Advertisement
ತಾಲೂಕಿನ ರಾಮನಾಥಪುರ ಗ್ರಾಮದ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳಾ ಸಬಲೀಕರಣ, ಪ.ಜಾತಿ ಮತ್ತು ಪಂಗಡಗಳ ಮೇಲಾಗುತ್ತಿರುವ ದೌರ್ಜನ್ಯ ತಡೆ ನಿಯಂತ್ರಣ ಕಾಯ್ದೆ, ಜಿಲ್ಲಾ ಜಾಗೃತಿ ಸಮಿತಿಯ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಸೌಲಭ್ಯ ಪ್ರತಿ ಅರ್ಹ ಫಲಾನುಭವಿಗಳು ಹೇಗೆ ಪಡೆದುಕೊಳ್ಳಬಹುದೆಂಬುವುದನ್ನು ಕಲಾತಂಡದ ಮೂಲಕ ಬೀದಿನಾಟಕ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ.
Related Articles
Advertisement
ಸೌಲಭ್ಯ ಪಡೆದುಕೊಳ್ಳಲು ಮುಂದಾಗಿ: ಜಿಲ್ಲಾ ಜಾಗೃತಿ ಸಮಿತಿ ಹಾಗೂ ಉಸ್ತುವಾರಿ ಸಮಿತಿ ಸದಸ್ಯೆ ಎಸ್. ರವಿಕಲಾ ಮಾತನಾಡಿ, ಪ್ರತಿಯೊಬ್ಬರೂ ಇದರ ಬಗ್ಗೆ ತಿಳಿದುಕೊಂಡು ಇಲಾಖೆ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕು. ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಗಿದೆ.
ಪ.ಜಾತಿ, ಪಂಗಡದವರ ಸಮಗ್ರ ಶ್ರೇಯೋಭಿ ವೃದ್ಧಿಗಾಗಿ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯಗಳಾದ ವಿದ್ಯಾರ್ಥಿವೇತನ, ವಿದೇಶ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಗರಿಷ್ಠ 10 ಲಕ್ಷ ರೂ. ಸಹಾಯಧನ ಮಂಜೂರು, ನಿರುದ್ಯೋಗಿಗಳಿಗೆ ಲಘುವಾಹನ ತರಬೇತಿ, ಸರಳ ವಿವಾಹಕ್ಕೆ ಇಲಾಖೆಯಿಂದ 50 ಸಾವಿರ ರೂ.ಪ್ರೋತ್ಸಾಹಧನ ಮಂಜೂರು, ಹೀಗೆ ಹಲವಾರು ಯೋಜನೆಗಳ ಮಾಹಿತಿ ನೀಡುವ ಕಾರ್ಯವಾಗುತ್ತಿದೆ ಎಂದರು.
ತಾಲೂಕಿನ ಇಂಡ್ರಸನಹಳ್ಳಿ, ಕುಂದಾಣ, ರಾಮನಾಥಪುರ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಜಿಲ್ಲಾ ಜಾಗೃತಿ ವೇದಿಕೆ ಹಾಗೂ ಉಸ್ತುವಾರಿ ಸಮಿತಿ ಸದಸ್ಯೆ ಎಸ್. ರವಿಕಲಾ, ಕೊಯಿರ ಗ್ರಾಪಂ ಕಾರ್ಯದರ್ಶಿ ಆದೇಪ್ಪ, ರಾಮನಾಥಪುರ ಗ್ರಾಮದ ಪ.ಜಾತಿ, ಪಂಗಡ ಮಹಿಳೆಯರು, ಮಕ್ಕಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಕಲಾ ತಂಡದವರು ಇದ್ದರು.