Advertisement

ಸುವರ್ಣಸೌಧದದಲ್ಲಿ ರಾಯಣ್ಣ, ಚೆನ್ನಮ್ಮ ಪ್ರತಿಮೆ ಸ್ವಾಗತಾರ್ಹ:ಸಚಿವ ಎಂಟಿಬಿ

01:04 PM Dec 21, 2021 | Team Udayavani |

ಬೆಳಗಾವಿ: ಸುವರ್ಣಸೌಧದ ಆವರಣದಲ್ಲಿ ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಅವರ ಪ್ರತಿಮೆ ಅನಾವರಣ ಮಾಡುವ ಮುಖ್ಯಮಂತ್ರಿಗಳ ನಿರ್ಧಾರ ಅತ್ಯಂತ ಸ್ವಾಗತಾರ್ಹ ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್ ಮಂಗಳವಾರ ಹೇಳಿದ್ದಾರೆ.

Advertisement

ಬೆಳಗಾವಿಯ ಅನಗೋಳದಲ್ಲಿರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಸ್ಥಳಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿ ಗೌರವ ಸಲ್ಲಿಸಿದ ನಂತರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಭಾಷಾ ಸಾಮರಸ್ಯ ಹಾಳು ಮಾಡುತ್ತ ಒಕ್ಕೂಟ ವ್ಯವಸ್ಥೆಗೆ ಕಳಂಕ ತರುತ್ತಿರುವ ಎಂಇಎಸ್ ನಂತಹ ಕಿಡಿಗೇಡಿ ಸಂಘಟನೆಯ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.

ಸಂಗೊಳ್ಳಿ ರಾಯಣ್ಣ ಮಹಾನ್ ದೇಶಭಕ್ತ,ದೇಶದ ಹೆಮ್ಮೆ, ಸ್ವಾಭಿಮಾನದ ಪ್ರತೀಕ,ಮಹಾನ್ ಯೋಧ-ಅಂತಹ ಸೇನಾನಿಯನ್ನು ಅವಮಾನಿಸುವುದು ಎಂದರೆ ಅದು ದೇಶಕ್ಕೆ ಮಾಡಿದ ಅವಮಾನ.ಹಾಗಾಗಿ, ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ವಿರೂಪಗೊಳಿಸಿದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತಗೆದುಕೊಂಡಿದ್ದು ಎಂಇಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಶಿವಾಜಿ ಮಹಾರಾಜ-ಈ ಎಲ್ಲರೂ ದೇಶದ ಒಳಿತಿಗಾಗಿ ದುಡಿದವರು ಎನ್ನುವುದನ್ನು ಅರಿತು ನಾವೆಲ್ಲರೂ ಪರಸ್ಪರ ಸಹೋದರ ಭಾವದಿಂದ ಕೆಲಸ ಮಾಡಬೇಕಿದೆ ಎಂದು ಸಚಿವ ಎಂಟಿಬಿ ನಾಗರಾಜ್  ಕಿವಿ ಮಾತು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next