Advertisement
ವಿಶೇಷವೆಂದರೆ, ಹಾಕಿಯ ಈ ಮಿಶ್ರ ವಿಭಾಗವನ್ನು ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ ಎಫ್ಐಎಚ್‌ನ ಪ್ರತಿನಿಧಿಯೂ ವೀಕ್ಷಿಸಲಿದ್ದಾರೆ. 2024ರ ಒಲಿಂಪಿಕ್ಸ್ ದೃಷ್ಟಿಯಿಂದ ಹಾಕಿ ಇಂಡಿಯಾ ಈ ಪ್ರಯೋಗಕ್ಕೆ ಹೊರಟಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಹಾಕಿಯಲ್ಲೂ ಲಿಂಗಸಮಾನತೆ ಬರುವ ಸಮಯ ದೂರವಿಲ್ಲ.
ಕ್ರೀಡೆಯಲ್ಲಿ ಲಿಂಗ ಸಮಾನತೆ ಬರಬೇಕು ಎನ್ನುವುದು ಹಲವರ ಬೇಡಿಕೆ. ಇದಕ್ಕೆ ಇದುವರೆಗೆ ಬ್ಯಾಡ್ಮಿಂಟನ್, ಟೆನಿಸ್‌ನಲ್ಲಿ ಮಾತ್ರ ಅವಕಾಶ ಸಿಕ್ಕಿದೆ. ಈ ಎರಡೂ ಕ್ರೀಡೆಗಳಲ್ಲಿ ಮಿಶ್ರ ವಿಭಾಗ ಜನಪ್ರಿಯವಾಗಿದೆ. ಅಂತಹ ಸಮಾನತೆಯನ್ನು 10, 11 ಮಂದಿ ಆಡುವ ತಂಡ ವಿಭಾಗದಲ್ಲಿ ತರುವುದು ಕಷ್ಟ ಎಂಬ ಕಾರಣಕ್ಕೆ ಹಾಕಿ, ಕ್ರಿಕೆಟ್, ಫುಟ್‌ಬಾಲ್‌ನಲ್ಲಿ ಅದು ಜಾರಿಯಾಗಿರಲಿಲ್ಲ. ಒಂದು ವೇಳೆ ಈ ಪ್ರಯೋಗ ಹಾಕಿಯಲ್ಲಿ ಯಶಸ್ವಿಯಾದರೆ ಫುಟ್‌ಬಾಲ್, ಕ್ರಿಕೆಟ್‌ನಲ್ಲೂ ಶೀಘ್ರದಲ್ಲೇ ಕಾಣಿಸಿಕೊಳ್ಳಬಹುದು. ಹೇಗಿರುತ್ತೆ ಮಿಶ್ರ ವಿಭಾಗ?
ಈ ವಿಭಾಗದ ಒಂದು ತಂಡದಲ್ಲಿ ಒಟ್ಟಾರೆ 9 ಮಂದಿ ಇರುತ್ತಾರೆ. ಅದರಲ್ಲಿ 5 ಮಂದಿ ಆಡಲಿಳಿಯುತ್ತಾರೆ. ಕನಿಷ್ಠ 2 ಮಹಿಳೆಯರಿಗೆ ಅವಕಾಶ ನೀಡುವುದು ಕಡ್ಡಾಯ. ಉಳಿದಂತೆ ತಂಡದ ರಚನೆ ಹೇಗಿರಬೇಕು ಎನ್ನುವುದು ತಂಡಕ್ಕೆ ಬಿಟ್ಟಿದ್ದಾಗಿರುತ್ತದೆ. ಮೈದಾನದ ಗಾತ್ರ ಮಾಮೂಲಿಯಷ್ಟು ದೊಡ್ಡದಾಗಿರದೇ ಅದರ ಅರ್ಧಗಾತ್ರಕ್ಕೆ ಇಳಿಯಲಿದೆ.
Related Articles
ಪುರುಷರ ಹಾಕಿಯ ಖ್ಯಾತ ತಾರೆಯರಾದ ದೇವೇಂದ್ರ ವಾಲ್ಮೀಕಿ, ಮಹಿಳಾ ತಂಡದ ತಾರೆಯರಾದ ರಾಣಿ ರಾಮ್‌ಪಾಲ್, ಸವಿತಾ ರಾಣಿ, ಗುರುಪ್ರೀತ್ ಸೇರಿದಂತೆ ಹಲವರು ಈ ಪ್ರಯೋಗದಲ್ಲಿ ಕಾಣಿಸಿಕೊಳ್ಳುತ್ತಾರೆ.
Advertisement