ಮುಂಬೈ: ಜಾಗತಿಕ ಷೇರುಪೇಟೆಯ ದುರ್ಬಲ ವಹಿವಾಟು ಮತ್ತು ಅಮೆರಿಕದ ಹಣದುಬ್ಬರದ ಕಳವಳದ ನಡುವೆ ಬುಧವಾರ (ಫೆ.14) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 600ಕ್ಕೂ ಅಧಿಕ ಅಂಕಗಳ ಕುಸಿತದೊಂದಿಗೆ ಆರಂಭಿಕ ವಹಿವಾಟು ನಡೆದಿದೆ.
ಇದನ್ನೂ ಓದಿ:“ನನ್ನದು ತುಂಬಾ ದೊಡ್ಡದು,ಅವನಿಗಿಂತ ನಿನ್ನದು ಚಿಕ್ಕದು..” ಉಪ್ಪಿ ʼUI’ ʼಚೀಪ್ʼ ಪ್ರೋಮೊ ಔಟ್
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 675.79 ಅಂಕಗಳಷ್ಟು ಕುಸಿತದೊಂದಿಗೆ 70,879.40 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 187.85 ಅಂಕಗಳಷ್ಟು ಇಳಿಕೆಯಾಗಿದ್ದು, 21,555.40 ಅಂಕಗಳಲ್ಲಿ ವಹಿವಾಟು ನಡೆದಿದೆ.
ಸೂಚ್ಯಂಕ ಕುಸಿತದಿಂದಾಗಿ ಇನ್ಫೋಸಿಸ್, ಟೆಕ್ ಮಹೀಂದ್ರ, ವಿಪ್ರೋ, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಟಿಸಿಎಸ್ ಸೇರಿದಂತೆ ಹಲವು ಪ್ರಮುಖ ಷೇರುಗಳು ನಷ್ಟ ಕಂಡಿವೆ.
ಏಷ್ಯನ್ ಷೇರು ಮಾರುಕಟ್ಟೆಯಲ್ಲಿಯೂ ಮಿಶ್ರ ವಹಿವಾಟು ಮುಂದುವರಿದಿದೆ. ಜಪಾನ್ ಮತ್ತು ಹಾಂಗ್ ಕಾಂಗ್ ಷೇರುಪೇಟೆಯ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ ಇಳಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.