Advertisement

ಸ್ವಚ್ಛತೆ ಅರಿವಿಗಾಗಿ ಬೀದಿನಾಟಕ

06:54 AM Mar 04, 2019 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿ ಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಮೋಪರಹಳ್ಳಿ ಗ್ರಾಮದಲ್ಲಿ ಸ್ವತ್ಛತಾ ಮಿಷನ್‌ ಯೋಜನೆಯಡಿ ನೆಲಮಂಗಲ ವಿಕಾಸ ನಾಟಕ ಸಂಸ್ಥೆ ಕಲಾವಿದರು ಸ್ವತ್ಛತೆ ಕುರಿತ ಬೀದಿ ನಾಟಕ ಪ್ರದರ್ಶಿಸಿದರು.

Advertisement

ಇತ್ತೀಚಿನ ದಿನಗಳಲ್ಲಿ ಪರಿಸರಕ್ಕೆ ಆಗು ತ್ತಿರುವ ಅನಾಹುತಗಳನ್ನು ತಪ್ಪಿಸುವ, ಸ್ವತ್ಛತೆಯ ಬಗ್ಗೆ ಅರಿವು, ನೀರಿನ ಮಹತ್ವ,ಆರೋಗ್ಯದ ಕಾಳಜಿ, ಹಸಿ ಕಸ, ಒಣ ಕಸದ ವಿಲೇವಾರಿ, ಶಿಕ್ಷಣದ ಮಹತ್ವ ಹೀಗೆ ಹಲವಾರು ವಿಚಾರಗಳ ಕುರಿತು ಗ್ರಾಮೀಣ ಜನರಿಗೆ ಮನಮುಟ್ಟುವಂತೆ ನಾಟಕದ ಮೂಲಕ ತಿಳಿವಳಿಕೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಾರಾಯಣಮ್ಮ, ಡೆಂ à ರೋಗ ಹಾಗೂ ಸ್ವತ್ಛತೆ, ನೈರ್ಮಲ್ಯದ ಬಗ್ಗೆ ನಾಟಕದ ಮೂಲಕ ಗ್ರಾಮೀಣ ನಾಗರಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಾಧ್ಯಾಪಕ ಡಾ.ಎಂ.ಚಿಕ್ಕಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಧಾರವಾಹಿಗಳು ಹಾಗೂ ಸಿನಿಮಾಗಳು ಜನರಲ್ಲಿನ ಈ ರೀತಿಯ ನಾಟಕ ಪ್ರದರ್ಶಗಳನ್ನು ವೀಕ್ಷಿಸುವ ಮನೋಭಾವನೆಯನ್ನುದೂರ ಮಾಡಿವೆ. ಆದರೆ, ಈ ರೀತಿಯ ನಾಟಕಗಳು ನಿಜಕ್ಕೂ ಒಳ್ಳೆಯ ಸಂದೇಶಗಳನ್ನು ನೀಡುತ್ತವೆ. ನಾಟಕ ನೋಡುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿರುವುದು ತೀರಾ ಬೇಸರದ ಸಂಗತಿ ಎಂದು ವಿಷಾದಿಸಿದರು. ಈ ವೇಳೆ ಸ್ಥಳೀಯ ಮುಖಂಡರಾದ ಮುನಿಶಂಕರ್‌, ಚಂದ್ರ ಶೇಖರ, ನಾಗರಾಜ್‌,ರಾಮಣ್ಣ ಮುಂತಾದವರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next