Advertisement

ಮಾಲಾಧಾರಿಗಳು ದುಶ್ಚಟದಿಂದ ದೂರವಿರಿ: ನಾಯ್ಕ

09:14 AM Feb 12, 2019 | |

ಹರಪನಹಳ್ಳಿ; ಸಂತ ಶ್ರೀಸೇವಾಲಾಲ್‌ ಮಹಾರಾಜರ 280ನೇ ಜಯಂತ್ಯುತ್ಸವದ ಅಂಗವಾಗಿ ತಾಲೂಕಿನ ಮಾಡಲಗೇರಿ ತಾಂಡಾದಿಂದ ಮಾಲಾಧಾರಿಗಳು ಸೇವಾಲಾಲ್‌ ಮಹಾರಾಜರ ಜನ್ಮ ಸ್ಥಳ ಸೂರನಗೊಂಡಕೊಪ್ಪಕ್ಕೆ ಪಾದಯಾತ್ರೆ ಮೂಲಕ ತೆರಳಿದರು.

Advertisement

ಸಂತ ಶ್ರೀಸೇವಾಲಾಲ್‌ ಮಹಾರಾಜರ ಮಾಲಧಾರೆ ವೃತವನ್ನು ಪ್ರಾರಂಭಿಸಿದ್ದು, ಕೊಮರನಹಳ್ಳಿ ತಾಂಡಾ, ಮಾಡಲಗೇರಿ ತಾಂಡಾ, ಕೆ.ಕೆ.ತಾಂಡಾದ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಮಾಲಧಾರಿಗಳ ಪಾದಯಾತ್ರೆ ಆರಂಭಗೊಂಡಿದ್ದು, ಇಂದು ಭಕ್ತರು ತೆರಳುತ್ತಿದ್ದಾರೆ. ಮಾಲಾಧಾರಿಗಳು ದುಶ್ಚಟದಿಂದ ದೂರವಿರಬೇಕು. ಕುಟುಂಬದ ಸದಸ್ಯರಿಗೆ ಯಾಡಿ, ಬಾಪೂ ಎಂಬ ಪದವನ್ನು ಬಳಸಬೇಕು ಎಂದು ತಾಂಡಾದ ಹಟ್ಟಿ ನಾಯಕ ಎಂ.ಪಿ.ನಾಯ್ಕ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕೊಮರನಹಳ್ಳಿ ಕೊಟ್ರೇಶನಾಯ್ಕ, ಹೀರಾನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಚನ್ನವೀರನಾಯ್ಕ, ಗ್ರಾಪಂ ಸದಸ್ಯರಾದ ಎಂ.ಪಿ.ನಾಗೇಶ್‌, ಶಿಲ್ಪಬಾಯಿ ಮಲ್ಲೇಶನಾಯ್ಕ, ಭಜನಿ ಸಂಘದ ಅಧ್ಯಕ್ಷ ಕೊಟ್ರೇಶನಾಯ್ಕ, ಡಾವೋ ಗೇಮ್ಯಾನಾಯ್ಕ, ಕಾರಭಾರಿ ಯಂಕ್ಯಾನಾಯ್ಕ, ಹಾಲೇಶನಾಯ್ಕ, ಅಡಿಟರ್‌ ಭೋಜ್ಯಾನಾಯ್ಕ, ನಾಗೇಂದ್ರನಾಯ್ಕ, ಭೀಮಾನಾಯ್ಕ, ಆರ್‌.ಮಲ್ಲೇಶನಾಯ್ಕ, ಪೂಜಾರಿ ಶೇಖರನಾಯ್ಕ, ಯುವರಾಜನಾಯ್ಕ, ಹೋಭ್ಯಾನಾಯ್ಕ, ಚುಣ್ಯಾನಾಯ್ಕ, ಎಸ್‌.ಪ್ರವೀಣ್‌ಕುಮಾರ್‌ ಇನ್ನಿತರಿದ್ದರು.

15ರಂದು ಸಂತ ಸೇವಾಲಾಲ್‌ ಜಯಂತಿ
ಬಳ್ಳಾರಿ:
ನಗರದ ಡಾ| ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಫೆ.15 ರಂದು ಬೆಳಗ್ಗೆ 10.30ಕ್ಕೆ ಸಂತ ಶ್ರೀ ಸೇವಾಲಾಲ್‌ ಜಯಂತಿ ನಡೆಯಲಿದೆ. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಆಯೋಜಿಸುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಉದ್ಘಾಟಿಸುವರು.

ಸಚಿವರಾದ ಪಿ.ಟಿ.ಪರಮೇಶ್ವರ ನಾಯ್ಕ, ಈ.ತುಕಾರಾಂ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಶಾಸಕ ಜಿ.ಸೋಮಶೇಖರರೆಡ್ಡಿ ಅಧ್ಯಕ್ಷತೆ ವಹಿಸುವರು. ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಸಂಸದರಾದ ವಿ.ಎಸ್‌.ಉಗ್ರಪ್ಪ, ಡಾ| ಸೈಯದ್‌ ನಾಸೀರ್‌ ಹುಸೇನ್‌,ವಿಧಾನ ಪರಿಷತ್‌ ಸದಸ್ಯ ಕೆ.ಸಿ.ಕೊಂಡಯ್ಯ, ಪಾಲಿಕೆ ಮೇಯರ್‌ ಆರ್‌.ಸುಶೀಲಾಬಾಯಿ ಭಾಗವಹಿಸಲಿದ್ದಾರೆ.

Advertisement

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅಂದು ಬೆಳಗ್ಗೆ 9.30ಕ್ಕೆ ನಗರದ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಸಂತ ಸೇವಾಲಾಲ್‌ ಭಾವಚಿತ್ರದ ಮೆರವಣೆಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್‌ ತಿಳಿದ್ದಾರೆ.

ಕಾರ್ಯಕ್ರಮಕ್ಕೆ ಅಧಿಕಾರಿಗಳ ಹಾಜರಿ ಕಡ್ಡಾಯ
ಹರಪನಹಳ್ಳಿ;
ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ತಹಶೀಲ್ದಾರ್‌ ಡಾ| ನಾಗವೇಣಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಾಲೂಕು ಆಡಳಿತದ ವತಿಯಿಂದ ಫೆ.15ರಂದು ಸಂತ ಶ್ರೀಸೇವಾಲಾಲ್‌ ಹಾಗೂ ಫೆ.12ರಂದು ಸವಿತಾ ಮಹರ್ಷಿ ಜಯಂತಿಯನ್ನು ಪಟ್ಟಣದ ಸಾಮರ್ಥ್ಯಸೌಧದಲ್ಲಿ ಆಚರಿಸಲು ನಿರ್ಧರಿಸಲಾಯಿತು.

ಮಹನೀಯರ ಜಯಂತಿಗಳಲ್ಲಿ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಒಂದು ವೇಳೆ ಅಧಿಕಾರಿಗಳು ಜಯಂತಿಗಳಿಗೆ ಭಾಗವಹಿಸದಿದ್ದರೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಬೇಕು ಎಂದು ಎರಡು ಸಮಾಜದ ಮುಂಖಡರು ಒತ್ತಾಯಿಸಿದರು. ಅಲ್ಲದೇ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಮುಖಂಡರು ಸಲಹೆ ನೀಡಿದರು.

ಬಂಜಾರ್‌ ಸಮಾಜದ ತಾಲೂಕು ಅಧ್ಯಕ್ಷ ಜಯನಾಯ್ಕ, ಸವಿತ ಸಮಾಜದ ಅಧ್ಯಕ್ಷ ವೆಂಕಟೇಶ್‌, ಬಂಜಾರ್‌ ಸಮಾಜದ ಕಾರ್ಯದರ್ಶಿ ಬಿ.ವೈ.ವೆಂಕಟೇಶನಾಯ್ಕ, ಹನುಮಂತಪ್ಪ, ಎಸ್‌.ಪಿ.ಲಿಂಬ್ಯಾನಾಯ್ಕ, ಚತ್ರನಾಯ್ಕ, ಪೂರ್ಯಾನಾಯ್ಕ, ಬಸವರಾಜ್‌, ಚಂದ್ರನಾಯ್ಕ, ಮಾಡಲಗೇರಿ ಸಂತೋಷ್‌, ರಾಜನಾಯ್ಕ, ಗೋಪಿನಾಯ್ಕ, ಮೋಹನ್‌, ಪುರಸಭೆ ಅಕಾರಿ ನಾಗರಾಜನಾಯ್ಕ, ನೀಲಾಬಾಯಿ, ಪ್ರೇಮಾಬಾಯಿ, ಉಮಾಬಾಯಿ, ರುಕ್ಮಣಿ, ಲಕ್ಕಿಬಾಯಿ ಇದ್ದರು.

ಮಹನೀಯರಿಗೆ ಗೌರವ ಸಲ್ಲಿಸಿ
ಸ‌ಂಡೂರು: ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್‌ ಸಿದ್ದೇಶ್‌ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಫೆ.15ರಂದು ಸಂತ ಸೇವಾಲಾಲ್‌ ಜಯಂತಿ ಆಚರಿಸಲು ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂತರ ಜಯಂತಿ ಆಚರಿಸುವ ಪ್ರಮುಖ ಉದ್ದೇಶ ಅವರ ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮಹತ್ತರ ಕಾರ್ಯವಾಗಿದೆ. ಅಲ್ಲದೆ ನಾವು ಅವರಿಗೆ ಜಯಂತಿ ಆಚರಿಸುವ ಮೂಲಕ ಗೌರವ ಸಲ್ಲಿಸಬೇಕೆಂದರು.

ಬಂಜಾರ ಸಮಾಜದ ಅಧ್ಯಕ್ಷ ಬಂಗ್ಲೆ ಮಂಜುನಾಥ್‌ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ಗಂಗಾಬಾಯಿ ಚಂದ್ರನಾಯ್ಕ, ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಬಂಜಾರ ಸಮಾಜದ ಮುಖಂಡರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next