ಮುಂಬೈ: ಜಾಗತಿಕ ಷೇರುಮಾರುಕಟ್ಟೆಯ ಪಾಸಿಟಿವ್ ಟ್ರೆಂಡ್ಸ್ ಹಾಗೂ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳದ ಪರಿಣಾಮ ಶುಕ್ರವಾರ (ಜೂ.30) ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟದ ದಾಖಲೆ ಬರೆದಿದೆ.
ಇದನ್ನೂ ಓದಿ:Shikhar Dhawan: ಮತ್ತೆ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಶಿಖರ್ ಧವನ್? ಏನಿದು ವರದಿ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ (BSE) ಆರಂಭಿಕ ವಹಿವಾಟಿನಲ್ಲಿ 499.42 ಅಂಕಗಳಷ್ಟು ಏರಿಕೆಯೊಂದಿಗೆ 64,414.84 ಅಂಕಗಳೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 136.1 ಅಂಕ ಏರಿಕೆಯೊಂದಿಗೆ 19,108.20 ಅಂಕಗಳ ಮಟ್ಟ ತಲುಪಿದೆ.
ಸಂವೇದಿ ಸೂಚ್ಯಂಕ, ನಿಫ್ಟಿಯ ಸಾರ್ವಕಾಲಿಕ ಏರಿಕೆಯಿಂದ ಪವರ್ ಗ್ರಿಡ್, ಇನ್ಫೋಸಿಸ್, ಏಷಿಯನ್ ಪೇಂಟ್ಸ್, ಮಹೀಂದ್ರ & ಮಹೀಂದ್ರಾ, ಎಚ್ ಸಿಎಲ್ ಟೆಕ್ನಾಲಜೀಸ್, ಇಂಡಸ್ ಇಂಡ್ ಬ್ಯಾಂಕ್, ಟೆಕ್ ಮಹೀಂದ್ರ, ಬಜಾಜ್ ಫೈನಾನ್ಸ್, ವಿಪ್ರೋ, ಟಿಸಿಎಸ್, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಟೈಟಾನ್ ಷೇರು ಲಾಭಗಳಿಸಿದೆ.
ಮತ್ತೊಂದೆಡೆ ಟಾಟಾ ಸ್ಟೀಲ್, ಭಾರ್ತಿ ಏರ್ ಟೆಲ್ ಷೇರು ನಷ್ಟ ಕಂಡಿದೆ. ಏಷ್ಯನ್ ಮಾರುಕಟ್ಟೆಗಳಾದ ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಷೇರುಪೇಟೆ ವಹಿವಾಟು ಏರಿಕೆ ಕಂಡಿದೆ. ಟೋಕಿಯೊ ಷೇರುಪೇಟೆ ಸಂವೇದಿ ಸೂಚ್ಯಂಕ ಇಳಿಕೆಯೊಂದಿಗೆ ವಹಿವಾಟು ನಡೆದಿದೆ.