Advertisement

ವಿದ್ಯಾರ್ಥಿನಿ ಕಾವ್ಯಾ ಸಾವು ನಿಷ್ಪಕ್ಷಪಾತ ತನಿಖೆಗೆ ಎಬಿವಿಪಿ ಆಗ್ರಹ

07:30 AM Aug 03, 2017 | Team Udayavani |

ಕುಂದಾಪುರ: ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟು, ಕಾವ್ಯಾ ಅವರ ನಿಗೂಢ ಸಾವಿನ ಕುರಿತು ನಿಷ್ಪಕ್ಷಪಾತವಾದ ತನಿಖೆಗೆ ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ಅಖೀಲಭಾರತೀಯ ವಿದ್ಯಾರ್ಥಿ ಘಟಕ ಆಗ್ರಹಿಸಿ ಪ್ರತಿಭಟನೆ ನಡೆಸಿತು.

Advertisement

ಮಂಗಳವಾರ ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ಎಬಿವಿಪಿ ಘಟಕದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕುಂದಾಪುರ ಮಿನಿ ವಿಧಾನಸೌಧದ ತನಕ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್‌ ಅವರಿಗೆ ಮನವಿ ಅರ್ಪಿಸಿದರು.
ಕಾವ್ಯಾ ಸಾವು ಹಲವಾರು ಗೊಂದಲಗಳನ್ನು ಹುಟ್ಟು ಹಾಕಿದ್ದು, ಆ ಬಗ್ಗೆ ಸರಿಯಾದ  ತನಿಖೆ ನಡೆಸಿ  ಪ್ರಕರಣದ ನಿಗೂಢತೆಯನ್ನು  ಬಯಲಿಗೆಳೆದು ಮುಗೆœಯ ಸಾವಿಗೆ ನ್ಯಾಯ ಒದಗಿಸಬೇಕು. ಮೇಲ್ನೋಟಕ್ಕೆ ಇದೊಂದು ಅನುಮಾನಾಸ್ಪದ ಸಾವು, ಹೆತ್ತವರು ಆರೋಪಿಸುವಂತೆ ಹೆತ್ತವರಿಗೆ ಸಾವಿನ ಸುದ್ದಿ ತಿಳಿಸಿ ಅರ್ಧ ಗಂಟೆಯೊಳಗೆ ಅವರು ಆ ಸ್ಥಳಕ್ಕೆ  ತಲುಪುವ ಮೊದಲೇ ಶವವನ್ನು ಶವಾಗಾರ ದಲ್ಲಿ ಇರಿಸಿದ್ದು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ ಹೆತ್ತವರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಕಾಲೇಜಿನ ಎಬಿವಿಪಿ ಅಧ್ಯಕ್ಷ ವೈಭವ್‌ ಭಟ್‌, ಕಾರ್ಯದರ್ಶಿ ಸುಕೇಶ್‌, ಉಪಾಧ್ಯಕ್ಷ ಪ್ರಜ್ವಲ್‌, ಪ್ರಮುಖ ರಾದ ರಾಘವೇಂದ್ರ  ಉಪಸ್ಥಿತರಿದ್ದರು. ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next