ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಮಂಗಳವಾರದ ದಿನಾಂತ್ಯದ ವಹಿವಾಟಿನಲ್ಲಿ 80,397 ಅಂಕಗಳ ದಾಖಲೆ ಏರಿಕೆ ಕಂಡಿತ್ತು. ಆದರೆ ಬುಧವಾರ (ಜುಲೈ 10) ಬೆಳಗ್ಗಿನ ವಹಿವಾಟಿನಲ್ಲಿ 700ಕ್ಕೂ ಅಧಿಕ ಅಂಕಗಳ ಕುಸಿತ ಕಂಡಿದೆ.
ಇದನ್ನೂ ಓದಿ:ಬಿಡಿಎನಿಂದ ಒತ್ತುವರಿ ತೆರವು: 3.2 ಕೋಟಿ ರೂ. ನಿವೇಶನ ವಶಕ್ಕೆ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 800 ಅಂಕಗಳ ಕುಸಿತದೊಂದಿಗೆ 79,544 ಅಂಕಗಳ ಮಟ್ಟಕ್ಕೆ ಕುಸಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 250 ಅಂಕಗಳ ನಷ್ಟದೊಂದಿಗೆ 24,200 ಅಂಕಗಳಲ್ಲಿ ವಹಿವಾಟು ನಡೆಸಿದೆ.
ಹಿಂದೂಸ್ತಾನ್ ಕೋಪರ್ ಲಿಮಿಟೆಡ್, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್, ಕೋಲ್ ಇಂಡಿಯಾ, ಪವರ್ ಫೈನಾನ್ಸ್ ಕಾರ್ಪೋರೇಶನ್ ಲಿಮಿಟೆಡ್, GAIL ಲಿಮಿಟೆಡ್, ಮಹೀಂದ್ರಾ & ಮಹೀಂದ್ರಾ, ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ನಷ್ಟ ಕಂಡಿವೆ.
ರೈಲ್ ವಿಕಾಸ್ ನಿಗಮ್ ಲಿಮಿಟೆಡ್, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ವೋಡಾ ಫೋನ್ ಐಡಿಯಾ ಲಿಮಿಟೆಡ್, ಎನ್ ಎಚ್ ಪಿಸಿ ಲಿಮಿಟೆಡ್, ಭಾರತ್ ಎಲೆಕ್ಟ್ರಾನಿಕ್ಸ್, ಮಣಪ್ಪುರಂ ಫೈನಾನ್ಸ್ ಷೇರುಗಳು ಲಾಭಗಳಿಸಿದೆ.