ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆಯಲ್ಲಿ ಗುರುವಾರ (ಮೇ 27) ಸಂವೇದಿ ಸೂಚ್ಯಂಕ ಕೇವಲ 98 ಅಂಕಗಳಷ್ಟು ಏರಿಕೆ ಕಂಡು ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:1 ಲಕ್ಷ ರೂ.ಸಂಬಳ ಇದೆ, ನಿಮ್ಮ ಮಗಳನ್ನ ನನಗೆ ಕೊಡಿ: ಶಾರುಖ್ ಪುತ್ರಿಗೆ ಮದುವೆ ಪ್ರಪೋಸಲ್
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 97.70 ಅಂಕಗಳ ಏರಿಕೆಯೊಂದಿಗೆ 51,115.22 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಎನ್ ಎಸ್ ಇ ನಿಫ್ಟಿ ಕೂಡಾ 36.40 ಅಂಕಗಳ ಏರಿಕೆಯೊಂದಿಗೆ 15,337.85ರ ಗಡಿ ದಾಟಿದೆ.
ಸೆನ್ಸೆಕ್ಸ್ ಏರಿಕೆಯಿಂದ ಎಸ್ ಬಿಐ, ಕೋಟಕ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಆಟೋ, ಟೆಕ್ ಮಹೀಂದ್ರಾ, ಆಲ್ಟ್ರಾ ಟೆಕ್ ಸಿಮೆಂಟ್ ಮತ್ತು ಪವರ್ ಗ್ರಿಡ್ ಷೇರುಗಳು ಲಾಭಗಳಿಸಿದೆ.
ಮತ್ತೊಂದೆಡೆ ಎಚ್ ಡಿಎಫ್ ಸಿ, ಬಜಾಜ್ ಫೈನಾನ್ಸ್, ಒಎನ್ ಜಿಸಿ ಮತ್ತು ಭಾರ್ತಿ ಏರ್ ಟೆಲ್ ಷೇರುಗಳು ನಷ್ಟ ಅನುಭವಿಸಿದೆ. ಹಾಂಗ್ ಕಾಂಗ್, ಸಿಯೋಲ್ ಮತ್ತು ಟೋಕಿಯೊ ಷೇರುಮಾರುಕಟ್ಟೆಯಲ್ಲಿ ನೆಗೆಟಿವ್ ಟ್ರೆಂಡ್ ಇದ್ದು, ಶಾಂಘೈ ಷೇರುಪೇಟೆ ಲಾಭದ ವಹಿವಾಟು ನಡೆಸಿದೆ.