ಚಿತ್ತಾಪುರ: ರಾಜ್ಯ ಸರ್ಕಾರದಿಂದ ದೊರೆತಿರುವ ಅಲ್ಪಾವಧಿಯಲ್ಲಿ ಕೋಲಿ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಜಗನ್ನಾಥ ಜಮಾದಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕೋಲಿ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೋಲಿ ಸಮಾಜ ಆರ್ಥಿಕವಾಗಿ ತುಂಬಾ ಹಿಂದುಳಿದಿದೆ. ಆದ್ದರಿಂದ ಗುಡಿ ಕೈಗಾರಿಕೆ, ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ನೀಡಿ ಆರ್ಥಿಕ ಪ್ರಗತಿ ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸುವ ಮೂಲಕ ಸಮಾಜದ ಸ್ಥಿತಿಗತಿ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಿಗಮದಲ್ಲಿ ದೊರೆಯುವ ಎಲ್ಲ ಯೋಜನೆ, ಸೌಲಭ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗುವುದು. ಜನರ ಮನೆ ಬಾಗಿಲಿಗೆ ಸೌಲಭ್ಯತಲುಪಿಸುವ ಕೆಲಸ ನಿಗಮದಿಂದ ಮಾಡಲಾಗುವುದು. ಜನರು ಸೌಲಭ್ಯ ಪಡೆಯಲು ವಿಳಂಬ ಮಾಡದೇ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಕಾಲಮಿತಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.
ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣ ಸಾಲಿ,ಯಾದಗಿರಿ ಜಿಲ್ಲಾ ಟೋಕರೆ ಕೋಲಿ ಸಮಾಜದ ಅಧ್ಯಕ್ಷ ಉಮೇಶ ಮುದ್ನಾಳ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಹಣಮಂತ ಸಂಕನೂರ, ಗೌರವಾಧ್ಯಕ್ಷ ದೇವಿಂದ್ರ ತಳವಾರ, ತಾಪಂ ಸದಸ್ಯ ಮುನಿಯಪ್ಪ ಕೊಳ್ಳಿ, ಮುಖಂಡರಾದ ಅಣ್ಣಾರಾವ ಸಣ್ಣೂರಕರ್, ಸುರೇಶ ಬೆನಕನಳ್ಳಿ, ಬಸವರಾಜ ಚಿಮ್ಮನಳ್ಳಿ, ಭೀಮರಾಯ ಹೋತಿನಮಡಿ, ರಾಮಲಿಂಗ ಬಾನಾರ, ಶರಣಪ್ಪ ನಾಶಿ, ಗುರುನಾಥ ಗುದಗಲ್, ವೆಂಕಟರಮಣ ಬೇವಿನಗಿಡ, ಶಿವಪುತ್ರಪ್ಪ ಮ್ಯಾಗೇರಿ, ಚಂದ್ರು ಕಾಳಗಿ, ಸಾಬಣ್ಣ ಡಿಗ್ಗಿ, ರಾಜೇಂದ್ರ ಅರಣಕಲ್, ಸಿದ್ದು ಸಂಗಾವಿ, ನಾಗಣ್ಣ, ನಾಗರಾಜ, ಮಹಾದೇವ ಬೂನಿ, ಶರಣು ಸಿದ್ರಾಮಗೋಳ,
ವಿಶ್ವನಾಥ ಸಾಲಿ ಇದ್ದರು. ಕರಣಕುಮಾರ ಅಲ್ಲೂರ ನಿರೂಪಿಸಿದರು. ಶರಣು ಡೋಣಗಾಂವ ವಂದಿಸಿದರು.