Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಬೀದಿ ನಾಟಕ ಕಾರ್ಯಕ್ರಮ

01:57 PM Aug 28, 2021 | Team Udayavani |

ಮೂಡಿಗೆರೆ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೂಡಿಗೆರೆ ತಾಲ್ಲೂಕಿನ ಮೂಡಿಗೆರೆ ಕಸಬಾ ವಲಯದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಂದೀಪುರದ ಕನ್ನಾಪುರದಲ್ಲಿ ಬೀದಿ ನಾಟಕ ಕಾರ್ಯಕ್ರಮ ವನ್ನು ನಡೆಸಲಾಯಿತು .

Advertisement

ಕಾರ್ಯಕ್ರಮದಲ್ಲಿ ಕೋವಿಡ್‌  ಬಗ್ಗೆ ಜಾಗೃತಿ ಮೂಡಿಸುವುದು, ಸ್ವಚ್ಛತೆ, ಬಾಲ್ಯ ವಿವಾಹ, ದುಶ್ಚಟ ಮುಕ್ತ ಜೀವನ,  ಆರೋಗ್ಯ, ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಮುಂತಾದವುಗಳನ್ನು  ನಾಟಕದ ಮುಖಾಂತರ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಗೂ ಧರ್ಮಸ್ಥಳದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ಇದನ್ನೂ ಓದಿ:ಎಂಇಎಸ್‌ನೊಂದಿಗೆ ಕೈ ಜೋಡಿಸದಿರಿ : ಕನ್ನಡ ಸಂಘಟನೆಗಳ ಆಗ್ರಹ

ಈ ಕಾರ್ಯಕ್ರಮವನ್ನು ತಾಲ್ಲೂಕಿನ ಯೋಜನಾದಿಕಾರಿಯವರಾದ ಶಿವಾನಂದ.ಪಿ , ರವರು ಉದ್ಘಾಟಿಸುವರು.ರಾಷ್ಟ್ರೀಯ  ವಿಪತ್ತು ನಿರ್ವಹಣಾ ಘಟಕ ಮೂಡಿಗೆರೆಯ ಸಂಯೋಜಕರಾದ ಪ್ರವೀಣ್ ಪೂಜಾರಿ, ಊರಿನ ಮುಖಂಡರಾದ ರಾಜೇಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಲೋಲಾಕ್ಷಿ, ವಲಯ ಮೇಲ್ವಿಚಾರಕರಾದ ವಿಘ್ನೇಶ್,   ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರೀಮತಿ ಲತಾ , ಸೇವಾಪ್ರತಿನಿಧಿ ಆಯಿಷಾಬಿ,ಒಕ್ಕೂಟ ಪದಾಧಿಕಾರಿ ಕಾವೇರಿ, ಶೃತಿ ಸಾಂಸ್ಕೃತಿಕ ಕಲಾತಂಡದ ವೆಂಕಟೇಶ್ ಹಾಗೂ ಬಳಗ ದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next