“ಈಅವತಾರದಲ್ಲಿ ನನ್ನನ್ನು ನಾನೇ ನೋಡಿಲ್ಲ …’ – ಗಣೇಶ್ ತುಂಬಾ ಎಕ್ಸೆ„ಟ್ ಆಗಿ ಹೀಗೆ ಹೇಳಿಕೊಂಡರು. ಅವರು ಹೀಗೆ ಹೇಳಲು
ಕಾರಣವಾಗಿದ್ದು ಅವರು ಮಾಡಿರುವ ಪಾತ್ರ. ಇಲ್ಲಿವರೆಗೆ ಗಣೇಶ್ ಅವರನ್ನು ನೀವು ಲವರ್‌ಬಾಯ್ ಆಗಿ ನೋಡಿದ್ದೀರಿ, ನಗಿಸುತ್ತಲೇ ನಿಮ್ಮ ಮನಸ್ಸಿಗೆ ಹತ್ತಿರವಾಗುವ ಫನ್ನಿ ಹುಡುಗನಾಗಿ ಇಷ್ಟಪಟ್ಟಿದ್ದೀರಿ. ಆದರೆ, ಖಡಕ್ ಪೊಲೀಸ್ ಆಫೀಸರ್ ಆಗಿ ಅವರನ್ನು
ಯಾವತ್ತೂ ನೋಡಿಲ್ಲ. ಆದರೆ ಈ ಬಾರಿ ಅವರ ಅಭಿಮಾನಿಗಳಿಗೆ ಆ ಅವಕಾಶವೂ ಸಿಕ್ಕಿದೆ. ಅದು “ಪಟಾಕಿ’ ಮೂಲಕ.
ಗಣೇಶ್ “ಪಟಾಕಿ’ ಸಿನಿಮಾ ಮಾಡಿರೋದು ನಿಮಗೆ ಗೊತ್ತೇ ಇದೆ.
“ಪಟಾಕಿ’ ಚಿತ್ರದ ಟ್ರೇಲರ್ ಹಿಟ್ ಆಗಿದೆ. ಸಿನಿಮಾವನ್ನು ಕೂಡಾ ಜನ ಇಷ್ಟಪಡುತ್ತಾರೆ, ತನ್ನ ಪಾತ್ರವನ್ನು ಎಂಜಾಯ್ ಮಾಡುತ್ತಾರೆಂಬ ವಿಶ್ವಾಸ ಗಣೇಶ್‌ಗಿದೆ. “ತುಂಬಾ ಎನರ್ಜಿಟಿಕ್ ಆದ ಪಾತ್ರ. ಪಾತ್ರ ಎಷ್ಟು ಪವರ್‌ಫುಲ್ ಆಗಿದೆಯೋ, ಮನರಂಜನೆ ಕೂಡಾ ಅಷ್ಟೇ ಪವರ್‌ಫುಲ್ ಆಗಿದೆ. ಈ ಪಾತ್ರ ನನಗೂ ಹೊಸದು. ನಾನು ಕೂಡಾ ನನ್ನನ್ನು ಈ ಅವತಾರದಲ್ಲಿ ಹಿಂದೆಂದೂ ನೋಡಿಲ್ಲ’ ಎನ್ನುತ್ತಾ ನಗುತ್ತಾರೆ ಗಣೇಶ್. ಪೊಲೀಸ್ ಪಾತ್ರದಲ್ಲಿ ನಟಿಸಬೇಕು, ಖಾಕಿ ಹಾಕಿ ಘರ್ಜಿಸಬೇಕೆಂಬ ಆಸೆ ಬಹುತೇಕ ನಟರಿಗೆ ಇದ್ದೇ ಇರುತ್ತದೆ. ಈ ಆಸೆಯಿಂದ ಗಣೇಶ್ ಕೂಡಾ ಹೊರತಾಗಿರಲಿಲ್ಲ.
“ಆ ತರಹದ್ದೊಂದು ಆಸೆ ಯಾರಿಗೆ ಇರಲ್ಲ ಹೇಳಿ, ಎಲ್ಲರಿಗೂ ಇರುತ್ತದೆ. ನನಗೂ ಪೊಲೀಸ್ ಪಾತ್ರ ಮಾಡಬೇಕೆಂಬ ಆಸೆ ಇತ್ತು. ಅದು “ಪಟಾಕಿ’ ಮೂಲಕ ಈಡೇರಿದೆ. ನಾನು ತುಂಬಾ ಇಷ್ಟಪಟ್ಟು ಎಂಜಾಯ್ ಮಾಡುತ್ತಾ ಮಾಡಿದ ಪಾತ್ರವಿದು. ಈಗ ಚಿತ್ರದ ಟ್ರೇಲರ್ ದೊಡ್ಡ ಹಿಟ್ ಆಗಿದೆ. ಅಲ್ಲಿಗೆ ಜನರಿಗೂ ಚಿತ್ರದ ಬಗ್ಗೆ ಕುತೂಹಲವಿದೆ ಎಂಬುದು ಸಾಬೀತಾಗಿದೆ’ ಎನ್ನುವುದು ಗಣೇಶ್ ಮಾತು.
ಮೊದಲ ಬಾರಿಗೆ ಗಣೇಶ್ ಪೊಲೀಸ್ ಪಾತ್ರ ಮಾಡಿದ್ದಾರೆ. ಏನಾದರೂ ಸಿದ್ಧತೆ ಮಾಡಿಕೊಂಡಿದ್ದಾರಾ, ಯಾರನ್ನಾದರೂ ಅನುಕರಣೆ ಮಾಡಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಪ್ರಶ್ನೆಗೆ ಗಣೇಶ್ ಹೌದೆಂದು ಉತ್ತರಿಸುತ್ತಾರೆ. “ನಾನು
ಈ ಪಾತ್ರಕ್ಕೆ ಒಂದಷ್ಟು ತಯಾರಿ ಮಾಡಿಕೊಂಡಿದ್ದೆ. ಮುಖ್ಯವಾಗಿ ಬಾಡಿ ಲಾಂಗ್ವೇಜ್ ಬಗ್ಗೆ ಗಮನಹರಿಸಿದ್ದೇನೆ. ಪೊಲೀಸ್ ಆಫೀಸರ್ ಹೇಗಿರುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಇನ್ನು, ಅನುಕರಣೆ ಅಂದರೆ ನನಗೊಬ್ಬರು ಪೊಲೀಸ್ ಆಫೀಸರ್ ಫ್ರೆಂಡ್ ಇದ್ದಾರೆ. ಅವರನ್ನು ಸ್ವಲ್ಪ ಫಾಲೋ ಮಾಡಿದ್ದೇನೆ. ಅವರ ಮೈಮೇಲೆ ಖಾಕಿ ಬಿದ್ದ ಕೂಡಲೇ ಅವರ ಬಾಡಿ ಲಾಂಗ್ವೇಜ್, ಮ್ಯಾನರೀಸಂ ಎಲ್ಲವೂ ಬದಲಾಗುತ್ತದೆ. ಅವರನ್ನು ನಾನು ತುಂಬಾ ಗಮನಿಸಿದ್ದೇನೆ ಮತ್ತು ಪಾತ್ರದಲ್ಲಿ ಬಳಸಿಕೊಂಡಿದ್ದೇನೆ’ ಎನ್ನುತ್ತಾರೆ.
Related Articles
ಗಣೇಶ್ ಈಗ ಈಗ ಬೇರೆ ತರಹದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಬೇರೆ ತರಹದ ಪಾತ್ರ ಮಾಡಲು ಪ್ರಯತ್ನಿಸುತ್ತಿದ್ದೇನೆ. ಹಾಗಂತ ಜನ ನನ್ನಿಂದ ಏನು ಬಯಸುತ್ತಾರೆ, ಆರಂಭದ ದಿನಗಳಲ್ಲಿ ನನ್ನಲ್ಲಿ ಏನು ಇಷ್ಟಪಟ್ಟಿದ್ದಾರೆ ಅದರ ಜೊತೆಗೆ ಹೊಸತನ
ಕೊಡಲು ಪ್ರಯತ್ನಿಸುತ್ತಿದ್ದೇನೆ. ಒಮ್ಮೆಲೇ ನನ್ನದಲ್ಲದ ಪಾತ್ರದಲ್ಲಿ ಕಾಣಿಸಿಕೊಂಡರೂ ಅಭಿಮಾನಿಗಳು ಅದನ್ನುಅರಗಿಸಿಕೊಳ್ಳೋದು
ಕಷ್ಟ. ಹಾಗಂತ ಮಾಡಿದ್ದನ್ನೇ ಮಾಡಿ ದರೂ ಅವರಿಗೆ ಇಷ್ಟ ವಾಗುವುದಿಲ್ಲ. ಹಾಗಾಗಿ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಾ
ಮುಂದುವರಿಯುತ್ತಿದ್ದೇನೆ’ ಎನ್ನುವುದು ಗಣೇಶ್ ಮಾತು.
ರವಿಪ್ರಕಾಶ್ ರೈ