Advertisement
ಕಂಚಿನಕೊಡ್ಲು – ಆಲೂರು ಕ್ರಾಸ್‌ನಿಂದ ಕಳಿಯ ತನಕ ಚಿತ್ತೂರು, ವಂಡ್ಸೆ, ಆಲೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಹಾದು ಹೋಗುವ ಈ ರಸ್ತೆಯನ್ನು ನೂರಾರು ಕುಟುಂಬಗಳು ಆಶ್ರಯಿಸಿದ್ದು, ಪ್ರತಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿವೆ.
ಆದರೆ ಈ ರಸ್ತೆಗೆ ದಾರಿದೀಪದ ವ್ಯವಸ್ಥೆಯಾ ಗಲಿ, ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಮಾತ್ರವಲ್ಲದೆ ಸೂಚನಾ ಫಲಕ, ರಸ್ತೆತಡೆ ಸೂಚನೆ ಯಾವುದೂ ಇಲ್ಲ. ದಿನಂಪ್ರತಿ ಸಾವಿರಾರು ವಾಹನಗಳು ಈ ಮಾರ್ಗ ದಲ್ಲಿ ಸಂಚರಿಸುತ್ತಿದ್ದು ಅಪಘಾತಗಳು ಸಹ ಸಂಭವಿಸುತ್ತಲೇ ಇವೆ. ಕೆಲವೊಂದು ಕಡೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರು ರಸ್ತೆಯ ಮೇಲೆ ಹರಿದು ಹೋಗುತ್ತಿದ್ದು, ಕೆಲವೆಡೆ ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇದೇ ಮಾರ್ಗ ದಲ್ಲಿ ಸರಕಾರಿ ಶಾಲೆ ಯೊಂದಿದ್ದು, ಅದರ ಸಮೀಪ ಸುರಕ್ಷತೆಯ ಬಗ್ಗೆ ರಸ್ತೆತಡೆ ಅಥವಾ ವೇಗಮಿತಿಗೆ ಸಂಬಂಧಪಟ್ಟಂತೆ ಯಾವುದೇ ಸೂಚನಾ ಫಲಕದ ವ್ಯವಸ್ಥೆಯೂ ಇಲ್ಲಿಲ್ಲ.
Related Articles
ಹಲವಾರು ಬಾರಿ ಸ್ಥಳೀಯ ನಾಗರಿಕರು ಜನಪ್ರತಿನಿಧಿಗಳಲ್ಲಿ ಅಧಿಕಾರಿಗಳಲ್ಲಿ ಈ ಬಗ್ಗೆ ತಮ್ಮ ಅಳಲು ತೋಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಈಗಲಾದರೂ ಈ ರಸ್ತೆಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು.
-ಎಚ್. ಆನಂದ ಮಡಿವಾಳ, ನ್ಯಾಯವಾದಿ, ಸ್ಥಳೀಯರು
Advertisement
ಚರಂಡಿ ನಿರ್ಮಾಣಕ್ಕೆ ಕ್ರಮಆಲೂರು ಜಿಲ್ಲಾ ಮುಖ್ಯ ರಸ್ತೆಯ ಬಾಕಿ ಇರುವ ಕಡೆಗಳಲ್ಲಿ ಚರಂಡಿ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಬೀದಿ ದೀಪಗಳನ್ನು ಸಂಬಂಧಪಟ್ಟ ಪಂಚಾ ಯತ್ ನವರು ವ್ಯವಸ್ಥೆ ಮಾಡಬೇಕು. ಇನ್ನು ಶಾಲೆಯ ಸಮೀಪ ಸೂಚನಾ ಫಲಕಗಳನ್ನು ಇಲಾಖೆಯಿಂದ ಮಾಡಲಾಗುವುದು.
-ದುರ್ಗಾದಾಸ್, ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ