Advertisement
148 ಹೆಣ್ಣು, 234 ಗಂಡು ನಾಯಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ, 154 ಗಂಡು, 247 ಹೆಣ್ಣು ನಾಯಿಗೆ ರೇಬಿಸ್ ನಿರೋಧಕ ಲಸಿಕೆ ನೀಡಲಾಗಿದೆ. ಬೀದಿ ನಾಯಿಗಳು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಗೆ ತೀರ ಕಿರಿಕಿರಿಯಾಗಿ ಪರಿಣಮಿಸುತ್ತಿದೆ. ಹಗಲು ರಾತ್ರಿ ಕರ್ಕಶ ವಾಗಿ ಬೊಗಳುವುದು, ವಾಹನಗಳನ್ನು ಹಿಂಬಾಲಿಸಿಕೊಂಡು ಓಡುವುದು, ಸಾರ್ವಜನಿಕರಿಗೆ ಭಯ ಹುಟ್ಟಿಸುವ ಘಟನೆಗಳು ಹೆಚ್ಚುತ್ತಿದೆ. ಈ ನಡುವೆ ನಗರಸಭೆಯಿಂದ ಈ ವರ್ಷದಲ್ಲಿ ಲಸಿಕೆ ನೀಡಿ, ಚಿಕಿತ್ಸೆ ನಿರ್ವಹಿಸಲಾಗಿದೆ.
ಮಲ್ಪೆ ಕೊಳ 18, ಮಲ್ಪೆ ಸೆಂಟ್ರಲ್ 30, ಕೊಡವೂರು 20, ಕಲ್ಮಾಡಿ, ಮೂಡುಬೆಟ್ಟು, ಕೊಡವೂರು ತಲಾ 12, ಸುಬ್ರಹ್ಮಣ್ಯ ನಗರ 19, ಮೂಡುಪೆರಂಪಳ್ಳಿ 30, ಸರಳೇಬೆಟ್ಟು 23, ಶೆಟ್ಟಿಬೆಟ್ಟು 21, ಮಣಿಪಾಲ 17, ಸಗ್ರಿ 11, ಚಿಟಾ³ಡಿ 16, ಒಳಕಾಡು 12, ಅಂಬಲಪಾಡಿ 13 ನಾಯಿಗೆ ರೇಬಿಸ್ ನಿರೋಧಕ ಲಸಿಕೆ ನೀಡಲಾಗಿದೆ. ಸಾವಿರಕ್ಕೂ ಅಧಿಕ ನಾಯಿಗಳಿವೆ
ಪ್ರಮುಖವಾಗಿ ಸಾರ್ವಜನಿಕ ಸ್ಥಳದಲ್ಲಿ ಬೀದಿನಾಯಿಗಳ ಗುಂಪು ಹೆಚ್ಚಾಗುತ್ತಿದೆ. ಮಕ್ಕಳು ಆಟವಾಡುವ ಪಾರ್ಕ್‌ಗಳು, ಸರ್ವಿಸ್, ಸಿಟಿ ಬಸ್ ನಿಲ್ದಾಣ, ಮಣಿಪಾಲ ಬಸ್ ನಿಲ್ದಾಣ, ಮಲ್ಪೆ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆ ಬೀದಿ ನಾಯಿಗಳು ಕಂಡು ಬರುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಬೀದಿ ನಾಯಿಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಸಾವಿರಕ್ಕೂ ಅಧಿಕ ಬೀದಿ ನಾಯಿಗಳು ನಗರದಲ್ಲಿವೆ. ಸಾರ್ವಜನಿಕರಿಗೆ ಇವುಗಳಿಂದ ಸಮಸ್ಯೆ ಆಗದಂತೆ ನಗರಸಭೆ ಎಚ್ಚರ ವಹಿಸಬೇಕು ಎಂಬ ಆಗ್ರಹವಿದೆ.
Related Articles
ಜನವರಿಯಲ್ಲಿ ಕಾರ್ಯಾಚರಣೆ ನಡೆದಿದ್ದು, ಲಸಿಕೆ, ಸಂತಾನಶಕ್ತಿಹರಣ ಪ್ರಕ್ರಿಯೆ ನಡೆಸಿದ ಗುತ್ತಿಗೆ ಪಡೆದ ಎನ್‌ಜಿಒ ಸಂಸ್ಥೆ ನಗರಸಭೆಗೆ 5 ಲಕ್ಷ ರೂ., ಬಿಲ್ ನೀಡಿದೆ. ಇಷ್ಟೆಲ್ಲ ಆಗಿಯೂ ನಗರ ವ್ಯಾಪ್ತಿಯ ಕೆಲವೆಡೆ ಶ್ವಾನ ಕಾರ್ಯಾಚರಣೆ ಸಮರ್ಪಕವಾಗಿಲ್ಲ ಎಂದು ನಗರಸಭಾ ಸದಸ್ಯರು ಆರೋಪಿಸುತ್ತಾರೆ. ಮುಂದಿನ ಹಂತದಲ್ಲಿ ಸ್ಥಳೀಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದು ಸಲಹೆಗಳನ್ನು ಪರಿಗಣಿಸಿ ಕಾರ್ಯಾಚರಣೆ ನಡೆಯಬೇಕು ಎಂಬುದು ಸರ್ವ ಸದಸ್ಯರ ಅಭಿಪ್ರಾಯವಾಗಿದೆ.
Advertisement
ಬೀದಿನಾಯಿಗಳ ನಿಯಂತ್ರಣಕ್ಕೆ ನಗರಸಭೆ ವತಿಯಿಂದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಬೀದಿನಾಯಿಗಳ ಲಸಿಕೆ ಮತ್ತು ಸಂತಾನಶಕ್ತಿಹರಣ ಚಿಕಿತ್ಸೆ ನೀಡುವ ತಂಡಗಳು ಸಮರ್ಪಕ ವ್ಯವಸ್ಥೆಯೊಂದಿಗೆ ಕಾರ್ಯಾಚರಿಸಲು ಸೂಚನೆ ನೀಡಲಾಗುವುದು.– ಸುಮಿತ್ರಾ ನಾಯಕ್, ಅಧ್ಯಕ್ಷೆ, ಉಡುಪಿ ನಗರಸಭೆ.