ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆದಾರರ ನಿರಾಸೆಯ ವಹಿವಾಟಿನ ಪರಿಣಾಮ ಗುರುವಾರ (ನವೆಂಬರ್ 18) ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 372ಕ್ಕೂ ಅಧಿಕ ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಕೋವಿಡ್ ಲಸಿಕೆ ಪಡೆಯಲು ಜನರ ನಿರಾಸಕ್ತಿ; 3ನೇ ಕೋವಿಡ್ ಅಲೆ ಎದುರಿಸಲು ಹಿನ್ನಡೆ: ಸೀರಮ್
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 372.32 ಅಂಕಗಳಷ್ಟು ಇಳಿಕೆಯೊಂದಿಗೆ 59,636.01 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 133.85 ಅಂಕ ಇಳಿಕೆಯಾಗಿದ್ದು, 17,764.80 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ.
ಷೇರುಪೇಟೆ ಸೆನ್ಸೆಕ್ಸ್ ಕುಸಿತದಿಂದಾಗಿ ಮಹೀಂದ್ರ ಆ್ಯಂಡ್ ಮಹೀಂದ್ರ, ಟೆಕ್ ಮಹೀಂದ್ರ, ಎಲ್ ಆ್ಯಂಡ್ ಟಿ, ಎಚ್ ಸಿಎಲ್ ಟೆಕ್, ಟಾಟಾ ಸ್ಟಿಲ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಎಸ್ ಬಿಐ, ಪವರ್ ಗ್ರಿಡ್, ಎಚ್ ಡಿಎಫ್ ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್ ಯುಎಲ್ ಷೇರುಗಳು ಲಾಭಗಳಿಸಿದೆ.
ಇಂಧನ ಬೆಲೆ ಏರಿಕೆಯ ಟ್ರೆಂಡ್ ಹಾಗೂ ದೇಶೀಯ ಬೆಳವಣಿಗೆಗಳು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ್ದು, ಷೇರುಪೇಟೆ ಸೆನ್ಸೆಕ್ಸ್ ಕುಸಿತಕ್ಕೆ ಕಾರಣವಾಗಿದೆ ಎಂದು ಗ್ಲೋಬಲ್ ರಿಸರ್ಚ್ ನ ಲಿಖಿತಾ ಚೇಪಾ ತಿಳಿಸಿದ್ದಾರೆ.