Advertisement

ಗೋವಾದಲ್ಲಿ ಕಟ್ಟುನಿಟ್ಟಾದ ಟ್ರಾಫಿಕ್ ನಿಯಮ: ಕಡಿಮೆಯಾದ ರಸ್ತೆ ಅಪಘಾತಗಳು

02:22 PM Mar 11, 2023 | Team Udayavani |

ಪಣಜಿ: ಕಳೆದ ಕೆಲವು ತಿಂಗಳುಗಳಲ್ಲಿ ಗೋವಾದಲ್ಲಿ ರಸ್ತೆ ಅಪಘಾತಗಳಲ್ಲಿ ಭಾರಿ ಹೆಚ್ಚಳವಾಗಿದೆ. ಈ ಅಪಘಾತಗಳಿಂದ ಸಾವಿನ ಸಂಖ್ಯೆಯೂ ಹೆಚ್ಚಿದೆ. ಕಳೆದ ವರ್ಷ ಸುಮಾರು ಒಂಬತ್ತು ಪ್ರತಿಶತದಷ್ಟು ರಸ್ತೆ ಅಪಘಾತಗಳ ಹೆಚ್ಚಳದ ನಂತರ, 2023 ರ ಆರಂಭದಿಂದ ಟ್ರಾಫಿಕ್ ಪೋಲಿಸ್ ನಿಯಮಗಳ ಕಟ್ಟುನಿಟ್ಟಾದ ಜಾರಿಯು ಇವುಗಳಲ್ಲಿ ಶೇಕಡಾವಾರು ಅಪಘಾತ ಕಡಿಮೆಯಾಗಿದೆ ಎನ್ನಲಾಗಿದೆ.

Advertisement

ಈ ಕುರಿತು ಪಣಜಿಯಲ್ಲಿ ಮಾಧ್ಯಗಳಿಗೆ ಪ್ರತಿಕ್ರಿಯೆ ನೀಡಿದ ಗೋವಾ ಪೋಲಿಸ್ ಮಹಾನಿರ್ದೇಶಕ ಜಸ್ಫಾಲ್ ಸಿಗ್ -ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಅಪಘಾತಗಳಲ್ಲಿ ಶೇಕಡಾ 12 ರಷ್ಟು ಇಳಿಕೆಯಾಗಿದೆ. ಫೆಬ್ರವರಿಯಲ್ಲಿ ಪ್ರಾರಂಭಿಸಿದ ವಿಶೇಷ ಅಭಿಯಾನದ ಸಮಯದಲ್ಲಿ, ಉತ್ತರ ಗೋವಾದ ಪೊಲೀಸರು ಸಂಚಾರ ಉಲ್ಲಂಘನೆಗಾಗಿ 6,592 ಜನರಿಗೆ ದಂಡ ವಿಧಿಸಿದ್ದಾರೆ ಎಂದು ಅವರು ಹೇಳಿದರು; ಕಳೆದ ವರ್ಷ ನೀಡಿದ ಚನಲ್ ಸಂಖ್ಯೆ 4,863 ಆಗಿತ್ತು. ಅದೇ ರೀತಿ, ದಕ್ಷಿಣ ಗೋವಾದ ಪೊಲೀಸರು ಕಳೆದ ವರ್ಷ 4,662 ಚನಲ್‍ಗಳನ್ನು ನೀಡಿದ್ದಾರೆ.  ಈ ವರ್ಷ 7,771 ಜನರಿಗೆ ನಿಯಮ ಉಲ್ಲಂಘನೆಗಾಗಿ ಚನಲ್ ನೀಡಲಾಗಿದೆ ಎಂದು ಜಸ್ಫಾಲ್ ಸಿಂಗ್ ಮಾಹಿತಿ ನೀಡಿದರು.

ಗೋವಾದ ಎರಡೂ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಂಡಿರುವುದರಿಂದ ಅಪಘಾತಗಳ ಸಂಖ್ಯೆ ಶೇ.12ರಷ್ಟು ಕಡಿಮೆಯಾಗಿದೆ. ಸಂಚಾರ ನಿಯಮ ಉಲ್ಲಂಘನೆಗಾಗಿ 47,000 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ ಮತ್ತು ಕಳೆದ ತಿಂಗಳು 2 ಕೋಟಿ ರೂ.ಗೂ ಹೆಚ್ಚು ದಂಡವನ್ನು ಸಂಗ್ರಹಿಸಲಾಗಿದೆ ಎಂದು ಮಹಾನಿರ್ದೇಶಕರು ತಿಳಿಸಿದ್ದಾರೆ.
ಗೋವಾ ಪೊಲೀಸ್ ಟ್ರಾಫಿಕ್ ಸೆಲ್ ಪ್ರಕಾರ, ಕಳೆದ ವರ್ಷ ರಸ್ತೆ ಅಪಘಾತಗಳಲ್ಲಿ ಮೂರನೇ ಎರಡರಷ್ಟು ದ್ವಿಚಕ್ರ ವಾಹನಗಳು. ಕಳೆದ ವರ್ಷ ರಾಜ್ಯದಲ್ಲಿ 3,011 ರಸ್ತೆ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 253 ಮಂದಿ ಸಾವನ್ನಪ್ಪಿದ್ದಾರೆ.

ಗೋವಾದಲ್ಲಿ ವಾಹನಗಳ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ. ಗೋವಾದಲ್ಲಿ ವಾಹನಗಳ ಸಂಖ್ಯೆಯು 2020 ರಲ್ಲಿ 14.5 ಲಕ್ಷದಿಂದ 2021 ರಲ್ಲಿ 14.9 ಲಕ್ಷಕ್ಕೆ ಏರಿದೆ, ಕಳೆದ ವರ್ಷ 15.4 ಲಕ್ಷ ಇತ್ತು. ಅಂದಿನಿಂದ ವಾಹನಗಳ ಸಂಖ್ಯೆ ಶೇಕಡಾ ಮೂರರಷ್ಟು ಹೆಚ್ಚಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next