ಅಹಮದಾಬಾದ್: ಭಾನುವಾರ ಕೊಹ್ಲಿ ಒಂದು ಕಡೆ ದ್ವಿಶತಕದತ್ತ ದಾಪುಗಾಲಿಡುತ್ತಿದ್ದರೆ, ಇನ್ನೊಂದು ಜತೆಗಾರರಿಲ್ಲದೇ ಪರದಾಡುತ್ತಿದ್ದರು. ಕೊನೆಯಹಂತದಲ್ಲಿ ಉಳಿದಿದ್ದು ಮೊಹಮ್ಮದ್ ಶಮಿ ಮಾತ್ರ. ಅವರನ್ನು ಉಳಿಸಿಕೊಂಡೇ ಕೊಹ್ಲಿ ಆಡಬೇಕಿತ್ತು. ಆಗ ಸ್ಮಿತ್ ಒಂದು ರಣತಂತ್ರ ಹೆಣೆದರು. ಬೌಲರ್, ವಿಕೆಟ್ ಕೀಪರ್‌ರನ್ನು ಬಿಟ್ಟು ಉಳಿದ ಅಷ್ಟೂ ಕ್ಷೇತ್ರರಕ್ಷಕರನ್ನು ಬೌಂಡರಿ ಗೆರೆ ಬಳಿ ನಿಲ್ಲಿಸಿದರು. ಒಂದೋ ಕೊಹ್ಲಿ ಸಿಂಗಲ್ಸ್ ತೆಗೆದುಕೊಳ್ಳಬೇಕು, ಇಲ್ಲವೇ ಚೆಂಡನ್ನು ಸಿಕ್ಸರ್‌ಗೆ ಬಾರಿಸಬೇಕು! ಎರಡೂ ಅಪಾಯಕಾರಿಯೇ. ಕೊಹ್ಲಿ ಚೆಂಡನ್ನು ಎತ್ತಿ ಬಾರಿಸಲು ಹೋಗಿ ಔಟಾಗಿಯೇಬಿಟ್ಟರು. ಕೊಹ್ಲಿಯ ದ್ವಿಶತಕ ತಪ್ಪಿಸುವ ಸ್ಮಿತ್ ತಂತ್ರ ಯಶಸ್ವಿಯಾಯಿತು.
75
ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 75 ಶತಕ ಬಾರಿಸಿದರು.
28
ಟೆಸ್ಟ್‌ನಲ್ಲಿ ಕೊಹ್ಲಿ 28ನೇ ಶತಕ ಪೂರೈಸಿದ್ದಾರೆ.
46
ಏಕದಿನದಲ್ಲಿ ಕೊಹ್ಲಿ ಶತಕಗಳ ಸಂಖ್ಯೆ 46. ಟಿ20ಯಲ್ಲಿ ಕೇವಲ 1 ಶತಕ ಬಾರಿಸಿದ್ದಾರೆ.