Advertisement
ನದಿಗೆ ಬೀಳುವ ಆತಂಕಪ್ರಮುಖವಾಗಿ ಅಪಘಾತವಲಯವಾದ ಕೂಳೂರು ಮೇಲ್ಸೇತುವೆಯಲ್ಲಿ ದೀಪ ಉರಿಯದೆ ಅಪಾಯವಾಗುವ ಸಾಧ್ಯತೆಯಿದೆ. ಕಳೆದ ಬಾರಿ ಇಲ್ಲಿ ಅಪಘಾತವಾದಾಗ ತಡೆಗೋಡೆ ಕುಸಿದು ಬಿದ್ದಿದ್ದು ಇನ್ನೂ ದುರಸ್ತಿಯಾಗಿಲ್ಲ. ದ್ವಿಚಕ್ರ, ಘನವಾಹನಗಳು ಸ್ವಲ್ಪ ಎಚ್ಚರ ತಪ್ಪಿದರೂ ಪಲ್ಗುಣಿ ನದಿಗೆ ಬೀಳುವ ಆತಂಕವಿದೆ. ಹೀಗಾಗಿ ಇಲ್ಲಿನ ಬೀದಿ ದೀಪವನ್ನು ಮಳೆಗಾಲದ ಮುನ್ನ ದುರಸ್ತಿ ಪಡಿಸಿ ಬೆಳಗುವಂತೆಮಾಡಬೇಕಾಗಿದೆ.
ಕೈಗಾರಿಕಾ ಪ್ರದೇಶದ ಹೆದ್ದಾರಿಯಲ್ಲಿ ಹೈಮಾಸ್ಟ್ ಅಳವಡಿಸಬೇಕಿದೆ. ಸಾವಿರಾರು ಕಾರ್ಮಿಕರು ರಾತ್ರಿ ಸಮಯ ಇಲ್ಲಿ ಆತಂಕದಿಂದಲೇ ರಸ್ತೆ ದಾಟಬೇಕಾಗಿದೆ. ವೇಗವಾಗಿ ಬರುವ ವಾಹನಗಳಿಗೆ ಪಾದಚಾರಿಗಳು ಕತ್ತಲಲ್ಲಿ ಕಾಣುವುದು ಕಷ್ಟ. ಅಲ್ಲದೆ ಇಲ್ಲಿ ಯಾವುದೇ ಭದ್ರತೆಯೂ ಇಲ್ಲ. ರಸ್ತೆ ಬದಿ ನಿಂತ ಕಾರ್ಮಿಕರನ್ನು ದೋಚುವ ತಂಡಗಳು ಬೀದಿ ದೀಪದ ಅವ್ಯವಸ್ಥೆಯ ಲಾಭ ಪಡೆದುಕೊಳ್ಳುವ ಸಾಧ್ಯತೆಯೂ ಇದೆ. ಹಿಂದೆ ಇಂತಹ ಪ್ರಕರಣಗಳು ಆದ ಬಗ್ಗೆ ಠಾಣೆಯಲ್ಲಿ ದೂರುಗಳು ದಾಖಲಾಗಿವೆ. ದುರಸ್ತಿಗೆ ಸೂಚಿಸಲಾಗುವುದು
ಬೀದಿ ದೀಪಗಳ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಪ್ರತೀ ಬಾರಿ ದೂರುಗಳು ಬಂದಾಗ ದುರಸ್ತಿಗೆ ಸೂಚಿಸಲಾಗಿದೆ. ಯಾವ ಭಾಗದಲ್ಲಿ ಹಾಳಾಗಿದೆ ಅಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗುವುದು.
– ವಿಜಯ್ ಸ್ಯಾಮ್ಸನ್,
ಹೆದ್ದಾರಿ ಪ್ರಾಧಿಕಾರದ ಅಧಿಕಾರಿ.