Advertisement

ನಗರದಲ್ಲಿ ಹೆಚ್ಚುತ್ತಿದೆ ಬೀದಿ ನಾಯಿಗಳ ಉಪಟಳ

03:27 PM May 28, 2023 | Team Udayavani |

ಮಹಾನಗರ: ನಗರದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

Advertisement

ನಗರದ ಶಕ್ತಿನಗರ, ಪ್ರೀತಿನಗರ, ಬಿಕರ್ನಕಟ್ಟೆ, ಉರ್ವಸ್ಟೋರ್‌, ಪಚ್ಚನಾಡಿ, ವಾಮಂಜೂರು, ಕದ್ರಿ, ಕೊಟ್ಟಾರ, ಸುರತ್ಕಲ್‌, ದಡ್ಡಲಕಾಡು, ಮಣ್ಣಗುಡ್ಡೆ, ಉರ್ವ ಸಹಿತ ವಿವಿಧ ಕಡೆಗಳಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗುತ್ತಿದೆ.

ವಾಹನಗಳನ್ನು ಅಟ್ಟಾಡಿಸುತ್ತಿದ್ದು, ಚಾಲಕ ರಿಗೆ ಅಪಾಯ ಒಡ್ಡುತ್ತಿದೆ. ಇನ್ನು, ನಾಯಿ, ಬೆಕ್ಕಿನ ಮರಿಗಳನ್ನು ಮನೆಗಳಲ್ಲಿ ಸಾಕಲು ಸಾಧ್ಯವಾಗದ ಮಂದಿ ಪಚ್ಚನಾಡಿ, ಮಂಗಳಾ ಜ್ಯೋತಿ, ಆಶ್ರಯನಗರ, ಸಂತೋಷ್‌ ನಗರ, ದೇವಿನಗರ ಮುಂತಾದ ಕಡೆಗಳಲ್ಲಿ ಬಿಡುತ್ತಿದ್ದಾರೆ. ಈ ರೀತಿ ನಾಯಿ, ಬೆಕ್ಕಿನ ಮರಿಗಳನ್ನು ತಂದು ಬಿಡುವವುದನ್ನು ಖಂಡಿಸಿ ಮಂಗಳಜ್ಯೋತಿ ನಗರದಲ್ಲಿ ಬರೆದ ಬ್ಯಾನರ್‌ ಇತ್ತೀಚೆಗೆ ಅಳವಡಿಸಲಾಗಿತ್ತು.

ಪರಿಹಾರ ಬೇಕಿದೆ
ಶಕ್ತಿನಗರದ ರೊನಾಲ್ಡ್‌ ಎಸ್‌. ಕುವೆಲ್ಲೋ ಪ್ರತಿಕ್ರಿಯಿಸಿ, “ಬಿಕರ್ನಕಟ್ಟೆ ಕ್ರಾಸ್‌ನಿಂದ ಶಕ್ತಿನಗರದ ಪ್ರೀತಿನಗರಕ್ಕೆ ನಾನು ಪ್ರತೀ ದಿನ ಕೆಲಸದ ನಿಮಿತ್ತ ತೆರಳುತ್ತೇನೆ. 25ರಿಂದ 30 ಬೀದಿ ನಾಯಿಗಳು ದಾರಿಯುದ್ದಕ್ಕೂ ದ್ವಿಚಕ್ರ ವಾಹನ, ಕಾರಿನಲ್ಲಿ ಹೋಗುವವರಿಗೆ ತೊಂದರೆ ನೀಡುತ್ತಿವೆ. ರಾತ್ರಿ ವೇಳೆ ಕೆಲವೊಂದು ನಾಯಿಗಳು ಕಚ್ಚಲು ಬರುತ್ತಿವೆ. ಬೀದಿನಾಯಿಗಳ ಈ ರೀತಿಯ ಉಪಟಳಕ್ಕೆ ಪರಿಹಾರ ಬೇಕಿದೆ’ ಎನ್ನುತ್ತಾರೆ.

ಸಮೀಕ್ಷೆಗೆ
ಮುಂದಾಗಬೇಕಿದೆ ಪಾಲಿಕೆ
ನಗರದ ವಿವಿಧ ಕಡೆಗಳಲ್ಲಿ ಬೀದಿ ನಾಯಿಗಳು ಗುಂಪಾಗಿ ಕಾಣಸಿಗುತ್ತಿವೆ. ಇದರ ಪಕ್ಕಾ ಲೆಕ್ಕಾಚಾರ ಪಾಲಿಕೆಯ ಬಳಿ ಇಲ್ಲ. ವರ್ಷಂಪ್ರತಿ ಬೀದಿಗಳ ಸರ್ವೇ ನಡೆಸಬೇಕು ಎಂಬ ಸೂಚನೆ ಇದ್ದರೂ ಪಾಲಿಕೆ ಇತ್ತೀಚಿನ ದಿನಗಳಲ್ಲಿ ಈ ಸಮೀಕ್ಷೆ ನಡೆಸಿಲ್ಲ. ಇನ್ನ ದರೂ ಸಮೀಕ್ಷೆಗೆ ಮುಂದಾಗಬೇಕಿದೆ. ಬೀದಿ ನಾಯಿಗಳ ನಿಯಂತ್ರಣದ ಉದ್ದೇಶದಿಂದ ಶ್ವಾನಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಲಾಗಿದೆ.

Advertisement

ಶಕ್ತಿನಗರದ ಎನಿಮಲ್‌ ಕೇರ್‌ ಟ್ರಸ್ಟ್‌ನಿಂದ ಚಿಕಿತ್ಸೆ ನೀಡಲಾಗುತ್ತದೆ/ ಬೀದಿನಾಯಿಗಳನ್ನು ಬಲೆಯನ್ನು ಉಪಯೋಗಿಸಿ ಹಿಡಿಯ ಲಾಗುತ್ತದೆ. ಬಳಿಕ ಪಾಲಿಕೆಯ ಸಹಕಾರ ದೊಂದಿಗೆ ಎನಿಮಲ್‌ ಕೇರ್‌ ಸಂಸ್ಥೆಗೆ ತಲುಪಿಸಲಾಗುತ್ತದೆ.

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ ಅನಂತರ ನಾಲ್ಕು ದಿನಗಳ ಕಾಲ ಅವು ಗಳನ್ನು ಆರೈಕೆ ಮಾಡಲಾಗುತ್ತದೆ. ಬಳಿಕ ಯಾವ ಪ್ರದೇಶದಿಂದ ಅವುಗಳನ್ನು ಹಿಡಿದು ತರಲಾಗಿತ್ತೋ, ಅಲ್ಲೇ ಮರಳಿ ಬಿಡಲಾಗುತ್ತದೆ. ಈ ಸಮಯದಲ್ಲಿ ನಾಯಿಗಳಿಗೆ ರೇಬಿಸ್‌ ಚುಚ್ಚುಮದ್ದು ನೀಡಲಾಗುತ್ತದೆ. ಅಲ್ಲದೆ ಸಂತಾನಶಕ್ತಿ ಹರಣ ಮಾಡಿದ ನಾಯಿಯ ಎಡ ಕಿವಿಯಲ್ಲಿ “ವಿ’ ಆಕಾರದಲ್ಲಿ ಮಾರ್ಕ್‌ ಮಾಡಲಾಗುತ್ತದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next