Advertisement

ಇಶಾಂತ್‌ ಎಂಬ ಬಿರುಗಾಳಿ

07:03 PM Nov 29, 2019 | Lakshmi GovindaRaj |

ಕಳಪೆ ಫಾರ್ಮ್ನಿಂದ ಸೀಮಿತ ಓವರ್‌ಗಳ ತಂಡದಿಂದ ಹೊರಬಿದ್ದಿದ್ದ ವೇಗದ ಬೌಲರ್‌ ಇಶಾಂತ್‌ ಶರ್ಮ ಕಥೆ ಮುಗಿಯಿತು. ಇನ್ನೇನು ಕೆಲವೇ ದಿನಗಳಲ್ಲಿ ಟೆಸ್ಟ್‌ ತಂಡದಿಂದಲೂ ಹೊರಬೀಳಲಿದ್ದಾರೆ ಎಂದು ಅಂದುಕೊಳ್ಳುವಷ್ಟರಲ್ಲಿ ನಡೆದಿರುವುದೇ ಬೇರೆ. ಹೌದು, ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಇಶಾಂತ್‌ ಶರ್ಮ ಮಿಂಚಿನ ದಾಳಿ ನಡೆಸಿದರು. ಬಾಂಗ್ಲಾ ಹುಲಿಗಳ ಸದ್ದಡಗಿಸಿದರು.

Advertisement

ಮೊದಲ ಇನಿಂಗ್ಸ್‌ನಲ್ಲಿ 22ಕ್ಕೆ5 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 56ಕ್ಕೆ 4 ವಿಕೆಟ್‌ ಸೇರಿದಂತೆ ಒಟ್ಟಾರೆ 9 ವಿಕೆಟ್‌ ಉರುಳಿಸಿ ಖ್ಯಾತಿಗಳಿಸಿದರು. ಭಾರತೀಯರು 2ನೇ ಟೆಸ್ಟ್‌ ಕೈ ವಶ ಮಾಡಿಕೊಳ್ಳುವಲ್ಲಿ ಇಶಾಂತ್‌ ಶರ್ಮ ಪಾತ್ರ ಅತ್ಯಂತ ಮಹತ್ತರವಾದುದು. ಬಾಂಗ್ಲಾದ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗಟ್ಟಿದ ಇಶಾಂತ್‌ ಶರ್ಮ, ಭಾರತದ ಸರಣಿ ಗೆಲುವಿನ ದಾರಿಯನ್ನು ಸುಲಭವಾಗಿಸಿದ್ದು ಈಗ ಇತಿಹಾಸ.

ಇಶಾಂತ್‌ 2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2016ರಲ್ಲಿ ಕೊನೆಯದಾಗಿ ಆಸೀಸ್‌ ವಿರುದ್ಧ ಏಕದಿನ ಪಂದ್ಯ ಆಡಿದ್ದಾರೆ. ಆನಂತರ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಏಕದಿನದಲ್ಲಿ ಒಟ್ಟು 80 ಪಂದ್ಯ ಆಡಿ ಒಟ್ಟು 115 ವಿಕೆಟ್‌ ಪಡೆದಿದ್ದಾರೆ. 2008ರಲ್ಲಿ ಆಸೀಸ್‌ ವಿರುದ್ಧ ಟಿ20 ಪದಾರ್ಪಣೆ ಮಾಡಿದ್ದರು. ಕೊನೆಯದಾಗಿ ಟಿ20 ಆಡಿದ್ದು 2013ರಲ್ಲಿ. ಒಟ್ಟು 14 ಪಂದ್ಯ ಆಡಿದ ಇಶಾಂತ್‌ 8 ವಿಕೆಟ್‌ ಅಷ್ಟೆ ಪಡೆದಿದ್ದಾರೆ. ಇದೀಗ ಟೆಸ್ಟ್‌ನಲ್ಲಿ ಪ್ರಚಂಡ ಫಾರ್ಮ್ ಪ್ರದರ್ಶಿಸಿ ಸೀಮಿತ ಓವರ್‌ಗಳ ಆಯ್ಕೆ ಸಮಿತಿ ಗಮನ ಸೆಳೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next