Advertisement

2019ರಲ್ಲಿ ಬಿಜೆಪಿ ಸೋಲಿಸಲು ಒಗ್ಗೂಡುವ ಅಖೀಲೇಶ್‌-ಮಾಯಾವತಿ ?

05:00 PM Jul 05, 2017 | Team Udayavani |

ಪಟ್ನಾ : ಸದಾ ಒಂದಿಲ್ಲೊಂದು ಬಗೆಯ ಅಚ್ಚರಿಯ ಸುದ್ದಿ ಪ್ರಕಟಿಸುವುದಕ್ಕೆ ಹೆಸರುವಾಸಿಯಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರು ಇದೀಗ 2019ರ ಮಹಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್‌ ಯಾದವ್‌ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಜತೆಗೂಡಲಿದ್ದಾರೆ ಎಂದು ಹೇಳಿದ್ದಾರೆ. 

Advertisement

ವಿರೋಧ ಪಕ್ಷಗಳ ಶಕ್ತಿ ಏನೆಂಬುದು ಬಿಜೆಪಿಗೆ ಚೆನ್ನಾಗಿ ಗೊತ್ತಿದೆ. ಆ ಪ್ರಕಾರ 2019ರ ಮಹಾಚುನಾವಣೆಯಲ್ಲಿ  ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳ ಮಹಾಶಕ್ತಿಯನ್ನು ಪ್ರಯೋಗಿಸಲಾಗುವುದು; ಅದಕ್ಕಾಗಿ ಅಖೀಲೇಶ್‌ ಮತ್ತು ಮಾಯಾವತಿ ಕೈಜೋಡಿಸಲಿದ್ದಾರೆ ಎಂದು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಲಾಲು ಹೇಳಿದರು. 

2019ರ ಮಹಾ ಚುನಾವಣೆಯಲ್ಲಿ  ಮೋದಿ ಶಕ್ತಿಯ ಬಿಜೆಪಿಯನ್ನು ಸೋಲಿಸಲು ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳ ಮಹಾ ಘಟಬಂಧನ ಏರ್ಪಡುವ ಅಗತ್ಯವಿದೆ ಎಂಬುದನ್ನು ಲಾಲು ಪ್ರಸಾದ್‌ ಯಾದವ್‌ ಆಗೀಗ ಎಂಬಂತೆ ಹೇಳುತ್ತಲೇ ಬರುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next