ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಭರ್ಜರಿ ವಹಿವಾಟಿನ ಪರಿಣಾಮ ಮಂಗಳವಾರ (ಸೆಪ್ಟೆಂಬರ್ 21) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 514 ಅಂಕಗಳಷ್ಟು ಭರ್ಜರಿ ಏರಿಕೆ ಕಂಡಿದ್ದು, ದಾಖಲೆಯ ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಸರ್ದಾರ್ಜಿ ಖಲಿಸ್ತಾನಿ,ನಾವು ಪಾಕಿಸ್ತಾನಿ,ಕೇವಲ ಬಿಜೆಪಿ ಮಾತ್ರ ಹಿಂದೂಸ್ತಾನಿ|ಮೆಹಬೂಬಾ ಮುಫ್ತಿ
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 514.34 ಅಂಕ ಏರಿಕೆಯಾಗಿದ್ದು, ಸಾರ್ವಕಾಲಿಕ ಗರಿಷ್ಠ ದಾಖಲೆಯ 59,005.27 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟನ್ನು ಕೊನೆಗೊಳಿಸಿದೆ. ಇದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 165.10 ಅಂಕ ಏರಿಕೆಯಾಗಿದ್ದು, 17,562 ಅಂಕಗಳ ಮಟ್ಟ ತಲುಪಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಬಜಾಜ್ ಫೈನಾನ್ಸ್, ಇಂಡಸ್ ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಐಟಿಸಿ, ಬಜಾಜ್ ಫಿನ್ ಸರ್ವ್, ಟೆಕ್ ಮಹೀಂದ್ರ ಮತ್ತು ಇನ್ಫೋಸಿಸ್ ಷೇರುಗಳು ಲಾಭಗಳಿಸಿದೆ.
ಮಾರುತಿ, ಬಜಾಜ್ ಆಟೋ, ನೆಸ್ಲೆ ಇಂಡಿಯಾ, ಪವರ್ ಗ್ರಿಡ್ ಮತ್ತು ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ. ಏಷ್ಯಾ ಖಂಡದ ಷೇರುಪೇಟೆ ವಹಿವಾಟು ಏರಿಕೆಯೊಂದಿಗೆ ಕೊನೆಗೊಂಡಿದೆ. ಚೀನಾ ಮತ್ತು ದಕ್ಷಿಣ ಕೊರಿಯಾ ಷೇರುಪೇಟೆಗೆ ರಜೆ.