ಕಾಸರಗೋಡು: ಕಾಸರಗೋಡಿನಿಂದ 3 ಕಿ.ಮೀ. ದೂರದ ಕಳನಾಡು ರೈಲು ಸುರಂಗದ ಸಮೀಪದ ರೈಲು ಹಳಿಯಲ್ಲಿ ಕಲ್ಲು ಹಾಗು ಕ್ಲೋಸೆಟ್‌ಗಳ ತುಂಡುಗಳನ್ನು ಇರಿಸಿದ ಪ್ರಕರಣದ ಕುರಿತು ಇಂಟೆಲಿಜೆನ್ಸ್ ರೇಂಜ್ ಎಸ್.ಪಿ. ಸಾಬು ಶುಕ್ರವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು.
ಈ ಪ್ರಕರಣದ ತನಿಖೆಯ ಪ್ರಗತಿ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದರು. ಅಲ್ಲದೆ ತನಿಖಾ ತಂಡಕ್ಕೆ ಹಲವು ನಿರ್ದೇಶ ನೀಡಿದರು.
ಪೋರೆನ್ಸಿಕ್ ತಜ್ಞರು ಹಾಗೂ ಶ್ವಾನ ದಳವೂ ಸ್ಥಳಕ್ಕೆ ತೆರಳಿ ತನಿಖೆ ನಡೆಸಿ ಕೆಲವೊಂದು ಪುರಾವೆಗಳನ್ನು ಸಂಗ್ರಹಿಸಿದೆ.
ಈ ಘಟನೆಗೆ ಸಂಬಂಧಿಸಿ ರೈಲ್ವೇ ಕಾನೂನಿನ 150 ಎ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೇಕಲ ಡಿವೈಎಸ್‌ಪಿ ಸಿ.ಕೆ.ಸುನಿಲ್ ಕುಮಾರ್ ನೇತೃತ್ವದ ವಿಶೇಷ ಪೊಲೀಸ್ ತಂಡವನ್ನು ತನಿಖೆಗಾಗಿ ನೇಮಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ವೈಭವ್ ಸಕ್ಸೇನಾ ಅವರ ಮೇಲ್ನೋಟದಲ್ಲಿ ತನಿಖೆ ನಡೆಯುತ್ತಿದೆ.