ಮುಂಬಯಿ: ಜಾಗತಿಕ ಷೇರುಪೇಟೆಯ ಸಕಾರಾತ್ಮಕ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಮಂಗಳವಾರ(ಮಾರ್ಚ್ 30) 500 ಅಂಕ ಏರಿಕೆಯಾಗುವುದರೊಂದಿಗೆ ವಹಿವಾಟು ಆರಂಭಿಸಿದೆ.
ಇದನ್ನೂ ಓದಿ:ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆ ಗೆಲುವು: ಡಿ.ಕೆ.ಶಿವಕುಮಾರ್
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 510.31 ಅಂಕ ಏರಿಕೆಯಾಗಿದ್ದು, 49, 518.81 ಅಂಕಗಳ ವಹಿವಾಟು ನಡೆಸುತ್ತಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 162.70 ಅಂಕ ಏರಿಕೆಯಾಗಿದ್ದು, 14, 670ರ ಗಡಿ ತಲುಪಿದೆ.
ಸೆನ್ಸೆಕ್ಸ್ ಏರಿಕೆಯಿಂದ ಎಚ್ ಯುಎಲ್ ಷೇರುಗಳು ಹೆಚ್ಚಿನ ಲಾಭ ಗಳಿಸಿದ್ದು, ಇದರೊಂದಿಗೆ ಟೈಟಾನ್, ಎನ್ ಟಿಪಿಸಿ, ಒಎನ್ ಜಿಸಿ, ಡಾ.ರೆಡ್ಡೀಸ್, ನೆಸ್ಲೆ ಇಂಡಿಯಾ, ಪವರ್ ಗ್ರಿಡ್, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್ ಷೇರುಗಳು ಶೇ.3ರಷ್ಟು ಲಾಭ ಗಳಿಸಿವೆ. ಮತ್ತೊಂದೆಡೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಷೇರು ನಷ್ಟ ಅನುಭವಿಸಿದೆ.
ದೇಶಾದ್ಯಂತ ಸೋಮವಾರ(ಮಾರ್ಚ್ 29) ಹೋಳಿ ಹಬ್ಬದ ಹಿನ್ನೆಲೆಯಲ್ಲಿ ದೇಶೀಯ ಷೇರುಮಾರುಕಟ್ಟೆ ಬಂದ್ ಆಗಿತ್ತು. ಶುಕ್ರವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 568.38 ಅಂಕ ಏರಿಕೆಯಾಗಿ 49,008.50ಕ್ಕೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು.