Advertisement
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಬುಧವಾರ ವ್ಯಾಜ್ಯಗಳ ಪರ್ಯಾಯ ಪರಿಹಾರ ಕೇಂದ್ರ (ಎಡಿಆರ್)ದಲ್ಲಿ ಪಾನಲ್ ವಕೀಲರಿಗೆ ಆಯೋಜಿಸಿರುವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಕ್ಕೆ ವಿರುದ್ಧವಾದ ಪದ್ಧತಿ, ಆಚರಣೆಗಳ ಸಾಧಕ-ಬಾಧಕ, ನಿವಾರಣೆ, ಪರಿಹಾರದ ಬಗ್ಗೆ ಜನ ಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಸಮಾಜ ಸೇವೆಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿದ್ದವರು ತೊಡಗಿಸಿಕೊಳ್ಳಬೇಕು ಎಂದರು.
ತಿಳಿಸಿದರು.
Related Articles
ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಎಲ್ಲಿ ಕ್ರಿಮಿನಲ್, ಮೋಟಾರ್ ಅಪಘಾತ ಪ್ರಕರಣ ಹೆಚ್ಚು ದಾಖಲಾಗುತ್ತವೆಯೋ ಅಲ್ಲಿ ಕಾನೂನು ಉಲ್ಲಂಘನೆ ಜಾಸ್ತಿಎಂಬುದನ್ನ ಮನಗಾಣಬೇಕು. ಹೊನ್ನಾಳಿ ನ್ಯಾಯಾಲಯದಲ್ಲಿ ಮೋಟಾರ್ ಅಪಘಾತಕ್ಕೆ ಸಂಬಂಧಿಸಿದಂತೆ 16 ಪ್ರಕರಣ ಮಾತ್ರ ಬಾಕಿ ಇರುವುದು ಅಭಿನಂದನೀಯ. ಹೊನ್ನಾಳಿಗಿಂತ ಕಡಿಮೆ ವ್ಯಾಪ್ತಿ ಹೊಂದಿರುವ ಹರಿಹರದಲ್ಲಿ 500ಕ್ಕೂ ಹೆಚ್ಚು ಪ್ರಕರಣ ಬಾಕಿ ಇವೆ ಎಂದು ತಿಳಿಸಿದರು.
Advertisement
ಕೌಟಂಬಿಕ ನ್ಯಾಯಾಲಯದ ನ್ಯಾಯಾಧೀಶ ಬಿ.ಎಲ್. ಜಿನರಾಲ್ಕರ್ ಮಾತನಾಡಿ, ಜ್ಞಾನಮಟ್ಟ ಹೆಚ್ಚಿಸಿಕೊಳ್ಳುವ ಜೊತೆಗೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿ ಈ ರೀತಿಯ ತರಬೇತಿ ಅವಶ್ಯ. ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದುಸಲಹೆ ನೀಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ ಮಾತನಾಡಿ, ಮೊದಲ ಬಾರಿಗೆ ಜಿಲ್ಲಾ ನ್ಯಾಯಾಧೀಶರೊಬ್ಬರು ಗ್ರಾಮೀಣ ಪ್ರದೇಶಕ್ಕೆ
ತೆರಳಿ, ಸರ್ಕಾರದಿಂದ ನೀಡುವ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಿದ್ದು ಮರೆಯಲಿಕ್ಕೆ ಸಾಧ್ಯವೇ ಇಲ್ಲ ಎಂದರು. ಅಧ್ಯಕ್ಷತೆ ವಹಿಸಿದ್ದ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯ ನ್ಯಾಯಾಧೀಶ ಎ.ಎಸ್. ಸದಲಗಿ ಮಾತನಾಡಿ, ಕಾನೂನು ಎಂಬುದು
ಸಾಗರ. ನಾವು ಏನೇ ತಿಳಿದುಕೊಂಡಿದ್ದರೂ ಒಂದೇ ಒಂದು ಹನಿಯಷ್ಟು ತಿಳಿದುಕೊಂಡಂತೆ. ಹಾಗಾಗಿ ದಿನ ಬಳಕೆಯ ಕಾನೂನು ಜೊತೆಗೆ
ಇತರೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಇಂತಹ ತರಬೇತಿ ಕಾರ್ಯಕ್ರಮ ಉಪಯುಕ್ತ.ನಾವೆಲ್ಲರೂ ಸಾಧ್ಯವಾದಷ್ಟು ಸಮಾಜ ಸೇವೆ
ಮಾಡಬೇಕಿದೆ ಎಂದರು. ಸಂಪನ್ಮೂಲ ವ್ಯಕ್ತಿ ಜಿ. ರಮಾದೇವಿ ಇತರರು ಇದ್ದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯಸ್ವಾಗತಿಸಿದರು.
ಎಲ್. ಶ್ಯಾಂ ನಿರೂಪಿಸಿದರು.ಬಿ.ಪಿ. ಬಸವರಾಜ್ ವಂದಿಸಿದರು.