ಮುಂಬೈ: ವಿದೇಶಿ ಬಂಡವಾಳ ನಿರಂತರ ಒಳಹರಿವು ಮುಂದುವರಿದ ಪರಿಣಾಮ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ವಹಿವಾಟು ಮಂಗಳವಾರವೂ (ಮೇ 30) ಏರಿಕೆಯೊಂದಿಗೆ ಮುಂದುವರಿದಿದೆ.
ಇದನ್ನೂ ಓದಿ:Ira Khan: ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ಆಮಿರ್ ಪುತ್ರಿ; ಫ್ಯಾನ್ಸ್ ಖುಷ್
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 131.32 ಅಂಕಗಳಷ್ಟು ಏರಿಕೆಯೊಂದಿಗೆ 62,977 ಅಂಕಗಳ ಮಟ್ಟ ತಲುಪಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 49.6 ಅಂಕಗಳ ಜಿಗಿತದೊಂದಿಗೆ 18, 648.25 ಅಂಕಗಳ ಮಟ್ಟ ತಲುಪಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯ ಪರಿಣಾಮ ಐಟಿಸಿ, ಆಲ್ಟ್ರಾಟೆಕ್ ಸಿಮೆಂಟ್, ಕೋಟಕ್ ಮಹೀಂದ್ರ ಬ್ಯಾಂಕ್, ಎಚ್ ಸಿಎಲ್ ಟೆಕ್ನಾಲಜೀಸ್, ಎನ್ ಟಿಪಿಸಿ, ಟೈಟಾನ್, ಭಾರ್ತಿ ಏರ್ ಟೆಲ್, ಬಜಾಜ್ ಫೈನಾನ್ಸ್, ಎಲ್ & ಟಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭ ಗಳಿಸಿವೆ.
ಮತ್ತೊಂದೆಡೆ ನೆಸ್ಲೆ, ಟಾಟಾ ಸ್ಟೀಲ್, ಎಚ್ ಡಿಎಫ್ ಸಿ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳ ಮೌಲ್ಯ ಇಳಿಕೆಯಾಗಿದೆ.