Advertisement

ಚಿಕ್ಕೋಡಿ: ರೈಲು ಯೋಜನೆಗಳಿಗೆ ವೇಗ ಕೊಡಿ: ಜಿಲ್ಲಾ ಹೋರಾಟ ಸಮಿತಿ

04:57 PM Jun 18, 2024 | Team Udayavani |

■ ಉದಯವಾಣಿ ಸಮಾಚಾರ
ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ವೇಗ ಕೊಡಬೇಕೆಂದು ಒತ್ತಾಯಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕರಾಡ-ನಿಪ್ಪಾಣಿ- ಬೆಳಗಾವಿ ಮತ್ತು ಶೇಡಬಾಳ-ಅಥಣಿ-ವಿಜಯಪೂರ ಹೀಗೆ ರೈಲು ಯೋಜನೆಗಳು 2010-2011 ರಲ್ಲಿ ಸಮೀಕ್ಷೆಯಾಗಿ ಅನುಮೋದನೆ ಸಹ ಯುಪಿಎ ಸರಕಾರದಲ್ಲಿ ದೊರಕಿದೆ. ಆದರೆ ದಶಕಗಳು ಕರೆದರೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಇನ್ನೂ ಕಾಮಗಾರಿ ಆರಂಭವಾಗಿಲ್ಲ ಮತ್ತು ಕುಡಚಿ-ಬಾಗಲಕೋಟ ರೈಲು
ಮಾರ್ಗದ ಕಾಮಗಾರಿ ದಶಕಗಳಿಂದ ಆಮೆ ಗತಿಯಲ್ಲಿ ಸಾಗುತ್ತಲಿದೆ. ಈ ಕುರಿತು ಸಾಕಷ್ಟು ಸಲ ಈ ಭಾಗದ ಜನರು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ರಾಜಕಾರಣಿಗಳ ಆಸಕ್ತಿಯ ಕೊರತೆಯಿಂದ ಈ ಭಾಗದ ಬಹು ದಿನಗಳ ಬೇಡಿಕೆಯಾದ ಕರಾಡ-ನಿಪ್ಪಾಣಿ- ಬೆಳಗಾವಿ ಹಾಗೂ ಶೇಡಬಾಳ-ಅಥಣಿ-ವಿಜಯಪುರ ಈ ರೈಲು ಯೋಜನೆಗಳ ಕಾಮಗಾರಿ ಆರಂಭವಾಗಿಲ್ಲ, ಹಾಗಾಗಿ ತಮ್ಮ ಅಧಿಕಾರ ಅವಧಿಯಲ್ಲಿ ಈ ಭಾಗದ ರೈಲು ಯೋಜನೆಗಳನ್ನು ಆರಂಭಿಸಿ ಪೂರ್ಣಗೊಳಿಸಬೇಕು ಹಾಗೂ ಕುಡಚಿ-ಬಾಗಲಕೋಟ ಕಾಮಗಾರಿ ಸಹ ಪೂರ್ಣವಾಗಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಮಾತನಾಡಿದ ಸಂಸದೆ ಪ್ರಿಯಾಂಕಾ ಅವರು, ತಮ್ಮ ಮನವಿಯ ಪ್ರಕಾರ ಸಂಸತ್ತಿನಲ್ಲಿ ಚರ್ಚೆ ಮಾಡಿ ಕಾಮಗಾರಿಗಳನ್ನು ಆರಂಭಿಸಲು ಶತ ಪ್ರಯತ್ನ ಮಾಡುತ್ತೇನೆ ಮತ್ತು ತಮ್ಮ ಬೇಡಿಕೆಗಳನ್ನು ಪೂರೈಸುತ್ತೇನೆ ಎಂದರು. ಚಂದ್ರಕಾಂತ ಹುಕ್ಕೇರಿ, ಸಂಜು ಬಡಿಗೇರ, ಸಂಜಯ ಪಾಟೀಲ, ಮಾಳಪ್ಪಾ ಕರೆಣ್ಣವರ, ಖಾನಪ್ಪಾ ಬಾಡ, ಅಮೂಲ ನಾವಿ, ರಮೇಶ ಡಂಗೇರ, ದುಂಡಪ್ಪಾ ಗುರವ, ವಿಶಾಲ ಮೇತ್ರೆ, ವಿಠಲ ಢವಳೆ, ಜೀವನ ಮಾಂಜರೇಕರ, ಉದಯ ವಾಘಮಾರೆ, ಫಿರೋಜ
ಕಲಾವಂತ, ಕುಮಾರ ನಂದಿ, ರಾಜು ಸೊಲ್ಲಾಪುರೆ, ಅಶ್ವತ ಮಾಳಕರಿ, ಮಹೇಂದ್ರ ಕರ್ನೂರೆ, ರಾಜು ಕೋಟಗಿ ಹಾಗೂ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next