Advertisement

ಎಲ್ಲೆಂದರಲ್ಲಿ ತ್ಯಾಜ್ಯ ಎಸೆದರೆ ಕಠಿನ ಕ್ರಮ

10:06 AM Apr 30, 2022 | Team Udayavani |

ಉಪ್ಪಿನಂಗಡಿ: ವಾಹನಗಳಲ್ಲಿ ಬಂದು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯು ತ್ತಿರುವವರ ಮೇಲೆ ಕಠಿನ ಕ್ರಮ ಕೈಗೊಳ್ಳು ತಣ್ಣೀರುಪಂತ ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರವಾಯಿತು.

Advertisement

ಸಭೆ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ಫಾತಿಮಾ ಇಶ್ರತ್‌ ಅಧ್ಯಕ್ಷತೆಯಲ್ಲಿ ಜರಗಿತು. ಹೇಮಾವತಿ ಮಾತನಾಡಿ, ತುರ್ಕಳಿಕೆ ಸಮೀಪ ಕೋರೆಗೆ ತೆರಳುವ ರಸ್ತೆಯ ನಿರ್ಜನ ಪ್ರದೇಶದಲ್ಲಿ ಟೆಂಪೋ ಹಾಗೂ ಇತರ ವಾಹನಗಳಲ್ಲಿ ಬಂದವರು ತ್ಯಾಜ್ಯ ಸುರಿದು ತಮ್ಮ ಕೆಲಸ ಮುಗಿಸಿ ಹೋಗುತ್ತಾರೆ. ಈಗಾಗಲೇ ಸ್ಥಳೀಯರಿಂದ ವ್ಯಾಪಕ ದೂರು ಬರುತ್ತಿದ್ದು ಕ್ರಮ ಜರಗಿಸುವಂತೆ ಆಗ್ರಹಿಸಿದಾಗ ಪಿಡಿಒ ಮಾತನಾಡಿ ಸಿಸಿ ಕೆಮರಾ ಅಳವಡಿಸಿ ಅವರನ್ನು ಪತ್ತೆ ಹಚ್ಚಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಎಂದು ಹೇಳಿ ವಿಷಯಕ್ಕೆ ತೆರೆ ಎಳೆದರು.

ಅನುದಾನ ಬರುತ್ತಿಲ್ಲ

ಸದಸ್ಯ ಮಹಮ್ಮದ್‌ ನಿಸಾರ್‌ ಮಾತ ನಾಡಿ, ಸರಕಾರಿ ನಿಯಮದಂತೆ ಆಚರಿಸಲ್ಪಡುವ ಜಯಂತಿಗಳನ್ನು ಅದ್ದೂರಿಯಿಂದ ಆಚರಿಸಬೇಕು ಎಂದು ಕೇಳಿ ಕೊಂಡಾಗ ಅಧ್ಯಕ್ಷರು ಎಲ್ಲ ಆಚರ ಣೆಗಳನ್ನು ಆಚರಿಸಲು ಖರ್ಚು-ವೆಚ್ಚಕ್ಕೆ ಅನುದಾನ ಬರುತ್ತಿಲ್ಲ ಎಂದರು.

ಮಧ್ಯ ಪ್ರವೇಶಿಸಿದ ಪಿಡಿಒ ಸದಸ್ಯ ಸಲಹೆ ಒಪ್ಪುವ ವಿಚಾರ. ಸ್ಥಳೀಯ ಸಂಘ ಸಂಸ್ಥೆಗಳ ಸಹ ಕಾರವನ್ನು ಜನಪ್ರತಿನಿಧಿಗಳು ಕ್ರೋಢೀ ಕರಿಸಿದರೆ ಯಾವುದೇ ಜಯಂತಿ ಅದ್ದೂರಿಯಾಗಿ ಮಾಡಬಹುದು ಎಂದರು.

Advertisement

ಕರ ಸಂಗ್ರಹಕ್ಕೆ ಒತ್ತು ನೀಡಿ

ಉಪಾಧ್ಯಕ್ಷ ಡಿ. ಕೆ. ಅಯೂಬ್‌ ಮಾತನಾಡಿ, ಕುಡಿಯುವ ನೀರಿನ ಕರ ಸಂಗ್ರಹಕ್ಕೆ ಒತ್ತು ನೀಡಿ ಎಂದು ಹೇಳಿದರು.

ಪಿಡಿಒ ಮಾತನಾಡಿ, ಕರಾಯ ಗ್ರಾಮದ ಪಂಪ್‌ ನಿರ್ವಾಹಕರ ಕಾರ್ಯವೈಖರಿ ಅಸಮರ್ಪಕವಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಪಂಪ್‌ ಚಾಲಕರ ಹೊರತು ಇತರ ಮಕ್ಕಳಲ್ಲಿ ಚಾಲನೆಗೆ ಸೂಚಿಸುವುದು ಸರಿಯಲ್ಲ. ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದಾಗ ಮಧ್ಯ ಪ್ರವೇಶಿಸಿದ ಅಧ್ಯಕ್ಷರು ಸಿಬಂದಿ ಯನ್ನು ಕರೆಯಿಸಿ ಎಚ್ಚರಿಕೆ ನೀಡಿದರು.

ಉಪಾಧ್ಯಕ್ಷ ಅಯೂಬ್‌ ಡಿ. ಕೆ., ಸದಸ್ಯರಾದ ತಾಜುದ್ದೀನ್‌, ಅನಿಲ್‌, ಸಾಮ್ರಾಟ್‌ ಕರ್ಕೇರ, ಲೀಲಾವತಿ, ಸುಧಾ, ನಸ್ಪಿರಾ, ಪ್ರಿಯಾ, ದಿವ್ಯಾ, ರಾಕೇಶ, ಆರತಿ, ಮಹಮ್ಮದ್‌ ಅಶ್ರಫ್ ಉಪಸ್ಥಿತರಿದ್ದರು. ಪಿಡಿಒ ಪುಟ್ಟಸ್ವಾಮಿ ಸ್ವಾಗತಿಸಿದರು. ಕಾರ್ಯದರ್ಶಿ ಆನಂದ ವಂದಿಸಿದರು.

ಚರಂಡಿ ದುರಸ್ತಿ ಮಾಡಿಸಿ

ಸದಸ್ಯ ಜಯವಿಕ್ರಮ ಕಲ್ಲಾಪು ಮಾತನಾಡಿ, ರಸ್ತೆ ಬದಿಯ ಚರಂಡಿ ಅವ್ಯವಸ್ಥೆಯಿಂದ ಕೂಡಿದೆ. ಮುಂಗಾರಿಗೆ ಮುನ್ನ ಚರಂಡಿ ದುರಸ್ತಿ ನಡೆಸುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುವಂತೆ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next