Advertisement

Kushtagi: ಅರೆಸ್ಟ್ ಮಾಡುವುದಾದರೆ 3 ಸಾವಿರ ಅಂಗನವಾಡಿ ಕಾರ್ಯಕರ್ತೆಯರನ್ನು ಅರೆಸ್ಟ್ ಮಾಡಿ

10:45 AM Jun 19, 2024 | Team Udayavani |

ಕುಷ್ಟಗಿ: ನಮ್ಮ‌ ಮನೆಯ ಮುಂದೆ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟಿಸಿದರೆ ಅರೆಸ್ಟ್ ಮಾಡಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಬೆದರಿಕೆಗೆ ಜಗ್ಗದ ಅಂಗನವಾಡಿ ಕಾರ್ಯಕರ್ತೆಯರು ಸಚಿವರ ಕಾರಟಗಿ ನಿವಾಸದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.

Advertisement

ಸರ್ಕಾರಿ ಶಾಲೆಗಳಿಗೆ ಎಲ್.ಕೆ.ಜಿ., ಯುಕೆಜಿ ಹಂತಗಳು ಕೊಡದೇ, ಅಂಗನವಾಡಿಗಳಿಗೆ ಅವುಗಳು ನಡೆಸಲು ಕೊಡಬೇಕೆಂದು ರಾಜ್ಯಾದ್ಯಂತ ಅಂಗನವಾಡಿ ನೌಕರ ಸಂಘಟನೆ ನಿರ್ದರಿಸಿವೆ.

ಈ ಹಿನ್ನೆಲೆ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಕಲಾವತಿ ಮೆಣೆದಾಳ ಅವರು, ಸಚಿವ ಶಿವರಾಜ ತಂಗಡಗಿ ಅವರಿಗೆ ಜೂನ್ 19 ಪ್ರತಿಭಟಿಸುವ ಕುರಿತು ಮನವಿ ಸಲ್ಲಿಸಿದ್ದರು.

ಇದಕ್ಕೆ ಸಚಿವ ತಂಗಡಗಿ ಅವರು, ನಮ್ಮ ಮನೆಯ ಮುಂದೆ ಪ್ರತಿಭಟಿಸಿದರೆ ಅರೆಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ನಿಮ್ಮ ಮನೆಯ ಖಾಸಗಿಯಾದರೆ ನಿಮ್ಮ ಶಾಸಕರ ಭವನ ಎಲ್ಲಿದೆ ಎಂದು ತಿಳಿಸಿ ಅಲ್ಲಿ ಪ್ರತಿಭಟಿಸುವುದಾಗಿ ಕಲಾವತಿ ಮೆಣೆದಾಳ ಪ್ರಶ್ನಿಸಿದ್ದರು.

ಈ ಹಿನ್ನೆಲೆಯಲ್ಲಿ ಜಿಲ್ಲೆಯ 3 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಜೂನ್ 19 ರಂದು ಕಾರಟಗಿ ಚಲೋ ಚಳುವಳಿ ಹಮ್ಮಿಕೊಂಡಿದ್ದೇವೆ. ಕಾರಟಗಿಯ ಸಚಿವರ ನಿವಾಸದ ಮುಂದೆ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದೇವೆ. ಸಚಿವರು ಅರೆಸ್ಟ್ ಮಾಡುವುದಾದರೆ ನಮ್ಮನ್ನೆಲ್ಲಾ ಅರೆಸ್ಟ್ ಮಾಡಿ ಎಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಎಲ್.ಕೆ.ಜಿ. ಯುಕೆಜಿ ಸರ್ಕಾರಿ ಶಾಲೆಗಳಿಗೆವಹಿಸದೇ ಮೊದಲಿನಂತೆ ಅಂಗನವಾಡಿಗಳಿಗೆ ವಹಿಸುವವರೆಗೂ ಪ್ರತಿಭಟನೆಗೆ ಜಾರಟಗಿಯಲ್ಲಿದ್ದೇವೆ ಎಂದು ಕಲಾವತಿ ಮೆಣೆದಾಳ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next