ಮುಂಬಯಿ: ಹೊಸ ವರ್ಷದ ಮೊದಲ ದಿನವೇ ಷೇರುಪೇಟೆಯಲ್ಲಿ ಸಮಾಧಾನ ಮತ್ತು ಗೆಲುವಿನ ನಗೆ ಮೂಡಿದೆ. ಶುಕ್ರವಾರ ವಹಿವಾಟಿನ ಪ್ರಧಾನ ಅಂಶವೆಂದರೆ ನಿಫ್ಟಿ ಸೂಚ್ಯಂಕ 14 ಸಾವಿರಕ್ಕೆ ನೆಗೆದದ್ದು. ಮಧ್ಯಾಂತರ ವಹಿವಾಟಿನಲ್ಲಿ 14, 049.85ರ ವರೆಗೆ ಸೂಚ್ಯಂಕ ಏರಿಕೆಯಾಗಿದೆ. ದಿನಾಂತ್ಯಕ್ಕೆ 14,018.50ರಲ್ಲಿ ಮುಕ್ತಾಯವಾಯಿತು. ಅಂದರೆ 36.75 ಪಾಯಿಂಟ್ಸ್‌ಗಳಷ್ಟು ಏರಿಕೆಯಾಗಿದೆ.
ಇನ್ನು ಬಾಂಬೆ ಷೇರು ಪೇಟೆ (ಬಿಎಸ್‌ಇ) ಸೂಚ್ಯಂಕ 117.65 ಪಾಯಿಂಟ್ಸ್‌ಗಳಷ್ಟು ಏರಿಕೆಯಾಗಿ 47,868.98ರಲ್ಲಿ ಮುಕ್ತಾಯವಾಯಿತು. ಇದು ಕೂಡ ಸಾರ್ವಕಾಲಿಕ ಸೂಚ್ಯಂಕ ಮುಕ್ತಾಯ ದಾಖಲೆಯೇ. ಮಧ್ಯಾಂತರದ ಅವಧಿಯಲ್ಲಿಬಿಎಸ್‌ಇ ಸೂಚ್ಯಂಕ 47, 980.36ರ ವರೆಗೆ ಏರಿಕೆಯಾಗಿತ್ತು. ಬಿಎಸ್‌ಇನಲ್ಲಿ ಐಟಿಸಿ ಷೇರುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ.
ಉಳಿದಂತೆ ಟಿಸಿಎಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಎಸ್ ಬಿಐ ಮತ್ತು ಏರ್‌ಟೆಲ್‌ಗಳು ಬೇಡಿಕೆ ಪಡೆದ ಇತರ ಕಂಪೆನಿಗಳು. ಡಿಸೆಂಬರ್‌ನಲ್ಲಿ ವಾಹನಗಳ ಮಾರಾಟ ಹೆಚ್ಚಾಗಿತ್ತು ಎಂಬ ವರದಿಗಳೂ ಕೂಡ ವಾಹನೋದ್ಯಮ ಕ್ಷೇತ್ರದ ಷೇರುಗಳಿಗೆ ಹೆಚ್ಚಿನ ಬೇಡಿಕೆಯನ್ನು ತಂದುಕೊಟ್ಟಿತು. ಇದರ ಜತೆಗೆ 1.15 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿರುವುದೂ ಮಾರುಕಟ್ಟೆ ಧನಾತ್ಮಕವಾಗಿ ಸ್ಪಂದಿಸಲು ಕಾರಣವಾಯಿತು.
ಗುರುವಾರಕ್ಕೆ ಮುಕ್ತಾಯವಾದಂತೆ 2020ರಲ್ಲಿ ಸೂಚ್ಯಂಕ ಶೇ.15.7, ನಿμr ಶೇ.14.9ರಷ್ಟು ಏರಿಕೆ ಕಂಡಿವೆ. ಜಗತ್ತಿನ ಇತರ ಭಾಗಗಳಲ್ಲಿ ಹೊಸ ವರ್ಷದ ನಿಮಿತ್ತ ಷೇರು ಮಾರುಕಟ್ಟೆಗಳಿಗೆ ರಜೆ ಇತ್ತು.
ಡಾಲರ್ ಎದುರು ಸ್ಥಿರ: ಷೇರು ಪೇಟೆ ಏರಿಕೆ ಕಂಡಿದ್ದರೂ ಅಮೆರಿಕದ ಡಾಲರ್ ಎದುರು ರೂಪಾಯಿ ವಹಿವಾಟು ಸ್ಥಿರವಾಗಿಯೇ ಇತ್ತು. ದಿನದ ಮುಕ್ತಾಯದಲ್ಲಿ ಡಾಲರ್ ಎದುರು 4 ಪೈಸೆಯಷ್ಟು ಕುಸಿತ ಅನುಭವಿಸಿದೆ. ಹಿಂದಿನ ಆರು ದಿನಗಳಲ್ಲಿ ಡಾಲರ್ ಎದುರು ಉತ್ತಮ ವಹಿವಾಟು ನಡೆಸಿತ್ತು. ಮತ್ತೂಂದೆಡೆ ದೇಶದ ವಿದೇಶಿ ವಿನಿಮಯ ನಿಧಿ ಡಿ.25ಕ್ಕೆ ಮುಕ್ತಾಯವಾದಂತೆ 580.841 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಕುಸಿದಿದೆ. ಡಿ.8ಕ್ಕೆ ಮುಕ್ತಾಯಗೊಂಡ ವಾರದಲ್ಲಿ 581.131 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿತ್ತು.