Advertisement

ಬೆಳಗಾವಿ: ಅರ್ಧ ಸ್ಮಾರ್ಟ್‌, ಇನ್ನರ್ಧ ಡರ್ಟಿ ಸಿಟಿ

07:00 PM Sep 01, 2021 | Team Udayavani |

ವರದಿ: ಭೈರೋಬಾ ಕಾಂಬಳೆ

Advertisement

ಬೆಳಗಾವಿ:ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿಯ ಮೊದಲ ಪಟ್ಟಿಯಲ್ಲಿಯೇ ಬೆಳಗಾವಿ ಹೆಸರು ಸೇರ್ಪಡೆಯಾಗಿದ್ದು, ಈ ಯೋಜನೆಯ ಬಹುತೇಕ ಕಾಮಗಾರಿಗಳು ಕೆಲ ವಾರ್ಡ್‌ಗಳಿಗೆ ಮಾತ್ರ ಸೀಮಿತವಾಗಿ ಇನ್ನುಳಿದವುಗಳಿಗೆ ಸ್ಮಾರ್ಟ್‌ ಸಿಟಿಯ ಗಂಧ ಗಾಳಿಯೂ ಬೀಸಲಿಲ್ಲ ಎಂಬಂತಾಗಿದೆ.

ಕೇವಲ ನಗರ ಕೇಂದ್ರೀತ ಪ್ರದೇಶಗಳಿಗೆ ಸೀಮಿತವಾಗಿ ಇನ್ನುಳಿದ ಅನೇಕ ವಾರ್ಡ್‌ಗಳಿಗೆ ಸ್ಮಾರ್ಟ್‌ ಸಿಟಿ ಯೋಜನೆಗಳು ಬಂದೇ ಇಲ್ಲ ಎಂಬ ಆರೋಪ ಇದೆ. ಅಭಿವೃದ್ಧಿ ನಮ್ಮ ಭಾಗಕ್ಕೂ ಆಗುತ್ತಾ ಎಂಬುದನ್ನು ಚಾತಕ ಪಕ್ಷಿಯಂತೆ ಜನ ಕಾಯುತ್ತಿದ್ದಾರೆ. ಅವಧಿ ಮುಗಿದ ವರ್ಷಗಳ ನಂತರ ಮಹಾನಗರ ಪಾಲಿಕೆ ಚುನಾವಣೆಗೆ ಬೆಳಗಾವಿ ನಗರದ ಜನತೆ ಸಜ್ಜಾಗಿದ್ದಾರೆ. ಮೂರ್‍ನಾಲ್ಕು ವರ್ಷಗಳಿಂದ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳು ಬೆಳಗಾವಿ ನಗರದೆಲ್ಲೆಡೆ ವ್ಯಾಪಿಸಿಕೊಂಡಿದ್ದರೂ ವಾರ್ಡ್‌ ನಂಬರ್‌ 21ರಿಂದ 40 ವಾರ್ಡ್‌ ವರೆಗಿನ ಕೆಲವು ಪ್ರದೇಶಗಳು ಬಿಟ್ಟರೆ ಇನ್ನುಳಿದವುಗಳತ್ತ ಇವು ಸುಳಿದೇ ಇಲ್ಲ. ಇನ್ನುಳಿದವುಗಳ ಕಡೆಗೆ ಕೇವಲ ಚಾಲ್ತಿ ಕೆಲಸಗಳು ಮಾತ್ರ ಪ್ರಾರಂಭಗೊಂಡಿವೆ. ಈ ಪ್ರದೇಶಗಳತ್ತಲೂ ಸ್ಮಾರ್ಟ್‌ ಸಿಟಿಯ ವಿವಿಧ ಕಾಮಗಾರಿಗಳನ್ನು ಕೈಗೊಂಡರೆ ಬೆಳಗಾವಿ ನಗರ ಇನ್ನಷ್ಟು ಸುಂದರ ಹಾಗೂ ಸ್ವತ್ಛ ಆಗಲು ಸಾಧ್ಯವಿದೆ.

ಬೆಳಗಾವಿಯ ಡಾಲರ್ಸ್‌ ಕಾಲೋನಿ ಎಂದೇ ಖ್ಯಾತಿಯಾದ ಹನುಮಾನ ನಗರ ಸಂಪೂರ್ಣವಾಗಿ ಅಭಿವೃದ್ಧಿಯಾದ ಪ್ರದೇಶ. ಇಲ್ಲಿ ದೊಡ್ಡ ಉದ್ದಿಮೆದಾದರರು, ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಶ್ರೀಮಂತ ಪಟ್ಟಿಯಲ್ಲಿರುವವರು ವಾಸಿಸುವ ಪ್ರದೇಶ. ಯಾವುದೇ ಮೂಲ ಸೌಕರ್ಯಗಳಿಗೆ ಅಡಚಣೆ ಇಲ್ಲ. ಹನುಮಾನ ನಗರದಲ್ಲಿ ಯಾವುದಕ್ಕೂ ಸಮಸ್ಯೆ ಇಲ್ಲ. ಈ ವಾರ್ಡುಗಳಲ್ಲಿಯ ಜನ ಮತದಾನಕ್ಕೆ ಬರುವುದೇ ಕಷ್ಟ. ಇಂಥದರಲ್ಲಿ ಇಲ್ಲಿ ಅಭಿವೃದ್ಧಿಗೆ ಮಾತ್ರ ಕೊರತೆ ಇಲ್ಲ.

ರಸ್ತೆ, ಗಟಾರು, ಚರಂಡಿ, ಕುಡಿಯುವ ನೀರಿನ ಕೊರತೆ ಅಂತೂ ಇಲ್ಲ. ಉತ್ತಮ ಡಾಂಬರೀಕರಣವಾದ ರಸ್ತೆಗಳು ಇಲ್ಲಿವೆ. ಇದಕೆ R ಹೊಂದಿರುವ ಇನ್ನುಳಿದ ಪ್ರದೇಶಗಳು ಇನ್ನೂ ಅಭಿವೃದ್ಧಿಯಿಂದ ದೂರ ಉಳಿದಿವೆ. ಸರಿಯಾದ¨ ‌ ರಸ್ತೆಗ‌ಳಿಲ್ಲದೇ ಜನರು ಹೆ„ರಾಣಾಗಿದ್ದಾರೆ. ಚ ‌ರಂಡಿ ಸ್ವಚ್ಛತೆ ಇಲ್ಲದಕ್ಕೆ ಮಳೆಗಾಲದಲ್ಲಿ ನೀರು ನಿಂತು ಸಮಸ್ಯೆಯನ್ನುಂಟು ಮಾಡುತ್ತಿವೆ. ಇವುಗಳ ಅಭಿವೃದ್ಧಿಯತ್ತ ಈಗಿನ ಮಹಾನಗರ ಪಾಲಿಕೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ.

Advertisement

ಇನ್ನು ಗಾಂಧಿ ನಗರ, ಮಾರುತಿ ನಗರಗಳೂ ಇವುಗಳ ‌ಕಥೆ ಹೊಸ‌ತಾಗಿಲ್ಲ. ಇಲ್ಲಿ ಕೆಲವೊಂದು ಕಡೆಗಳಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಸಿಸಿ ರಸ್ತೆಗಳನ್ನು ಮಾಡಿದ್ದು ಬಿಟ್ಟರೆ ಇನ್ನೂ ನಿರಂತರ ಕುಡಿಯುವ ನೀರಿನ ವ್ಯವಸ್ಥೆ ಸ‌ರಿಯಾಗಿ ಕಲ್ಪಿಸಿಲ್ಲ. ಒಂದೆರಡು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಗಾಂಧಿ ನಗರದಲ್ಲಿ ಇಕ್ಕಟಾದ ‌ರಸ್ತೆಗಳು ಇದ್ದಿದ್ದರಿಂದ ಇಕ್ಕಟ್ಟಿನಲ್ಲಿಯೇ ಇಲ್ಲಿಯ ಜನಜೀವನ ‌ ಇದೆ. ಹಳೆಯ ಲೇಔಟ್‌ ಗಳಲ್ಲಿ ಮನೆ ನಿರ್ಮಾಣವಾಗಿದ್ದು, ಗಾಂಧಿ ನಗರದಲ್ಲಿ ಗಲ್ಲಿ-ಬೋಳುಗಳೇ ಇನ್ನೂ ಇವೆ.

Advertisement

Udayavani is now on Telegram. Click here to join our channel and stay updated with the latest news.

Next