ಶಿಕ್ಷಣ ಕಾಶಿ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ನಾಗರಬೆಟ್ಟ ಗ್ರಾಮದ ಬಸ್ ನಿಲ್ದಾಣ ಹತ್ತಿರವಿರುವ ಎಸ್‌ಡಿಇ ಸಂಸ್ಥೆಯ ಆಕ್ಸಫರ್ಡ್ ಮಠ್ಸ್ ಶಿಕ್ಷಣ ಸಂಸ್ಥೆಯ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜು ಪ್ರಸಕ್ತ ಸಾಲಿನಲ್ಲಿ ನೀಟ್ ಪರೀಕ್ಷೆಗೆ ಹಾಜರಾದ 20 ವಿದ್ಯಾರ್ಥಿಗಳಲ್ಲಿ 8 ಜನರಿಗೆ ಮೆಡಿಕಲ್, 8 ಜನರಿಗೆ ಆಯುರ್ವೇದಿಕ್ ಮೆಡಿಕಲ್ ಶಿಕ್ಷಣ ದೊರಕಿಸಿಕೊಡುವ ಮೂಲಕ ಸಾಧನೆಯತ್ತ ದಾಪುಗಾಲಿಟ್ಟಿದೆ.
1996-97ನೇ ಸಾಲಿನಲ್ಲಿ ಕೇವಲ 33 ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಈ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆಯುತ್ತಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಹದಾಸೆಯನ್ನಿಟ್ಟುಕೊಂಡು ಸಾಗಿದೆ. ಸೈನಿಕ, ನವೋದಯ, ಕಿತ್ತೂರು ಮುಂತಾದ ಶಾಲೆಗೆ ಸೇರಬಯಸುವ ಮಕ್ಕಳಿಗೆ ತರಬೇತಿ ನೀಡುವ ಉದ್ದೇಶದಿಂದ ಆರಂಭಗೊಂಡ ಸಂಸ್ಥೆಯಲ್ಲಿಂದು ಕನ್ನಡ-ಆಂಗ್ಲ ಮಾಧ್ಯಮದ ಪ್ರಾಥಮಿಕ-ಪ್ರೌಢಶಾಲೆ ವಿಭಾಗ ಹೊಂದಿದ್ದು ಮಾತ್ರವಲ್ಲ ಪದವಿ ಪೂರ್ವ ಸೈನ್ಸ್ ಕಾಲೇಜು ಆರಂಭಿಸಿ ಯಶಸ್ಸು ಕಾಣುವ ಮಟ್ಟಕ್ಕೆ ಬೆಳೆಯ ತೊಡಗಿರುವುದು ಸಂಸ್ಥೆಯ ಬೆಳಗಣಿಗೆಗೆ ಕನ್ನಡಿ ಹಿಡಿದಂತಿದೆ.
2003-04ನೇ ಸಾಲಿನಿಂದ ಆಕ್ಸಫರ್ಡ್ ಹಿರಿಯ ಪ್ರಾಥಮಿಕ ಮತ್ತು ಎಸ್‌ಡಿಕೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಗಳನ್ನು ಆರಂಭಿಸಿ ಪ್ರತಿವರ್ಷ ಎಸ್ ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ ಪಡೆಯುವುದರ ಜತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳೆದ 3 ವರ್ಷಗಳಿಂದ ರಾಜ್ಯಕ್ಕೆ ರಾಂಕ್ ಪಡೆಯುವ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡತೊಡಗಿರುವುದು ಹೆಮ್ಮೆಯ ಸಂಕೇತವಾಗಿದೆ.
ಬಹುಜನರ ಬೇಡಿಕೆ ಹಿನ್ನೆಲೆಯಲ್ಲಿ 2016-17ನೇ ಸಾಲಿನಿಂದ ಆಕ್ಸಫರ್ಡ್ ಮಠ್ಸ್ ಗ್ರುಪ್ ಆಫ್ ಇನ್ ಸ್ಟಿಟ್ಯೂಶನ್ ಹೆಸರಲ್ಲಿ ಪುನರುಜ್ಜೀವನಗೊಂಡ ಸಂಸ್ಥೆ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜು ಆರಂಭಿಸಿ ಗ್ರಾಮೀಣ ಪ್ರತಿಭೆಗಳಿಗೆ ವೈದ್ಯಕೀಯ ಹಾಗೂ ತಾಂತ್ರಿಕ ಕೋರ್ಸ್‌ಗಳಿಗೆ ಅರ್ಹತೆ ಗಳಿಸುವ ಅವಕಾಶದ ಬಾಗಿಲು ತೆರೆಯುವಲ್ಲಿ ಮಹತ್ವದ ಪಾತ್ರ ವಹಿಸಿ ಜನರ ನಂಬಿಕೆಗೆ ಪಾತ್ರವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಮೆಡಿಕಲ್, ತಾಂತ್ರಿಕ ಶಿಕ್ಷಣಕ್ಕೆ ಆಯ್ಕೆಯಾಗುವವರ ಸಂಖ್ಯೆ ಹೆಚ್ಚುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಉತ್ತಮ ನೈಸರ್ಗಿಕ ಪರಿಸರದಲ್ಲಿರುವ ಶಾಲೆಯ ಎಲ್ಲ ತರಗತಿಗಳಿಗೆ ಘಟಕ, ವಾರದ, ಪಾಕ್ಷಿಕ, ಮಾಸಿಕ ಪರೀಕ್ಷೆಗಳು, ಪ್ರತಿಯೊಬ್ಬ ವಿದ್ಯಾರ್ಥಿಯ ವೈಯಕ್ತಿಕ ಕಾಳಜಿ, ಪಠ್ಯೇತರ ಚಟುವಟಿಕೆಗೂ ಆದ್ಯತೆ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕದ ಅನುಭವಿ ನುರಿತ ಶಿಕ್ಷಕರು ಮತ್ತು ಉಪನ್ಯಾಸಕ ವೃಂದ, 6-10 ವಿದ್ಯಾರ್ಥಿಗಳಿಗೆ ಐಐಟಿ ಬೇಸಿಕ್ ಫೌಂಡೇಶನ್ ತರಬೇತಿ, ನೀಟ್, ಕೆ-ಸಿಇಟಿ, ಜೆಇಇ, ಐಐಟಿ ವಿಶೇಷ ಕಾಳಜಿಪೂರ್ಣ ತರಬೇತಿ, ಕ್ರ್ಯಾಶ್ ಕೋರ್ಸ್, ಪುನರ್ಮನನ ಹೀಗೆ ಹತ್ತು ಹಲವು ಯಶಸ್ವಿ ಮತ್ತು ಪರಿಣಾಮಕಾರಿ ಬೋಧನೆಗಳನ್ನು ಇಲ್ಲಿ ಅಳವಡಿಸಿರುವುದು ವಿದ್ಯಾರ್ಥಿಗಳ ಯಶಸ್ಸಿನ ಹಾದಿ ಸುಗಮಗೊಳಿಸಿದಂತಾಗಿದೆ.
ಗ್ರಾಮೀಣ ವಿದ್ಯಾರ್ಥಿಗಳಲ್ಲಿರುವ ಅಪಾರ ಪ್ರತಿಭೆಯನ್ನು ಹೊರತರುವ ಗುಣಮಟ್ಟದ ತರಬೇತಿ ನೀಡುವುದು ನನ್ನ ಸಂಸ್ಥೆಯ ಸಂಕಲ್ಪವಾಗಿದೆ. ಈ ವರ್ಷ ನೀಟ್‌ಗೆ ಹಾಜರಾದ 20 ವಿದ್ಯಾರ್ಥಿಗಳಲ್ಲಿ 8 ಮೆಡಿಕಲ್, 8 ಆಯುರ್ವೇದಿಕ್ ಮೆಡಿಕಲ್ ಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. 2022-23ನೇ ಸಾಲಿನ ನೀಟ್‌ನಲ್ಲಿ ಇನ್ನೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್‌ಗೆ ಆಯ್ಕೆಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಶ್ರಮ ವಹಿಸುತ್ತಿದ್ದೇವೆ. ನಮ್ಮಲ್ಲಿ ಗುಣಮಟ್ಟದ, ಭವಿಷ್ಯದ ಜೀವನಕ್ಕೆ ಉಪಯುಕ್ತವಾಗುವ ವಿದ್ಯಾಭ್ಯಾಸ ಮತ್ತು ತರಬೇತಿಯ ಗ್ಯಾರಂಟಿ ಇದೆ.
-ಬಿ.ಜಿ.ಮಠ (ಮುತ್ತು ಸರ್),ಅಧ್ಯಕ್ಷರು, ಆಕ್ಸಫರ್ಡ್ ಸಂಸ್ಥೆ, ನಾಗರಬೆಟ್ಟ
-ಡಿ.ಬಿ. ವಡವಡಗಿ