Advertisement
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ಜಿಲ್ಲೆಯ ಸಹಕಾರ ಸಂಘಗಳ ಸಹಯೋಗದೊಂದಿಗೆ ಉರ್ವ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ 70ನೇ ಅಖೀಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಹಕಾರಿ ಕ್ಷೇತ್ರದಲ್ಲಿ ಜಾತ್ಯತೀತ ಹಾಗೂ ಪûಾತೀತವಾಗಿ ಕರ್ತ ವ್ಯ ನಿರ್ವಹಿಸಬೇಕು. ಡಾ| ಎಂ. ಎನ್. ರಾಜೇಂದ್ರ ಕುಮಾರ್ ಯಶಸ್ವಿ ಸಹಕಾರಿ ತಜ್ಞನಾಗಿ ಜನರ ನಿರೀಕ್ಷೆಗೆ ತಕ್ಕ ಹಾಗೆ ಕಾರ್ಯ ನಿರ್ವ ಹಿಸಿದ್ದಲ್ಲದೆ ವಾಣಿಜ್ಯ ಬ್ಯಾಂಕ್‌ಗಳಿಗೆ ಸಮಾನವಾಗಿ ಸ್ಪರ್ಧೆ ನೀಡುವ ಮಟ್ಟಕ್ಕೆ ಸಹಕಾರಿ ಕ್ಷೇತ್ರವನ್ನು ಬೆಳೆಸಿದ್ದಾರೆ ಎಂದರು.
ಶಾಸಕ ಹಾಗೂ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾತನಾಡಿ, ಸಹಕಾರಿ ಆಂದೋಲನದತ್ತ ಯುವಜನರು ಆಸಕ್ತಿ ತಳೆಯಬೇಕು ಎಂದರು.
Related Articles
Advertisement
ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ವಂದಿಸಿದರು. ಬಾಲಕೃಷ್ಣ ನಿರೂಪಿಸಿದರು.ಕಾರ್ಯಕ್ರಮದ ಪೂರ್ವದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಬಳಿಯಿಂದ ಉರ್ವ ಮೈದಾನದವರೆಗೆ “ಸಹಕಾರ ಜಾಥಾ’ ಸಾಗಿಬಂತು. ಸಮಾವೇಶದಲ್ಲಿ ನಂದಿನಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಿಳಾ ಸ್ವಾವಲಂಬನೆ:
ಡಾ| ಎಂ.ಎನ್.ಆರ್. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷಡಾ| ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಯಾವುದೇ
ಕ್ಷೇತ್ರದ ಅಭಿವೃದ್ಧಿ ಸಹಕಾರದಿಂದ ಮಾತ್ರ ಸಾಧ್ಯ. ಇದನ್ನು ಮನಗಂಡು ಕೇಂದ್ರ ಸರಕಾರವು ಸಹಕಾರ ಕ್ಷೇತ್ರಕ್ಕೆ
ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ಸಹಕಾರ ಕ್ಷೇತ್ರವನ್ನು ಇನ್ನಷ್ಟು ಬಲ ಗೊಳಿಸಿದೆ. ಅವಿಭಜಿತ ಜಿಲ್ಲೆಯಲ್ಲಿ ಮಹಿಳೆಯರು ಸ್ವಾವಲಂಬನೆ ಆಗಿ ರುವುದು ಸಹಕಾರಿ ಕ್ಷೇತ್ರದ ಮೂಲಕ. ಇನ್ನಷ್ಟು ಜನರ ಸೇವೆಯ ಕ್ಷೇತ್ರವಾಗಿ ಸಹಕಾರಿ ಕ್ಷೇತ್ರ ಬೆಳೆ ಯಲಿ ಎಂದು ಆಶಿಸಿದರು. ಪ್ರಶಸ್ತಿ ಪ್ರದಾನ
ಮೂಡುಬಿದಿರೆ ಸೇವಾ ಸಹಕಾರಿ ಸಂಘ ನಿ. ಮಂಗಳೂರು, ಬ್ರಹ್ಮಾವರ ವ್ಯವಸಾಯ ಸೇ.ಸ. ಸಂಘ-ಉಡುಪಿ, ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪ್‌ಸೊಸೈಟಿ ಲಿ. ಮಂಗಳೂರು, ಶ್ರೀ ಚೀರುಂಬಾ ಕ್ರೆಡಿಟ್ ಕೋ-ಆಪ್ ಸೊಸೈಟಿ, ಬಡಗಬೆಟ್ಟು ಕ್ರೆಡಿಟ್ ಕೋ-ಆಪ್. ಸೊಸೈಟಿ ಉಡುಪಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು, ಆದರ್ಶ ವಿವಿಧೋದ್ದೇಶ ಸ.ಸಂಘ ಮಂಗಳೂರು, ಎಸ್.ಕೆ. ಗೋಲ್ಡ್‌ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪ್ ಸೊಸೈಟಿ ಮಂಗಳೂರು, ಮಹಾಲಕ್ಷ್ಮೀ ಕೋ-ಆಪ್ ಬ್ಯಾಂಕ್ ಉಡುಪಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌ. ಸಹಕಾರಿ ಮಂಗಳೂರು, ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರ ಸಂಘ, ಕೊಡವೂರು ಹಾಲು ಉತ್ಪಾದಕರ ಸಹಕಾರಿ ಸಂಘ ಉಡುಪಿ, ಮಂಗಳೂರು ಯಾಂತ್ರಿಕ ಮೀನುಗಾರರ ಸಹಕಾರಿ ಸಂಘ, ಬೀಜಾಡಿ ಮೀನುಗಾರರ ಸಹಕಾರಿ ಸಂಘ ನಿ. ಕುಂದಾಪುರ, ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಉಡುಪಿಗೆ “ಉತ್ತಮ ಸಹಕಾರ ಸಂಘಗಳು’ ಪ್ರಶಸ್ತಿ ಮತ್ತು ಸುಳ್ಯದ ಕನಕಮಜಲು ದುರ್ಗಾಂಬಿಕಾ ನವೋದಯ ಸ್ವಸಹಾಯ ಸಂಘ ಹಾಗೂ ಕುಂದಾಪುರ ಅಂಪಾರಿನ ನವ್ಯ ನವೋದಯ ಸ್ವಸಹಾಯ ಸಂಘಕ್ಕೆ ಉತ್ತಮ ನವೋದಯ ಸಂಘಗಳು ಪ್ರಶಸ್ತಿ ಪ್ರದಾನ ಮಾಡಲಾಯಿತು.