Advertisement

ಮೈದುಂಬಿ ಧುಮ್ಮುಕ್ಕುತ್ತಿದೆ ಗೋಕಾಕ್ ಜಲಪಾತ

10:23 AM Jun 19, 2021 | Team Udayavani |

ಅಮೆರಿಕದ ಜಗತ್ಪ್ರಸಿದ್ಧ ನಯಾಗರ ಜಲಪಾತಕ್ಕೆ ಹೋಲಿಸಲಾಗುವ ಗೋಕಾಕ್‌ ಜಲಪಾತ ಬೆಳಗಾವಿಯಿಂದ 58 ಕಿ.ಮೀ ಹಾಗೂ ಗೋಕಾಕ್‌ ಪಟ್ಟಣದಿಂದ 6 ಕಿ.ಮೀ ದೂರದಲ್ಲಿದೆ. ಮಳೆಗಾಲ ಶುರುವಾಯಿತು ಎಂದರೆ ಈ ಜಲಪಾತ ಮೈದುಂಬಿ ಹರಿಯುತ್ತದೆ. ಇದೀಗ ಬೆಳಗಾವಿಯಲ್ಲಿ ಸತತ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ಗೋಕಾಲ್ ಜಲಪಾತ ರುದ್ರ ರಮಣೀಯವಾಗಿ ಧುಮ್ಮುಕ್ಕುತ್ತಿದೆ.

Advertisement

ಈ ಜಲಪಾತದಲ್ಲಿ ಘಟಪ್ರಭಾ ನದಿ 52 ಮೀ. ಎತ್ತರದಿಂದ ಧುಮ್ಮಿಕ್ಕಿ ಆಳ ಕಣಿವೆಗೆ ಬೀಳುತ್ತದೆ. ಈ ನಯನ ಮನೋಹರ ದೃಶ್ಯ ತುಂಬಾ ಸುಂದರವಾಗಿರುತ್ತದೆ. ಈ ಜಲಪಾತಕ್ಕಿಂತ ಸ್ವಲ್ಪ ಮುಂಚೆಯೇ ನದಿ ದಡಗಳ ಮೇಲೆ ಜನ ಸಂಚಾರಕ್ಕೆ ಅನುಕೂಲ ಕಲ್ಪಿಸಲು 201 ಮೀಟರ್‌ ಉದ್ದದ ತೂಗು ಸೇತುವೆ ನಿರ್ಮಿಸಲಾಗಿದೆ.

ಈ ಸೇತುವೆ ಮೇಲೆ ನಡೆಯುವುದೇ ಒಂದು ಥ್ರಿಲ್‌. ಈ ಜಲಪಾತದ ಬಳಿ ಒಂದು ಸುಂದರ ಗಾರ್ಡನ್‌ ಕೂಡಾ ಇದೆ. ಎಲ್‌ ಶೇಪ್‌ನಲ್ಲಿರುವ ಗೋಕಾಕ್‌ ಜಲಪಾತ ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು.

ಗೋಕಾಕ್ ಜಲಪಾತ ಉತ್ತರ ಕರ್ನಾಟಕದ ಜನಪ್ರಿಯ ಜಲಪಾತಗಳಲ್ಲಿ ಒಂದಾಗಿದೆ. ಗೋಕಾಕ್ ಜಲಪಾತವು ಹೆದ್ದಾರಿಗೆ ಹತ್ತಿರದಲ್ಲಿದೆ ಮತ್ತು ಪ್ರವೇಶಿಸಲು ಸುಲಭವಾಗಿದೆ.

ಘಟಪ್ರಭಾ ನದಿ ಕುದುರೆಯ ಲಾಳದ  ಆಕಾರದ ಬಂಡೆಯ ಮೇಲ್ಭಾಗದಿಂದ ಸುಮಾರು 52 ಮೀಟರ್ ಎತ್ತರದಿಂದ ಧುಮುಕಿದಾಗ ಗೋಕಾಕ್ ಜಲಪಾತವು ರೂಪುಗೊಳ್ಳುತ್ತದೆ. ಇತರ ಜಲಪಾತಗಳಿಗೆ ಹೋಲಿಸಿದರೆ ಗೋಕಾಕ ಜಲಪಾತ ಸಾಕಷ್ಟು ಅಗಲವಿದ್ದು (ಒಟ್ಟು 177 ಮೀಟರ್) ದೂರದಿಂದ ನೋಡಿದರೂ ತುಂಬಾ ರಮಣೀಯವಾಗಿ ಕಾಣಿಸುತ್ತದೆ ಮತ್ತು ಜಲಪಾತದ ಭೋರ್ಗೆರೆತ ದೂರದಿಂದಲೇ ಕೇಳಿಸುತ್ತದೆ.

Advertisement

ಹತ್ತಿರದಲ್ಲಿ ಇನ್ನೇನಿದೆ?

ಗೋಕಾಕ್ ಜಲಪಾತದ ಜೊತೆಗೆ ಗೋಡಚಿನಮಲ್ಕಿ ಜಲಪಾತಗಳು (ಗೋಕಾಕ್ ಜಲಪಾತದಿಂದ 13 ಕಿ.ಮೀ) ಮತ್ತು ಸೌಂಡಟ್ಟಿ ಯೆಲ್ಲಮ್ಮ (73 ಕಿ.ಮೀ) ಕ್ಷೇತ್ರಕ್ಕೆ ಭೇಟಿ ಕೊಡಬಹುದಾಗಿದೆ.

ಗೋಕಾಕ್ ಜಲಪಾತವನ್ನು ತಲುಪುವುದು ಹೇಗೆ?

ಗೋಕಾಕ್ ಜಲಪಾತ ಬೆಂಗಳೂರಿನಿಂದ 622 ಕಿ.ಮೀ ಮತ್ತು ಬೆಳಗಾವಿಯಿಂದ 62 ಕಿ.ಮೀ ದೂರದಲ್ಲಿದೆ. ಬೆಳಗಾವಿ ಹತ್ತಿರದ ವಿಮಾನ ನಿಲ್ದಾಣ ಮತ್ತು ಪ್ರಮುಖ ರೈಲು ನಿಲ್ದಾಣವಾಗಿದೆ. ಬೆಳಗಾವಿ ವಾಯು, ರೈಲು ಮತ್ತು ರಸ್ತೆಯ ಮೂಲಕ ಕರ್ನಾಟಕದ ಉಳಿದ ಭಾಗಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಬೆಳಗಾವಿಯಿಂದ ಟ್ಯಾಕ್ಸಿ ಪಡೆದು ಗೋಕಾಕ್ ಜಲಪಾತವನ್ನು ತಲುಪಬಹುದಾಗಿದೆ.

ರಜೆಯ ಮಜಾ ಸವಿಯಲು ಸುಂದರ ತಾಣ :

ಸ್ಥಳೀಯ ಜನರಿಗೆ ವೀಕೆಂಡ್ ಸುಂದರವಾಗಿ ಕಳೆಯಲು ಗೋಕಾಕ್ ಜಲಪಾತ ಸುಂದರವಾದ ಸ್ಥಳವಾಗಿದೆ. ಆದರೆ, ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಲಾಕ್ ಡೌನ್ ಇರುವುದರಿಂದ ಪ್ರವಾಸಿಗರಿಗೆ ನಿರ್ಬಂದ ಹೇರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next