ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಹಲವು ಪ್ರಮುಖ ನಗರಗಳಲ್ಲಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯನ್ನು ಒಂದು ಉತ್ಸವದ ರೀತಿಯಲ್ಲಿ ಆಚರಿಸುವುದುಂಟು. ಮೊಸರು ಕುಡಿಕೆಯ ಒಳಗೆ ಇರುತ್ತದಲ್ಲ, ಆ ಪದಾರ್ಥವನ್ನು “ಕಾಲಾ’ ಅನ್ನುತ್ತಾರೆ. ವಿವಿಧ ಖಾದ್ಯಪದಾರ್ಥಗಳು, ಮೊಸರು, ಹಾಲು ಮತ್ತು ಬೆಣ್ಣೆ ಇವುಗಳ ಮಿಶ್ರಣವೇ ಕಾಲಾ. ಶ್ರೀಕೃಷ್ಣನು ನಂದಗೋಕುಲದಲ್ಲಿ ಗೋವುಗಳನ್ನು ಮೇಯಿಸುವಾಗ ಸ್ವಂತದ ಮತ್ತು ಇತರ ಮಿತ್ರರ ಬುತ್ತಿಗಳನ್ನು ಒಟ್ಟಿಗೆ ಕೂಡಿಸಿ ಹೊಸಬಗೆಯ ತಿನಿಸಿಗೆ ಕಾರಣ ಆಗುತ್ತಿದ್ದನಂತೆ. ಆ ಹೊಸ ತಿನಿಸಿನ ಹೆಸರೇ “ಕಾಲಾ’. ಕೃಷ್ಣನು ಅದನ್ನುಎಲ್ಲರೊಂದಿಗೆ ಕುಳಿತು ತಿನ್ನುತ್ತಿದ್ದ. ಮುಂದೆ ಗೋಕುಲಾಷ್ಟಮಿಯ ಮರುದಿನ, ಕಾಲಾವನ್ನು ಮಾಡುವ ಮತ್ತು ಮೊಸರು ಕುಡಿಕೆಯನ್ನು ಒಡೆಯುವ ರೂಢಿಯು ನಿರ್ಮಾಣವಾಯಿತು.
ಮೊಸರು ಕುಡಿಕೆಯ ವೈಶಿಷ್ಟ್ಯಗಳು
ಗೋಪಾಲಕಾಲಾ
ಗೋಪಾಲಕಾಲಾ ಅಂದರೆ ಭಜನೆ ಆದ ನಂತರ ಅಥವಾ ಗೋಕುಲಾಷ್ಟಮಿಯ ನಂತರ ಮೊಸರು ಕುಡಿಕೆ ಒಡೆದು ಪಡೆಯುವ ಪ್ರಸಾದ.
ಸವಿರುಚಿ
ಅವಲಕ್ಕಿ, ಹಾಲು, ಮೊಸರು, ಮಜ್ಜಿಗೆ ಮತ್ತು ಬೆಣ್ಣೆ ಈ ಐದು ಪದಾರ್ಥಗಳನ್ನು ಒಟ್ಟು ಮಾಡಿ ತಯಾರಿಸುವ ಪ್ರಸಾದಕ್ಕೆ ಒಂದು ಬಣ್ಣಿಸಲಾಗದ ದಿವ್ಯ ರುಚಿ ಇರುತ್ತದೆ.
ಮೊಸರು ಕುಡಿಕೆ
ಮೊಸರು ಕುಡಿಕೆ ಅಂದರೆ ಜೀವ. ಮೊಸರು ಕುಡಿಕೆ ಒಡೆಯುವುದು ಅಂದರೆ, ದೇಹಬುದ್ಧಿಯನ್ನು ಬಿಟ್ಟು ಆತ್ಮಬುದ್ಧಿಯಲ್ಲಿ ಸ್ಥಿರವಾಗುವುದು. ಅದರ ನಂತರ ಸ್ವೀಕರಿಸುವ ಪ್ರಸಾದ ಆನಂದದ ಪ್ರತೀಕವಾಗಿದೆ.