ಈಶ್ವರಪ್ಪ ಅವರೇ ಸ್ಟ್ರಾಂಗ್ ಎಂಬುದು ಸಾಬೀತಾಗಿದೆ ಎಂದು ಟಾಂಗ್ ಕೊಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿನ ವಿದ್ಯಮಾನಗಳು ನೋಡಿದರೆ ಯಾರು ಪವರ್ ಫುಲ್ ಎಂಬುದು ಗೊತ್ತಾಗುತ್ತಿದೆ. ಆದರೂ ನಮಗೂ ಆ ಪಕ್ಷದ ವಿಚಾರಗಳಿಗೂ ಸಂಬಂಧ ಇಲ್ಲ ಎಂದರು. ಈಶ್ವರಪ್ಪ ಪರ “ಸಾಫ್ಟ್’ ಕಾರ್ನರ್ ಆಗಿಯೇ ಮಾತನಾಡಿದ ಕುಮಾರಸ್ವಾಮಿ, ಈಶ್ವರಪ್ಪ ಪಕ್ಷ ನಿಷ್ಠೆ ಬಗ್ಗೆ ನನಗೆ ಶಂಕೆಯಿಲ್ಲ. ಆದರೆ, ಅವರ ಜೆಡಿಎಸ್ ಸೇರ್ಪಡೆ ಬಗ್ಗೆ ದೊಡ್ಡ ಮಟ್ಟದಲ್ಲೂ ಚರ್ಚೆಯಾಗಿಲ್ಲ, ಸಣ್ಣ ಮಟ್ಟದಲ್ಲೂ ಚರ್ಚೆಯಾಗಿಲ್ಲ. ಎಲ್ಲವೂ ಊಹಾಪೋಹ ಎಂದು ತಿಳಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈಶ್ವರಪ್ಪ ವಿರುದ್ಧ ಕೆಲಸ ಮಾಡಿದವರನ್ನೇ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ
ನೇಮಿಸಿರುವುದು ಅವರಿಗೆ ಅಸಮಾಧಾನ ತರಿಸಿರಬಹುದು ಎಂದರು. ಯಡಿಯೂರಪ್ಪ ಈಗ ಪಕ್ಷ ನಿಷ್ಠೆ, ಅಧಿಕಾರ ತ್ಯಾಗ ಎಂಬ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದಾರೆ. ಈಶ್ವರಪ್ಪ ಅವರನ್ನು ಪಕ್ಷ ವಿರೋಧಿ ಎಂದು ಘರ್ಜಿಸುತ್ತಿದ್ದಾರೆ. ಆದರೆ, ಇದೇ ಯಡಿಯೂರಪ್ಪ 2005 ರಲ್ಲಿ ಜೆಡಿಎಸ್ ಸೇರಲು ಶೋಭಾ ಕರಂದ್ಲಾಜೆ ಹಾಗೂ ರಾಮಚಂದ್ರಗೌಡರ ಜತೆ ನಮ್ಮ ಮನೆ ಬಾಗಿಲಿಗೆ ಬಂದಿದ್ದಾಗ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಕಟ್ಟಿ, ಬಿಜೆಪಿ ನಿರ್ನಾಮವೇ ನನ್ನ ಗುರಿ ಎಂದು ಹೇಳಿರಲಿಲ್ಲವೇ ಎಂದು ಪ್ರಶ್ನಿಸಿದರು.
Advertisement
ಬಿಜೆಪಿ ಬಿಡೋದಿಲಬೆಳಗಾವಿ/ಚಿಕ್ಕೋಡಿ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬಿಜೆಪಿಗೆ ಬರಬೇಕೆನ್ನುವ ಆಸೆ ಇದ್ದರೆ ಕೇಂದ್ರದ
ನಾಯಕರ ಜೊತೆ ಮಾತುಕತೆ ನಡೆಸಿ ಬಿಜೆಪಿಗೆ ಸ್ವಾಗತಿಸಲಾಗುವುದು. ಆದರೆ, ತಾವು ಮಾತ್ರ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಗಮನಕ್ಕೆ ತಂದೇ ಬ್ರಿಗೇಡ್ ರಚನೆ ಮಾಡಲಾಗಿದೆ. ಬರುವ ದಿನಗಳಲ್ಲಿ ಕೇಂದ್ರದ ನಾಯಕರು ಗೊಂದಲ ನಿವಾರಣೆ ಮಾಡಲಿದ್ದು, ತಾವು ಮಾತ್ರ ಬ್ರಿಗೇಡ್ ಕೈಬಿಡುವ ಪ್ರಶ್ನೆಯೇ ಇಲ್ಲ. ಜ.26ರಂದು ಕೂಡಲಸಂಗಮದಲ್ಲಿ ಬೃಹತ್ ಬ್ರಿಗೇಡ್ ಸಮಾವೇಶ ನಡೆಯಲಿದೆ ಎಂದರು.