ಎಚ್.ಡಿ.ಕೋಟೆ: ಕನ್ನಡ ಭಾಷೆ ಬೇರೆ ಬೇರೆ ಕಾರಣಕ್ಕೆ ಆತಂಕದ ಸ್ಥಿತಿಯಲ್ಲಿದ್ದು, ಕನ್ನಡಿಗರಿಂದಲೇ ಕನ್ನಡವನ್ನು ಕಾಪಾಡಬೇಕಾದ ದುಸ್ಥಿತಿಯಲ್ಲಿ ನಾವಿದ್ದೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಕಳವಳ ವ್ಯಕ್ತಡಿಸಿದರು. ನಾಡ ಹಬ್ಬ ದಸರಾ ಅಂಗವಾಗಿ ಪಟ್ಟಣದ ಪುರಸಭೆ ಆವರಣದಲ್ಲಿ ಶನಿವಾರ ಕಸಾಪ ತಾಲೂಕು ಘಟಕದ ವತಿಯಿಂದ ನಡೆದ ಗ್ರಾಮೀಣ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಇವತ್ತು ಚಿಂತಕರು, ಸಾಹಿತಿಗಳ ಹತ್ಯೆ, ದೌರ್ಜನ್ಯಗಳನ್ನು ನಾವು ನೋಡುತ್ತಿದ್ದು, ಕವಿ ಅದವರು ತನ್ನ ನೈತಿಕ ಜವಾಬ್ದಾರಿ ಅರಿತು ತನ್ನ ಲೇಖನ, ಕವಿತೆಗಳ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ. ಕವಿ ಕವಿತೆ ಬರೆಯುವ ಮುಖ್ಯ ಉದ್ದೇಶವೇ ಸಂತೋಷ ಮತ್ತು ಸಂದೇಶ ಕೋಡುವಂತಿರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಕವಿಗಳಾದ ಜಯಪ್ಪ ಹೊನ್ನಾಳಿ, ಕವಿಗೆ ಸೃಜನಶೀಲತೆ ಇರಬೇಕು, ತನ್ನ ಬದುಕಿನ ಬಗ್ಗೆ ಅರಿವಿದ್ದರೆ ಮಾತ್ರ ಕವಿ ಆಗಲು ಸಾಧ್ಯ. ಅದರೆ, ಇಂದು ಅನೇಕ ಕವಿಗಳು ಪ್ರಶಸ್ತಿಗಳನ್ನು ಅರಿಸಿ ಹೊರಟಿದ್ದಾರೆಂದು ವಿಷಾದಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕವಿಗಳಾದ ಜಯಪ್ಪ ಹೊನ್ನಾಳಿ, ಬಿ.ಕೆ.ಮೀನಾಕ್ಷಿ, ಪುರಸಭೆ ಅಧ್ಯಕ್ಷೆ ಮಂಜುಳಾ ಗೋವಿಂದಚಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ,
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಂಜುಕೋಟೆ, ತಾಲೂಕು ಕಸಾಪ ಅಧ್ಯಕ್ಷ ಕನ್ನಡ ಪ್ರಮೋದ್, ತಾಲೂಕು ಕಸಾಪದ ಅಂತರಸಂತೆ ಆಶೋಕ್, ಗಿರೀಶ್ ಮೂರ್ತಿ, ಗಾಯಕ ಸಿದ್ದರಾಜು, ತಾಲೂಕು ಛಾಯಾಗ್ರಾಹಕ ಸಂಘದ ಅಧ್ಯಕ್ಷ ಸ್ವಾಮಿನಾಯಕ್, ಮುಖಂಡರಾದ ಸ್ಟುಡಿಯೋ ಸುರೇಶ್, ಕೃಷ್ಣಪುರ ಪರಶಿವಮೂರ್ತಿ, ಶಿವಯ್ಯ, ಚಾ.ಕೃಷ್ಣ, ಬೇಕರಿ ಮುತ್ತುರಾಜ್ ಇದ್ದರು.
ಕವಿತೆ ವಾಚಿಸಿ ಕಣ್ಮನ ಸೆಳೆದ ಕವಿಗಳು: ದಸರಾ ಅಂಗವಾಗಿ ತಾಲೂಕು ಕಸಾಪದಿಂದ ನಡೆದ ಗ್ರಾಮೀಣ ದಸರಾ ಕವಿಗೋಷ್ಠಿಯಲ್ಲಿ ಕವಿ ಹೆಬ್ಬಲಗುಪ್ಪೆ ನರಸಿಂಹಪ್ರಸಾದ್ ಹೆಗ್ಗದೇವನಕೋಟೆ ತಾಲೂಕಿನ ಚಿತ್ರಣವನ್ನು ತಮ್ಮ ಕವಿತೆ ಮೂಲಕ ಊಣಬಡಿಸಿದರೇ, ಶಿಕ್ಷಕ ಕವಿ ವೆಂಕಟಯ್ಯ ಬರಗಾಲಕ್ಕೆ ಸಿಲುಕಿ ಬತ್ತಿದ ಭತ್ತದ ಕಣಜ, ಬಿಸಿಲಿಗೆ ಬಿಕ್ಕಿ ಬಿಕ್ಕಿ ಅಳುತ್ತಿದೆ ಎಂದು ತಮ್ಮ ಕವಿತೆ ಮೂಲಕ ವರುಣದೇವನ ಕೃಪೆಗೆ ಮೊರೆಯಿಟ್ಟರು.
ಕವಿ ಬೂದನೂರು ಗುರುರಾಘವೇಂದ್ರ ದಸರಾ ವೈಭವ ಚಿತ್ರಣವನ್ನು ಕವಿತೆಯಲ್ಲಿ ಸೃಷ್ಟಿಸಿದರೇ, ಇನ್ನೂ ವಿಶೇಷ ಚೇತನ ಕವಿ ಮಹದೇವಯ್ಯ ದಸರಾ ವೈಭವದ ಜೊತೆಗೆ ದಸರೆಯಲ್ಲಿ ಆನೆ ಮಾವುತರ ಮಹತ್ವ ಹಾಗೂ ಅವರ ಬದುಕಿನ ಚಿತ್ರಣವನ್ನು ತಮ್ಮ ಕವಿತೆ ವಚನಾದ ಮೂಲಕ ಕಣ್ಮನ ಸೆಳೆದರು. ಕವಿ ಆರ್ಚಕ ಕಿತ್ತೂರು ಭಾಸ್ಕರ್ ಓ ಕಪಿಲೇ ಬಾರೇ ಓ ಕಪಿಲೇ ಬಾರೆ ಎನ್ನುವ ಎಂದು ತಮ್ಮ ಕವಿತೆ ವಚನಾ ಮಾಡುವ ಮೂಲಕ ಜಲಾಶಯದ ನಿರ್ಮಾಣ ಸಂದರ್ಭ ಮುಳುಗಡೆಯಾದ 33 ಹಳ್ಳಿಗಳ ಜನರ ಬದುಕು ಬವಣೆ ಮತ್ತು ಇಂದು ಕಪಿಲೇ ಕಲ್ಮಷವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ನಿವೃತ್ತ ಶಿಕ್ಷಕ ಹಿರಿಯ ಕವಿ ಸಿದ್ದಚಾರ್ ಅಮ್ಮ ಶೀರ್ಷಿಕೆ ಕವಿತೆ ಪಟಿಸಿ ಅಮ್ಮನ ಪಾವಿತ್ರತೆ, ವತ್ಸಲ್ಯ ಜೊತೆಗೆ ಹಾಲುಣಿಸಿದ ಮಹಾತಾಯಿಗೆ ಜಗತ್ತಿನಲ್ಲಿ ಯಾರೂ ಸರಿಸಾಟಿಯಿಲ್ಲ, ಅಮ್ಮನನ್ನು ಕವಿತೆ ವಚನಾದಲ್ಲಿ ಪ್ರಕೃತಿಗೆ ಹೋಲಿಸಿದರು. ಇನ್ನು ಕವಿಗಳಾದ ಮಾಗುಡಿಲು ಡಾ.ರವಿಶಂಕರ್, ಬಿ.ವಿ.ಶ್ರೀನಿವಾಸ್, ಬಾಲಸುಬ್ರಹ್ಮಣ್ಯಂ, ಕವಿ ಗೋಷ್ಠಿಯಲ್ಲಿ ತಮ್ಮ ಕವಿತೆಗಳನ್ನು ವಚನಾ ಮಾಡಿದರು.