ವಾಡಿ: ಕಲಬುರಗಿ ಹಾಗೂ ಯಾದಗಿರಿ ನಡುವೆ ಸಂಚರಿಸುವ ಬಸ್‌ಗಳು ರಾಷ್ಟ್ರೀಯ ಹೆದ್ದಾರಿ ಬದಿಯ ಹಳಕರ್ಟಿ ಗ್ರಾಮದ ಬಸ್ ನಿಲ್ದಾಣ ಬಳಿ ನಿಲ್ಲಿಸುತ್ತಿಲ್ಲ. ಇದು ನಮ್ಮ ಶೈಕ್ಷಣಿಕ ಭವಿಷ್ಯಕ್ಕೆ ಮಾರಕವಾಗುತ್ತಿದೆ . “ಬಸ್ ನಿಲ್ಲಿಸಿ ಕಾಲ್ನಡಿಗೆ ತಪ್ಪಿಸಿ’ ಎಂಬ ಘೋಷಣೆಯೊಂದಿಗೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಗಮನ ಸೆಳೆದರು.
ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ನೇತೃತ್ವದಲ್ಲಿ ಮಂಗಳವಾರ ಹಳಕರ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಸಾರಿಗೆ ಸಂಸ್ಥೆ ವಿರುದ್ಧ ಧಿ ಕ್ಕಾರ ಕೂಗಿದ ನೂರಾರು ವಿದ್ಯಾರ್ಥಿಗಳು, ಹಳಕರ್ಟಿ ಬಸ್ ನಿಲ್ದಾಣದಲ್ಲಿ ಕಡ್ಡಾಯವಾಗಿ ಬಸ್ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಲಾಭವನ್ನೇ ಮೂಲ ಗುರಿಯಾಗಿಸಿಕೊಂಡಿರುವ ಸಾರಿಗೆ ಇಲಾಖೆ ಅಧಿ ಕಾರಿಗಳು, ಶುಲ್ಕ ಭರಿಸಿ ಪಾಸ್ ಪಡೆದ ನಮ್ಮನ್ನು ನಿರ್ಲಕ್ಷದಿಂದ ಕಾಣುತ್ತಿದ್ದಾರೆ. ಪುಸ್ತಕ ಹಿಡಿದು ನಿಂತ ಹುಡುಗರನ್ನು ಕಂಡರೆ ಚಾಲಕ ಬಸ್ ನಿಲ್ಲಿಸುವುದಿಲ್ಲ. ಶಿಕ್ಷಣ ಕಲಿಯಲು ನಗರಕ್ಕೆ ಹೋಗುವ ನಾವು ಬಸ್‌ಗೆ ಭಾರವಾಗಿದ್ದೇವೆ ಎಂಬಂತೆ ವರ್ತಿಸಲಾಗುತ್ತಿದೆ ಎಂದು ದೂರಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ಮುಖಂಡರು, ರಾಷ್ಟ್ರೀಯ ಹೆದ್ದಾರಿ ಮೇಲೆ 50ಕ್ಕೂ ಹೆಚ್ಚು ಬಸ್ ಗಳು ಸಂಚರಿಸುತ್ತವೆ. ಹಳಕರ್ಟಿ ಗ್ರಾಮ ಸೇರಿದಂತೆ ಇತರೆ ಗ್ರಾಮೀಣ ಪ್ರದೇಶಗಳಿಂದ ಕಲಬುರಗಿ, ಯಾದಗಿರಿ, ವಾಡಿ, ಶಹಾಬಾದ, ಚಿತ್ತಾಪುರ ನಗರಗಳ ಶಾಲೆ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಪ್ರಯಾಣ ಬೆಳೆಸುತ್ತಾರೆ. ಬಸ್ ಗಳಿಗೆ ಕೈ ಮಾಡಿದರೂ ನಿಲ್ಲುವುದಿಲ್ಲ. ಪರಿಣಾಮ ಹಳಕರ್ಟಿ ಗ್ರಾಮದಿಂದ ವಾಡಿ ನಗರದ ವರೆಗೆ 3 ಕಿ.ಮೀ. ಕಾಲ್ನಡಿಗೆಯಲ್ಲಿ ಬಂದು ಬಸ್ ಹತ್ತಬೇಕಾದ ದುಸ್ಥಿತಿ ಎದುರಾಗಿದೆ.
ಹೆದ್ದಾರಿ ಮೇಲೆ ವೇಗವಾಗಿ ಚಲಿಸುವ ಭಾರಿ ವಾಹನಗಳಿಂದ ಮಕ್ಕಳು ಅಪಘಾತದ ಭೀತಿ ಎದುರಿಸುತ್ತಿದ್ದಾರೆ. ಹಳಕರ್ಟಿ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಮಾಡದಿದ್ದರೆ ಜಿಲ್ಲಾ ಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಸ್ಥಳಕ್ಕಾಗಮಿಸಿದ ಸಾರಿಗೆ ಸಂಸ್ಥೆಯ ಡಿಟಿಒ ಮಹ್ಮದ್ ಖಾದರ್ ಮನವಿ ಸ್ವೀಕರಿಸಿ, ಬಸ್ ನಿಲ್ಲಿಸುವುದಾಗಿ ಭರವಸೆ ನೀಡಿದರು. ಎಐಡಿಎಸ್‌ಒ ಗ್ರಾಮ ಘಟಕದ ಅಧ್ಯಕ್ಷ ದತ್ತಾತ್ರೇಯ ಹುಡೇಕರ, ವಾಡಿ ನಗರ ಘಟಕದ ಅಧ್ಯಕ್ಷ ಗೌತಮ ಪರತೂರಕರ, ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ಅರುಣಕುಮಾರ ಹಿರೇಬಾನರ, ಸಿದ್ದರಾಜ ಮದ್ರಿ, ಗೋವಿಂದ ಹೆಳವಾರ, ಮಲ್ಲಿನಾಥ ಹುಂಡೇಕಲ, ಶಿವಕುಮಾರ ಆಂದೋಲಾ, ವಿದ್ಯಾರ್ಥಿಗಳಾದ ಅಭಿಷೇಕ, ವಿನೋದ, ಸಾಬಣ್ಣ, ಕಿರಣ್, ವೀರೇಶ, ರೋಹಿತ, ಅನಿಲ, ಅನುರಾಧಾ, ಶೋಭಾ, ಮಮತಾ, ಅಂಬಿಕಾ, ಭಾಗ್ಯಶ್ರೀ ಸೇರಿದಂತೆ ಗ್ರಾಮಸ್ಥರು ಪ್ರ ತಿಭಟನೆಯಲ್ಲಿ ಪಾಲ್ಗೊಂಡಿದ್ದರು.