ಬೆಂಗಳೂರು: ಸರಕಾರದ 108-ಆರೋಗ್ಯ ಕವಚ ಯೋಜನೆ ನಿರ್ವಹಿಸುತ್ತಿರುವ ಜಿವಿಕೆ-ಇಎಂಆರ್‌ಐ ಸಂಸ್ಥೆಯು ಬಾಕಿ ಉಳಿಸಿಕೊಂಡಿದ್ದ ನೌಕರರ ಎರಡು ತಿಂಗಳ ವೇತನ ಬಿಡುಗಡೆಗೊಳಿಸಲಾಗಿದೆ.
ಹೀಗಾಗಿ ಶುಕ್ರವಾರ ಮುಷ್ಕರ ನಡೆಸುವ ನಿರ್ಧಾರವನ್ನು ಹಿಂಪಡೆದುಕೊಳ್ಳಲಾಗಿದೆ. ಬಾಕಿ ಉಳಿಸಿಕೊಂಡಿದ್ದ 108 ಆ್ಯಂಬುಲೆನ್ಸ್ ನೌಕರರ ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳ ವೇತನವನ್ನು ಜಿವಿಕೆ-ಇಎಂಆರ್‌ಐ ಬುಧವಾರ ನೀಡಿದೆ.
ಆದರೆ, ಅಕ್ಟೋಬರ್ ತಿಂಗಳ ವೇತನವನ್ನು ಸರಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ 1 ತಿಂಗಳ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ. 2 ತಿಂಗಳ ವೇತನ ಸಿಗುತ್ತಿದ್ದಂತೆ ಸಮಾಧಾನಗೊಂಡ ನೌಕರರು ಮುಷ್ಕರ ನಡೆಸುವ ತೀರ್ಮಾನವನ್ನು ಹಿಂತೆಗೆದುಕೊಂಡಿದ್ದಾರೆ.