ಮುಂಬೈ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ಶುಕ್ರವಾರ (ಆಗಸ್ಟ್ 13) 593.31 ಅಂಕ ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ ದಾಖಲೆ ಮಟ್ಟವನ್ನು ತಲುಪಿದ್ದು, 55,437 ಅಂಕದಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಶಿರಸಿಯಲ್ಲಿ ವಿಶಿಷ್ಟ ನಾಗರ ಪಂಚಮಿ | ಕಾಡಿನ ನಿಜ ನಾಗರ ಹಾವಿಗೆ ಹಾಲೆರದು ಪೂಜೆ…!
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ಇಂದು 593.31 ಅಂಕ ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ 55,437.29 ಅಂಕಗಳ ಮಟ್ಟವನ್ನು ತಲುಪಿದೆ. ಇದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 164.70 ಅಂಕ ಏರಿಕೆ ಆಗಿದ್ದು, ದಾಖಲೆಯ 16,529.10 ಅಂಕದಲ್ಲಿ ಕೊನೆಗೊಂಡಿದೆ.
ಕಳೆದ ಎರಡು ದಿನಗಳಿಂದ ಐಟಿ, ಮೆಟಲ್, ಎಫ್ ಎಂಸಿಜಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಷೇರುಗಳು ಏರಿಕೆ ಮತ್ತು ಖರೀದಿ ಪ್ರಕ್ರಿಯೆ ಪರಿಣಾಮ ಷೇರುಪೇಟೆ ದಾಖಲೆ ವಹಿವಾಟಿಗೆ ಸಾಕ್ಷಿಯಾಗಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಟಿಸಿಪಿ, ಟಿಸಿಎಸ್, ಎಲ್ ಆ್ಯಂಡ್ ಟಿ, ಭಾರ್ತಿ ಏರ್ ಟೆಲ್ ಮತ್ತು ಎಚ್ ಸಿಎಲ್ ಟೆಕ್ನಾಲಜೀಸ್ ಷೇರುಗಳು ಲಾಭಗಳಿಸಿದೆ. ಡಾ.ರೆಡ್ಡೀಸ್ ಲ್ಯಾಬ್, ಸಿಪ್ಲಾ, ಪವರ್ ಗ್ರಿಡ್ ಮತ್ತು ಬ್ರಿಟಾನಿಯಾ ಇಂಡಸ್ಟ್ರೀಸ್ ಷೇರುಗಳು ನಷ್ಟ ಕಂಡಿದೆ.