಿದ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಮುಖಂಡರಾದ ರವಿ, ರಾಮು, ಕುಮಾರ್‌, ಪ್ರವೀಣ್‌ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next