Advertisement

Gangavathi ಎಚ್ ಆರ್ ಜಿ ನಗರದ ಗುಡ್ಡದಲ್ಲಿ ಶಿಲಾಮನೆಗಳು ಪತ್ತೆ: ಜಿಪಂ ಸಿಇಓ ಭೇಟಿ

08:17 PM Oct 03, 2023 | Team Udayavani |

ಗಂಗಾವತಿ: ತಾಲೂಕಿನ ಹೇಮಗುಡ್ಡದ ಹತ್ತಿರ ಇರುವ ಎಚ್ ಆರ್ ಜಿ ನಗರದ ಬೆಟ್ಟದಲ್ಲಿ ಶಿಲಾಯುಗದ ಮಾನವರು ನಿರ್ಮಿಸಿದ ಶಿಲಾ ಮನೆಗಳು ಪತ್ತೆಯಾಗಿದ್ದು ಸ್ಥಳಕ್ಕೆ ಜಿ.ಪಂ.ಸಿಇಒ ರಾಹುಲ್ ರತ್ನಂ ಪಾಂಡೆಯ ಅವರು ಭೇಟಿ ನೀಡಿ ಗುಡ್ಡದಲ್ಲಿರುವ ಆದಿ ಮಾನವರ ವಾಸದ ನೆಲೆಯನ್ನು ಮಂಗಳವಾರ ವೀಕ್ಷಣೆ ಮಾಡಿದರು.

Advertisement

ಎಚ್ ಆರ್ ಜಿ ನಗರದ ಭೀಮಮ್ಮ ದೇವಸ್ಥಾನ ಮುಂದಿರುವ ಗುಡ್ಡದಲ್ಲಿ ಈ ಶಿಲಾಯುಗದ ಜನರ ಮನೆಯ ಸ್ಮಾರಕಗಳು ಇವೆ. ಸುಮಾರು ನಾಲ್ಕೈದು ಸಾವಿರ ವರ್ಷಗಳ ಹಿಂದಿನ ಸ್ಮಾರಕಗಳು ಇವಾಗಿವೆ ಎಂದು ಹೇಳಲಾಗುತ್ತದೆ. ಐತಿಹಾಸಿಕ ಪ್ರಸಿದ್ಧಿ ಪಡೆದ ಹಿರೇಬೆಣಕಲ್ ಗ್ರಾಮದ ಮೋರ್ಯರ ಬೆಟ್ಟದಲ್ಲಿ ಇರುವ ಶಿಲಾಸಮಾಧಿ ಮನೆಗಳ ಸ್ಮಾರಕಗಳ ಮಾದರಿಯಂತೆ ಎಚ್ ಆರ್ ಜಿ ನಗರದ ಗುಡ್ಡದಲ್ಲಿ ಶಿಲಾ ಸ್ಮಾರಕಗಳು ಇರುವುದು ಇತ್ತೀಚೆಗೆ ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ಭೇಟಿ ನೀಡಿ ವೀಕ್ಷಣೆ ಮಾಡಿದರು.

ಈ ವೇಳೆ ಜಿಪಂ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ, ಜಿಪಂ ಎಡಿಪಿಸಿ ಮಹಾಂತಸ್ವಾಮಿ, ನರೇಗಾ ಅಕೌಂಟ್ ಮ್ಯಾನೆಜರ್ ಪಂಪನಗೌಡ ಹಳೇಮನಿ, ಗ್ರಾಪಂ ಸಿಬ್ಬಂದಿಗಳಾದ ಮಂಜುನಾಥ ರೆಡ್ಡಿ, ಲಕ್ಷ್ಮಣ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next