.
.
ಇಂದಿಗೆ ಆರು ತಿಂಗಳಾಯಿತು ಅವಳ ಭೇಟಿ ಮಾಡಿ. ಒಂದು ವರ್ಷದ ಹಿಂದೆ ಅಮ್ಮನಲ್ಲಿ ಹೇಳಿದಾಗ ತಕ್ಷಣ, “”ಬ್ರಾಹ್ಮಣರು ತಾನೇ?” ಎಂದಳು.
“”ಹೌದು” ಎಂದೆ.
“”ನೀನು ಇಷ್ಟಪಟ್ಟಮೇಲೆ ನಮ್ಮ ಮನೆಗೆ ಹೊಂದುವವಳೇ ಎನ್ನುವ ನಂಬಿಕೆಯಿದೆ” ಎಂದರು.
ಅಪ್ಪ-ಅಮ್ಮ ನಮ್ಮ ಮೂವರನ್ನು ಬೆಳೆಸಿದ್ದೇ ಹಾಗೆ. ಇಬ್ಬರು ಅಕ್ಕಂದಿರನ್ನು ಸಹ. ಅಪ್ಪ ಆಗಾಗ ತಮಾಷೆ ಮಾಡುತ್ತಿದ್ದರು ಅಕ್ಕಂದಿರಲ್ಲಿ. “”ಏಯ್, ನೀವು ಯಾರನ್ನಾದರೂ ಲವ್ ಮಾಡಿದ್ರೆ ನನ್ನತ್ರ ಹೇಳಿºಡ್ರಮ್ಮ, ಬೇರೆ ಯಾರೋ ಮೂರನೆಯವರು ಹೇಳ್ಳೋದ್ಕಿಂತ ಮೊದೆÉà ನಾನೇ ನಿಂತು ಮದ್ವೆ ಮಾಡುಸ್ತೀನಿ, ಸುಮ್ನೆ ಓಡ್ಹೊàಗ್ಬೇಡಿ” ಎಂದು ಹೇಳುತ್ತಿದ್ದರು. ಅಮ್ಮನೂ ಅಷ್ಟೆ , ಓದಿದ್ದು ಏಳನೇ ಕ್ಲಾಸಾದ್ರು ವೈಚಾರಿಕತೆಯಲ್ಲಿ ಹಿಂದಿರಲಿಲ್ಲ , ತುಂಬ ಪ್ರಾಕ್ಟಿಕಲ್ ಥಿಂಕಿಂಗ್. ಅಕ್ಕಂದಿರಿಗೆ ಮಡಿ-ಮೈಲಿಗೆ ಕಲಿಸದಿದ್ದರೂ ಬದುಕಿಗೆ ಬೇಕಾದ ಪಾಠಗಳನ್ನು ಚೆನ್ನಾಗಿ ಅರ್ಥ ಮಾಡಿಸಿದ್ದಳು.
Advertisement
ಎಲ್ಲ ಅಮ್ಮಂದಿರು ಮಗಳ ಬಾಣಂತನ ಮುಗ್ಸಿ ಬೀಳ್ಕೊಡುವಾಗ ಲೇಹ್ಯ, ಉಂಡೆ ಮಾತ್ರ ಕಟ್ಟಿ ಕಳಿಸಿದರೆ, ಇವಳು ಮಕ್ಕಳಿಗೆ ಹೇಳುವ ಇಪ್ಪತ್ತು ಹಾಡುಗಳ ಪಲ್ಲವಿ ಬರೆದು, “”ಇಟ್ಕೊà ಬೇಕಾಗತ್ತೆ ಈ ಹಾಡುಗಳು. ಎದ್ರಿಗೆ ಇಟ್ಕೊà ಈ ಹಾಳೆನ, ಶಿಶುಗಳ ಪ್ರಪಂಚಾನು ಸಮೃದ್ಧವಾಗಿರಬೇಕು” ಎಂದಿದ್ದಳು. ನನ್ನ ಅಕ್ಕನೋ ಇಂತಹದ್ದಕ್ಕೆಲ್ಲ ಸೋಮಾರಿ. ಅದ್ಯಾವುದೋ “ಮುದ್ದುಕೋಳಿ’ ಹಾಡು, ಆಮೇಲೆ “ಭಾರತ ರತ್ನವು ನೀನಾಗು’ ಎರಡೇ ಹಾಡಲ್ಲಿ ಎರಡು ಮಕ್ಕಳನ್ನ ದೊಡ್ಡ ಮಾಡಿ¨ªಾಳೆ.
.
.
ಈಗಲೂ ಪ್ರತಿಯೊಂದು ಸಂಭಾಷಣೆಗಳೂ ಹೋದ ವಾರ¨ªೆಂಬಂತೆ ಹಚØಹಸಿರಾಗಿದೆ.
“”ನನ್ನ ಇಂಜಿನಿಯರಿಂಗ್ ಮುಗಿದು ನನಗೆ ಜಾಬ್ ಸಿಕ್ಕಿದ ಮೇಲಷ್ಟೇ ನಮ್ಮ ಮದುವೆ, ಈಗ್ಲೆ ಕನಸು ಕಾಣಬೇಡ”
“”ಓಹೋ ನಾನಾ ಮದ್ವೆ ಕನಸು ಕಾಣೋದು, ಮದ್ವೆ ಬೇಗ ಆಗಿºಟ್ರೆ ತುಂಬಾ ಕಮಿಟ್‌ಮೆಂಟ್ಸ್ , ಹೀಗೆ ಒಂದೆರಡು ವರ್ಷ ಆರಾಮಾಗಿ ಇರೋಣ ಕಣೆ. ಪ್ರಪಂಚದಲ್ಲಿ ಅತ್ಯಂತ ಸುಖೀಗಳು ಪ್ರೇಮಿಗಳಂತೆ”
Related Articles
Advertisement
“”ಈ ಪ್ರಕೃತಿನೇ ಹಾಗೆ ಕಣೆ, ಅದು ಆಕರ್ಷಿಸೋದು ಕೆಲವರನ್ನ ಮಾತ್ರ”ನನ್ನತ್ರ ಮದುವೆ ಕನಸು ಕಾಣಬೇಡ ಎಂದವಳು ಮಗುವಿನ ಹೆಸರಿನ ಬಗ್ಗೆ ಮಾತಾಡುತ್ತಿದ್ದಳು. “”ನಮ್ಮ ಮಗುವಿನ ಹೆಸರು ನಮ್ಮಿಬ್ಬರ ಹೆಸರಿನ ಅಕ್ಷರಗಳಿಂದಲೇ ಉದ್ಭವವಾಗಬೇಕು, ಬೇರೆ ಯಾವ ಹೆಸರನ್ನು ನಾನು ಒಪ್ಪಲ್ಲ , ಪ್ರ ತೀ ಕ ಕ ವಿ ತ. ಈ ಅಕ್ಷರಗಳನ್ನು ಕೊಟ್ಟು ಬರುವ ಕಾಂಬಿನೇಶನ್‌ಗಳನ್ನೆಲ್ಲ ನೋಡು” “”ಹೋಯ…, ಅರ್ಥವೂ ಇರಬೇಕು, ಸುಮ್ನೆ ಮಾಂಸದ ಮು¨ªೆಗೆ ಹೆಸರಿಟ್ಟ ಹಾಗೆ ಆಗ್ಬಾರ್ದು ಒಟ್ಟಾರೆ ಅಕ್ಷರ ಕೂಡಿÕ . ಮೊನ್ನೆ ನಮ್ ಅಕ್ಕನ ನಾಲ್ಕು ವರ್ಷದ ಮಗನಿಗೆ ಒಂದು ಹೋಮ್‌ವರ್ಕ್ ಕೊಟ್ಟಿದ್ರಂತೆ, Write the meaning of your name ಅಂತ. ನಮ್ಮಕ್ಕ ಫೋನ್‌ನಲ್ಲಿ ಹೇಳ್ತಿದುÉ”
.
.
ಅಯ್ಯೋ ಅಕ್ಕನ ಫೋನ್! ಆ ಕಡೆಯಿಂದ ಕ್ಷೇಮ ಸಮಾಚಾರ ಎಲ್ಲ ವಿಚಾರಿಸಿ ಮತ್ತದೇ ರಾಗ- “ಪ್ರತೀಕ, ಇನ್ನೆಷ್ಟು ದಿನ ಕಾಯುವುದೋ ಅವಳಿಗೆ? ಸ್ವಲ್ಪ ಪ್ರಾಕ್ಟಿಕಲ್ ಆಗಿ ಥಿಂಕ್ ಮಾಡು, ಅವಳಿಗೆ ಟ್ರೈನಿಂಗ್ ಮುಗುª ಪೋಸ್ಟಿಂಗ್ ಆಗಿ ಟ್ರಾನ್ಸ್‌ಫಾರ್ ಸಿಗೋವರೆಗೂ ಕಡಿಮೆ ಅಂದ್ರೂ ಐದಾರು ವರ್ಷ ಆಗಬಹುದು. ನೀನು ವೀಕೆಂಡ್ ಫ್ರೀ ಇರ್ತೀಯ ಮಾತಾಡೋಣ ಅಂತ ಮಾಡಿದೆ’ ಎಂದಳು. ಮುಗುಳ್ನಗೆ, ಮೌನ ಎರಡೇ ನನ್ನ ಉತ್ತರ. ಕಲಿತು ಮುಗಿದ ಬಳಿಕ ಕವಿತಾಳ ಕೆಲಸದ ಬಗ್ಗೆ ಮಾತಾಡಿದರೆ ನನಗೇ ಧೈರ್ಯ ತುಂಬೋಳು ನನ್ನಕ್ಕ. “ನೀನು ವಿಜಯದಶಮಿ ದಿನ ಹುಟ್ಟಿದ್ದಿ ಗೊತ್ತಾ? ನಿನಗೆ ಯಾವತ್ತೂ ಜಯವೇ’
ಅವಳ ಮಾತಿನ ಆತ್ಮವಿಶ್ವಾಸ ನನ್ನನ್ನು ಎತ್ತರಕ್ಕೇರಿಸಿತ್ತು. ಒಂದೇ ಗುಂಡಿಗೆ ನೂರಾರು ಪಾಕ್ ಸೈನಿಕರನ್ನ ಬಗ್ಗುಬಡಿದ ಅನುಭವವಾಗಿತ್ತು. ಲಾಸ್ಟ್ ಸೆಮಿಸ್ಟರ್‌ನಲ್ಲಿದ್ದಳು. ಇನ್ನೇನು ಇಂಜಿನಿಯರಿಂಗ್ ಮುಗಿಯತ್ತೆ. ಕ್ಯಾಂಪಸ್ ಸೆಲೆಕ್ಷನ್ ಆಗಿ ಒಂದು ವರ್ಷ ಜಾಬ್ ಮಾಡಿ ನೆಕ್ಸ್ಟ್ ಮದ್ವೆ ಅಂತೆಲ್ಲ ಪ್ಲಾನ್ ಮಾಡ್ತಿರೋವಾಗ್ಲೆ ಒಂದು ದಿನ ಶಾಕ್ ! ಅವಳು Indian Air Force ಸೆಲೆಕ್ಷನ್‌ಗೆ ಎಕ್ಸಾಮ್ ಬರೆದಿದಾಳಂತೆ, ಸೆಲೆಕ್ಷನ್ ಆಗಿದೆಯಂತೆ, ಸೆಕೆಂಡ್ ರೌಂಡ್‌ನಲ್ಲೂ ಟಾಪ್ ಇದಾಳಂತೆ. ಹೈದರಾಬಾದ್‌ನಲ್ಲಿ ಟ್ರೈನಿಂಗ್ ಅಂತೆ ಆರು ತಿಂಗಳು, ಆಮೇಲೆ ಒಂದು ವರ್ಷ ಮೈಸೂರ್‌ನಲ್ಲಂತೆ ಟ್ರೈನಿಂಗ್. ಟ್ರೈನಿಂಗ್ ಪೀರಿಯಡ್‌ನಲ್ಲಿ ಮೊಬೈಲ್ ಬಳಸೋ ಹಾಗಿಲ್ವಂತೆ, ಈ ಎÇÉಾ ಅಂತೆಗಳನ್ನು ಕೇಳಿ ಕುಳಿತಿರುವ ಗುಡ್ಡ ಎಲ್ಲ ಸಂಪರ್ಕ ಕಡಿದುಕೊಂಡು ದ್ವೀಪವಾದಂತೆ ಭಾಸವಾಯಿತು ನನಗೆ. ಅವಳು ಎಲ್ಲ ವರದಿ ಒಪ್ಪಿಸುತ್ತಿದ್ದಂತೆ ತಲೆ ಎಲ್ಲ “ಗಿರ್ರ’ ಎಂದಿತು. ಯಾರು ಪ್ರೇರಣೆ ಈ ಹುಡುಗಿಗೆ ಸೈನ್ಯ ಸೇರೋಕೆ, ಇವಳೇನು ಕೊಡಗು ಮೂಲದವಳೇನಲ್ಲ , ಇವರ ಫ್ಯಾಮಿಲಿಯಲ್ಲೂ ಯಾರು ಮಿಲಿಟರಿಯಲ್ಲಿಲ್ಲ, ಈ ಬ್ರಾಹ್ಮಣ ಹುಡುಗಿ ಏರ್‌ಫೋರ್ಸ್ ಸೇರೋದು ಅಂದ್ರೆ! ತಲೆಯೆಲ್ಲ ಕಲಸುಮೇಲೋಗರ. ಬಹುಶಃ ಕಾಲೇಜು ದಿನಗಳ ಎನ್‌ಸಿಸಿ ಬ್ಯಾಕ್‌ಗ್ರೌಂಡ್ ಇರಬೇಕು. ಇವಳ ಎನ್‌ಸಿಸಿ ಆಫೀಸರ್ ಮೈಕಟ್ಟು, ಕಮಾಂಡ್ ಕೊಡುವ ರೀತಿ ನೋಡಿ, “ನೀನು ಸೈನ್ಯ ಸೇರಬೇಕಮ್ಮ’ ಅಂತಿದ್ರಂತೆ.
.
.
“”ನೀನು ಯಾಕೆ ನನ್ಹತ್ರ ಹೇಳಲೇ ಇಲ್ಲ? ಏರ್‌ಫೋìರ್ಸ್ ಸೆಲೆಕ್ಷನ್‌ಗೆ ಎಕ್ಸಾಮ್ ಬರಿªದೀನಿ” ಅಂತ ನಾನು ಕೇಳಿದೆ.
“”ನಾನೇನಾದ್ರು ಸಿಲೆಕ್ಟ್ ಆಗಿಲ್ಲ ಅಂದ್ರೆ ನನಗೇ ನನ್ನಲ್ಲಿ ಆತ್ಮವಿಶ್ವಾಸ ಹೋಗಿºಡ್ತಿತ್ತು. ಅದಕ್ಕೆ ಸೆಲೆಕ್ಟ್ ಆದ್ಮೇಲೆ ಹೇಳ್ತಿರೋದು. ನಿನಗೆ ಅನ್ನಿಸಬಹುದು, ಇÇÉೇ ಯಾವಾªದ್ರೂ ಕಂಪೆನಿಯಲ್ಲಿ ಕ್ಯಾಂಪಸ್ ಸೆಲೆಕ್ಷನ್ ಆಗ್ತಿತ್ತು, ಯಾಕೆ ಈ ಏರ್‌ಫೋರ್ಸ್ ಅಂತ. ನಾನು ಸೈನ್ಸ್ ಸ್ಟೂಡೆಂಟ್ ಆಗಿದ್ರೂ ಪಿಯುಸಿಯಲ್ಲಿ ಎನ್‌ಸಿಸಿ ಸೇರಿ¨ªೆ. ಆ ಎನ್‌ಸಿಸಿ ಸೇರೋಕ್ಕೆ ಪ್ರೇರಣೆ ಅಂದ್ರೆ ಸ್ಕೂಲ್‌ಡೇಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಆಕ್ಟಿವಿಟೀಸ್. ಇದರ ಜೊತೆ ನನಗೆ ಮೊದಲಿನಿಂದಲೂ ಸಾಹಿತ್ಯ ಓದೋ ಅಭ್ಯಾಸ ತುಂಬಾ ಇತ್ತು. ಬಹುಶಃ ಇದಕ್ಕೆ ನಮ್ಮಮ್ಮ ಕಾರಣ ಇರಬಹುದು. ತಾನು ಕನ್ನಡ ಎಂಎ ಮಾಡಿ ಲೆಕ್ಚರರ್ ಆಗ್ಬೇಕು ಅಂತ ತುಂಬಾ ಆಸೆ ಇಟ್ಕೊಂಡಿದÛಂತೆ. ಆದ್ರೆ ತಾತ ಬೇಗ ಮದ್ವೆ ಮಾಡಿºಟ್ರಾ. ಅವ್ಳು ಎಷ್ಟೊಂದು ಕಾದಂಬರಿಯ ಪಾತ್ರಗಳ ಚಿಕ್ಕ ಚೊಕ್ಕ ವಿಮರ್ಶೆಗಳನ್ನು ಒಟ್ಟು ಹಾಕಿ¨ªಾಳೆ ಪುಟ್ಟ ಪುಸ್ತಕದಲ್ಲಿ. ನಾನು ಆ ಕೆಲವು ಪಾತ್ರಗಳಿಂದಲೇ ಪ್ರಭಾವಿತಳಾಗಿ¨ªೆ. ನಾನು ಪೈಲಟ್ ಅಥವಾ ಫ್ಲೈಯಿಂಗ್ ಆಫೀಸರ್ ಆಗದಿದ್ದರೂ ಉನ್ನತ ಪ್ರತಿಷ್ಠಿತ ಹು¨ªೆ ಏರದಿದ್ದರೂ ನನ್ನ ವಿದ್ಯಾರ್ಹತೆಗೆ ತಕ್ಕಂಥ ಚಾನ್ಸ್ ಸಿಕ್ಕರೆ ಬಿಡ್ಲೆàಬಾರದು ಅಂತಿ¨ªೆ. ಇದಕ್ಕೆ ಅಪ್ಪ-ಅಮ್ಮ ಬೇಡ ಅಂದ್ರು ಅನೇಕ ನಿದರ್ಶನಗಳನ್ನು ಕೊಟ್ಟು ಒಪ್ಸಿದೀನಿ. ಎಂಥ ಜಟಿಲ ಸನ್ನಿವೇಶವನ್ನು ಅಪಾರ ಎದೆಗಾರಿಕೆಯಿಂದ ಎದ್ರುಸ್ತಾರಲ್ವ , ಕೆಲವು ಮಹಿಳೆಯರು, ಅದರಲ್ಲಿ ಕೆಲವರ ಆತ್ಮಚರಿತ್ರೆ ಕಥೆಗಳನ್ನೆÇÉಾ ಓದಿದೀನಿ. ಬಹುಶಃ ಇದೇ ನನ್ ಲೈಫ್ನ ಟರ್ನಿಂಗ್ ಪಾಯಿಂಟ್” “”ಹುಂ… ಆಯ್ತಾ ಮೇಡಂ ಮುಗೀತಾ?” ಅಂತ ತಮಾಷೆ ಮಾಡೆª ಆವೊತ್ತು. ಆದ್ರೆ ವೀರ ಶಿರೋಮಣಿ, ಧೀಮಂತ ನಾಯಕಿ, ದೇಶಪ್ರೇಮಿ ಧೀರೋದ್ಧಾತ್ತ ಮಹಿಳೆ, ಅಮರತ್ಯಾಗ- ಹೀಗೆ ಏನೇನೊ ದೊಡ್ಡ ಶಬ್ದಗಳೆಲ್ಲ ಅವಳ ಹೆಸರಿನೊಂದಿಗೆ ತಳುಕಿ ಹಾಕಿಕೊಂಡವು. ಎಲ್ಲರಿಗೂ ಬೇರೆಯವರ ಮನೆ ಮಕ್ಳು ಸೈನ್ಯ ಸೇರಬೇಕು ಅಂತ ಆಸೆ, ನಮ್ಮ ಹತ್ತಿರದವರು ಈ ತೀರ್ಮಾನ ತೆಗೆದುಕೊಂಡರೆ ಜೀರ್ಣ ಮಾಡಿಕೊಳ್ಳೋದು ಕಷ್ಟ. ದೇಶ ಕಾಯೋ ಸೈನಿಕರು ವೀರ ಮರಣವನ್ನಪ್ಪಿ ಟಿವಿಯಲ್ಲಿ ಅವರಿಗೆ ಸಲ್ಲಬೇಕಾದ ಅಂತಿಮ ನಮನದ ನೇರಪ್ರಸಾರ ಬರುತ್ತಿದ್ದರೆ, ಅವರ ಹೆಂಡತಿಯರ ಮನೋಸ್ಥೈರ್ಯದ ಬಗ್ಗೆ ಯೋಚನೆ ಮಾಡೋದೇ ಇಲ್ಲ. ಧಾರಾವಾಹಿಯ ಹೀರೋ ಅವನ ಹೆಂಡತಿಯನ್ನು ಯಾಕೆ ಬಿಟ್ಟ ಅಂತ ಆಕೆಯ ಮನಃಸ್ಥಿತಿಯನ್ನು ನೆನೆದು ಸೆರಗಲ್ಲಿ ಕಣ್ಣು ಒರೆಸುತ್ತಾರೆ. ಹೈದರಾಬಾದ್‌ನಲ್ಲಿ ಆರು ತಿಂಗಳು ಟ್ರೈನಿಂಗ್ ಮುಗಿಸಿ ಬಂದಿದ್ದಳು, “”ನೆಕ್ಸ್ಟ್ ಮೈಸೂರಿನಲ್ಲಿ ಟ್ರೈನಿಂಗ್ ಮುಗಿದ ಮೇಲೆ ನಾನು ಇÇÉೇ ಬೆಳಗಾಂ ಅಥವಾ ಬೆಂಗಳೂರು ಪೋಸ್ಟಿಂಗ್ ಕೇಳ್ತೀನಿ ಬಿಡು. ಆಲ್ ಓವರ್ ಇಂಡಿಯಾ ಎಷ್ಟೊಂದು ಕಡೆ ಇದೆ ಗೊತ್ತ ಏರ್‌ಫೋರ್ಸ್ ಆಫೀಸಸ್, ಎಲ್ಲ ಮಿಲಿಟರಿ ಅಂದ್ರೆ ಜಮ್ಮು ಗಡಿ ಮಾತ್ರ ಅನ್ಕೊಂಡು ಭಯ ಬೀಳ್ತಾರೆ. ಆದ್ರೆ ನಾನೂ ಅದಕ್ಕೂ ರೆಡಿ ಇದೀನಿ. ನಿನ್ನದೊಂದೇ ಯೋಚನೆ ನನಗೀಗ, ನನ್ ಬಿಟ್ಟು ಹೇಗಿರ್ತೀಯ ಅಂತ. ನೀನು ಏನು ಯೋಚನೆ ಮಾಡಬೇಡ ನಿನ್ನ ಜಾಬ್ ಬಗ್ಗೆ ಕಾನ್ಸಟ್ರೇಟ್ ಮಾಡು” ಅಂದಿದುÉ. “”ಅಲ್ಲಿ ದೂರದಲ್ಲಿ ಒಂದು ತುಂಬಾ ಎತ್ತರದ ಮೊಬೈಲ್ ಟವರ್ ಕಾಣಾ¤ ಇದೆಯಲ್ವಾ, ಬಹುಶಃ ಕೆಂಗೇರಿ ಇರಬಹುದು ಅದು, ಅದ್ರಲ್ಲಿ ಎಷ್ಟು ಪ್ರೇಮಿಗಳ ಸಂಭಾಷಣೆ ವಿನಿಮಯ ಆಗ್ತಿರಬಹುದು ಹೇಳು” ಅಂದುÉ. “”ನೂರೋ ಸಾವಿರಾನೋ” ಅಂದೆ. ಯಾವುದರಲ್ಲಿಯೂ ಮನಸ್ಸು ಇರಲಿಲ್ಲ. ಹಾಗೇ ಕತ್ತಲಾಗಿ ಹೋಯಿತು. ಇವತ್ತು ಕತ್ತಲಾಗುತ್ತಿದೆ, ಈಗ ನಾನು ಒಂಟಿ, ನಿಸಾರ್ ಅಹಮದ್‌ರ ಸಾಲುಗಳು ನೆನಪಾಗುತ್ತಿವೆ, ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ…
ಮತ್ತದೇ ಗೊಂದಲ, “ನನುØಡುಗಿ ನನಗಾ? ದೇಶಕ್ಕಾ?’ ಮನಸ್ಸಿಗೆ ಫ್ಯಾಕ್ಟರಿ ರೀಸೆಟ್ ಕೊಟ್ಟುಬಿಡಲಾ? ಅದು ಸಾಧ್ಯವಾ ನನ್ನಿಂದ?
ದೇಶಸೇವೆಗೆ ಹೊರಟವರನ್ನು ಅಡ್ಡಿಪಡಿಸಿದರೆ ಭಾರತಾಂಬೆಯ ಶಾಪ ತಟ್ಟಬಹುದು! ಕಾಯುತ್ತೇನೆ ನನ್ನವಳನ್ನು ; ಅವಳು ದೇಶ ಕಾಯಲಿ. – ವಿದ್ಯಾ ಹೊಸಕೊಪ್ಪ