ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯ ಸಕಾರಾತ್ಮಕ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೋಮವಾರ(ಏಪ್ರಿಲ್ 26) 600ಅಂಕಗಳಷ್ಟು ಏರಿಕೆ ಕಂಡಿದ್ದು, ಇದರೊಂದಿಗೆ ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಹೆಚ್ಚಿನ ಲಾಭಗಳಿಸಿದೆ.
ಇದನ್ನೂ ಓದಿ:ಭಾರೀ ಸೋಲಿನ ಬೆನ್ನಲ್ಲೇ ಆರ್ ಸಿಬಿಗೆ ಅವಳಿ ಆಘಾತ: ಇಬ್ಬರು ಆಸೀಸ್ ಆಟಗಾರರು ತವರಿಗೆ ವಾಪಾಸ್
ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 641.35 ಅಂಕ ಏರಿಕೆಯೊಂದಿಗೆ 48,519.80 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 178.90ಅಂಕ ಜಿಗಿತ ಕಂಡಿದ್ದು, 14,520.25ಅಂಕಗಳ ಗಡಿಗೆ ಏರಿದೆ.
ಸೆನ್ಸೆಕ್ಸ್ ಏರಿಕೆಯಿಂದ ಐಸಿಐಸಿಐ ಬ್ಯಾಂಕ್ ಷೇರುಗಳು ಶೇ.5ರಷ್ಟು ಲಾಭ ಗಳಿಸಿದ್ದು, ಐಸಿಐಸಿಐ ಬ್ಯಾಂಕ್ ನ ತ್ರೈಮಾಸಿಕ ಲಾಭದಲ್ಲಿ ನಾಲ್ಕರಷ್ಟು ಹೆಚ್ಚಳವಾಗಿದ್ದು, ಕಳೆದ ವರ್ಷದ ಮಾರ್ಚ್ ಗಿಂತ ಈ ವರ್ಷ 4,886 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದು ವರದಿಯಾಗಿದೆ.
ಮತ್ತೊಂದೆಡೆ ಆಲ್ಟ್ರಾ ಟೆಕ್ ಸಿಮೆಂಟ್, ಎಸ್ ಬಿಐ, ಒಎನ್ ಜಿಸಿ, ಆ್ಯಕ್ಸಿಸ್ ಬ್ಯಾಂಕ್, ಕೋಟಕ್ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಲಾಭಗಳಿಸಿವೆ. ಎಚ್ ಸಿಎಲ್ ಟೆಕ್, ಪವರ್ ಗ್ರಿಡ್, ಸನ್ ಫಾರ್ಮಾ ಮತ್ತು ಟೆಕ್ ಮಹೀಂದ್ರಾ ಷೇರುಗಳು ನಷ್ಟ ಕಂಡಿದೆ.