Advertisement

ಕಳಪೆ ತೊಗರಿಬೇಳೆ ವಿತರಣೆ ತಕ್ಷಣ ನಿಲ್ಲಿಸಿ‌

08:03 AM Jun 29, 2020 | Lakshmi GovindaRaj |

ಹಾಸನ: ಜಿಲ್ಲೆಯಲ್ಲಿ ಅಕ್ಷರ ದಾಸೋಹ ಯೋಜನೆ ಯಲ್ಲಿ ಕಳಪೆ ಗುಣಮಟ್ಟದ ತೊಗರಿಬೇಳೆ ವಿತರಣೆ ಯಾಗುತ್ತಿದ್ದು, ತಕ್ಷಣ ವಿತರಣೆಯನ್ನು ನಿಲ್ಲಿಸಿ ಕಳಪೆ ಬೇಳೆ ವಿತರಣೆಯ ಬಗ್ಗೆ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ  ಎಂ.ಎ.ಗೋಪಾಲಸ್ವಾಮಿ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಅಕ್ಷರ ದಾಸೋಹ ಯೋಜನೆಯಡಿ ಕಳೆದ 2 ತಿಂಗಳಲ್ಲಿ 711 ಕ್ವಿಂಟಲ್‌ ತೊಗರಿಬೇಳೆ ಪೂರೈಕೆಯಾಗಿದ್ದು, ಹಾಳಾಗಿ ರುವ ತೊಗರಿ ಬೇಳೆ ವಿತರಣೆ  ಬಗ್ಗೆ ಜಿಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಬೇಳೆ ವಿತರಣೆ ಮಾಡಕೂಡದು ಎಂದು ತೀರ್ಮಾನಿಸಲಾಗಿತ್ತು. ಆದರೂ ಕೆಲ ತಾಲೂಕುಗಳಿಗೆ ಕಳಪೆ ತೊಗರಿ ಬೇಳೆಯನ್ನೇ ಪೂರೈಕೆ ಮಾಡಲಾಗಿದೆ. ಮೊದಲು ಪರಿಶೀಲಿಸಿ ನಂತರ  ತೊಗರಿಬೇಳೆ ಪಡೆಯಬೇಕಿತ್ತು.

ಏಕ ಪಕ್ಷೀಯವಾಗಿ ಹಂಚಿಕೆ ಮಾಡಲಾಗಿದೆ ಎಂದು ಗೋಪಾಲಸ್ವಾಮಿ ಆಪಾದಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲವೇ ಶಿಕ್ಷಣ ಸಚಿವರು ಕೂಡಲೇ ಇತ್ತ ಕಡೆ ಗಮನ ಹರಿಸಿ ಕ್ರಮಕೈಗೊಳ್ಳಬೇಕು. ಕಳಪೆ  ತೊಗರಿ ಬೇಳೆ ವಿತರಣೆ ನಿಲ್ಲಿಸದಿದ್ದರೆ ಕಾಂಗ್ರೆಸ್‌ನಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗು ವುದು ಎಂದು ಎಚ್ಚರಿಸಿದರು. ಅಕ್ಷರ ದಾಸೋಹ ಯೋಜನೆಗೆ ತೊಗರಿಬೇಳೆ ಖರೀದಿಯಲ್ಲಿ ದೊಡ್ಡ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳ ಗಮನ ವನ್ನೂ ಸೆಳೆಯುವೆ ಎಂದರು. ಕಾಂಗ್ರೆಸ್‌ ಮುಖಂಡ ಎಚ್‌.ಕೆ. ಮಹೇಶ್‌ ಮಾತ ನಾಡಿ, ಈ ವರ್ಷದ ಬಿತ್ತನೆ ಆಲೂಗೆಡ್ಡೆ ಕಳಪೆಯಾಗಿದ್ದು, ಭೂಮಿಯಲ್ಲೆ ಕೊಳೆತುಹೋಗುತ್ತಿದೆ. ಹಾಸನ ಶಾಸಕರು ಆಲೂಗಡ್ಡೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಆಲೂಗಡ್ಡೆ ಬೆಳೆ ನಾಶದ ಸಮೀಕ್ಷೆ ನಡೆಸುವಾಗಲೂ ಶಾಸಕ ಪ್ರೀತಂಗೌಡ ನಾಪತ್ತೆಯಾಗಿದ್ದರು ಎಂದು ಆಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next